ಗದಗ ನಗರದ ಕಾಟನ್​ ಸೇಲ್​ ಸೋಸೈಟಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆ.ಎಚ್​. ಪಾಟೀಲ ಅವರ 101ನೇ ಜನ್ಮದಿನಾಚರಣೆ ಹಾಗೂ ಅವರ ಒಡನಾಡಿಗಳ ಸನ್ಮಾನ ಸಮಾರಂಭವನ್ನು ಕೆ. ಜೆ. ಜಾರ್ಜ ಉದ್ಘಾಟಿಸಿದರು. ಎಚ್​.ಕೆ. ಪಾಟೀಲ, ದಿನೇಶ ಗುಂಡೂರುರಾವ, ಈಶ್ವರ ಖಂಡ್ರೆ, ಜಿ.ಎಸ್​. ಪಾಟೀಲ, ಪ್ರಭಾಕರ ಕೋರೆ, ಯು.ಬಿ. ಬಣಕಾರ ಇತರರು ಇದ್ದರು.  
ರಾಜ್ಯ

ಕೆ.ಎಚ್​. ಪಾಟೀಲರ ದೂರದೃಷ್ಟಿ ಇಂದಿಗೂ ಮಾದರಿ: ಕೆ.ಜೆ. ಜಾರ್ಜ್​

ಶಿವಾನಂದ ಹಿರೇಮಠ
 ಅದ್ಧೂರಿಯಾಗಿ ಜರುಗಿದ ಕೆ.ಎಚ್​. ಪಾಟೀಲ 101ನೇ ಜನ್ಮ ಶತಮಾನೋತ್ಸವ ಸಂಭ್ರಮ 
 ಕಾರ್ಯಕ್ರಮದಲ್ಲಿ ಕೆ.ಎಚ್​. ಪಾಟೀಲ ಜನಸೇವೆಗಳ ಸ್ಮರಣೆ
ವಿಜಯವಾಣಿ ಸುದ್ದಿಜಾಲ ಗದಗ 
ನಗರದ ಕಾಟನ್​ ಸೇಲ್​ ಸೊಸೈಟಿಯಲ್ಲಿ ಸೋಮವಾರ ಕೆ.ಎಚ್​. ಪಾಟೀಲ 101ನೇ ಜನ್ಮ ಶತಮಾನೋತ್ಸವ ಸಂಭ್ರಮ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಕೆ.ಎಚ್​. ಪಾಟೀಲ ಅವರ ಜನಸೇವೆ, ಸಾಧನೆ ಮತ್ತು ರೈತಪರ ಯೋಜನೆಗಳನ್ನು ಸಚಿವರು ಶಾಸಕರು ಮೆಲಕು ಹಾಕಿದರು. 
ಸಹಕಾರ ಕ್ಷೇತ್ರದಲ್ಲಿ ಕೆ.ಎಚ್​. ಪಾಟೀಲ ಅವರು ಅನುಷ್ಠಾನ ಮಾಡಿದ ಯೋಜನೆಗಳನ್ನು ಸ್ಮರಿಸಿದ ಜನಪ್ರತಿನಿದಿಗಳು, ರೈತ ಉತ್ಪನ್ನಗಳಲ್ಲಿ ರೈತರಿಗೇ ಅತ್ಯಧಿಕ ಲಾಭಾಂಶ ಸಿಗಬೇಕು ಎಂಬ ಧೋರಣೆ, ಇಚ್ಚಾಶಕ್ತಿಯನ್ನು ಕೆ.ಎಚ್​. ಪಾಟೀಲ ಅವರು ಹೊಂದಿದ್ದನ್ನು ಜನಪ್ರತಿನಿಧಿಗಳು ವ್ಯಾಖ್ಯಾನಿಸಿದರು. ಅರಣ್ಯ ಸಚಿವರಾಗಿದ್ದ ಕೆ.ಎಚ್​. ಪಾಟೀಲ ಅರಣ್ಯ ಕ್ಷೇತ್ರವನ್ನು ರಸಲು ತೆಳೆದ ಗಟ್ಟಿ ನಿಲುವುಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಪುನರುಚ್ಚರಿಸಿದರು. ಆರೋಗ್ಯ ಕ್ಷೇತ್ರ ಅದರಲ್ಲೂ ಗ್ರಾಮೀಣ ಭಾಗದ ಜನರ ಆರೋಗ್ಯದ ಕಾಳಜಿ ಬಗ್ಗೆ ಕೆ.ಎಚ್​. ಪಾಟೀಲರಿಗೆ ಇದ್ಧ ಒಲವನ್ನು ಆರೋಗ್ಯ ಸಚಿವ ದಿನೇಶ ಗುಂಡೂರಾವ್​ ಸ್ಮರಿಸಿದರು. 
ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್​ ಮಾತನಾಡಿ, ದಿವಂಗತ ಕೆ.ಎಚ್​. ಪಾಟೀಲ ಅವರ ದೂರದೃಷ್ಟಿ ಮತ್ತು ಸಹಕಾರ ಚಳವಳಿಗೆ ನೀಡಿದ ಕೊಡುಗೆ ಇಂದಿಗೂ ಸಮಾಜಕ್ಕೆ ಮಾದರಿಯಾಗಿದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಕೆ.ಎಚ್​. ಪಾಟೀಲರು ಜನಪರ ನಾಯಕತ್ವದಿಂದ ಗುರುತಿಸಿಕೊಂಡಿದ್ದರು. ಅವರು ಸ್ಥಾಪಿಸಿದ ಸಂಸ್ಥೆಗಳು ಮತ್ತು ಸಹಕಾರಿ ಚಳವಳಿ ಇಂದಿಗೂ ಜನರಿಗೆ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು.
ಕೆ.ಎಚ್​. ಪಾಟೀಲರು ಅಧಿಕಾರಕ್ಕಾಗಿ ರಾಜಕೀಯ ಮಾಡಿದವರಲ್ಲ. ತತ್ವನಿಷ್ಠೆ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ರಾಜಕೀಯ ನಡೆಸಿದ ಧೀಮಂತ ನಾಯಕರು. ಅವರಂತಹ ನಾಯಕರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ. ಇಂದಿನ ಕಾಲದಲ್ಲಿ ಸಂಸ್ಥೆಗಳನ್ನು ನಿಮಿರ್ಸುವುದು ಸುಲಭವಾದರೂ ಅವುಗಳನ್ನು ಉಳಿಸಿಕೊಂಡು ನಡೆಸುವುದು ಕಷ್ಟಕರವಾಗಿದೆ. ಆದರೆ ಕೆ.ಎಚ್​. ಪಾಟೀಲರು ಕಟ್ಟಿದ ಸಂಸ್ಥೆಗಳನ್ನು ಉಳಿಸಿಕೊಂಡು ಬೆಳೆಸುವ ಕೆಲಸವನ್ನು ಎಚ್​.ಕೆ. ಪಾಟೀಲ ಸೇರಿದಂತೆ ಹಲವು ನಾಯಕರು ಮಾಡುತ್ತಿರುವುದು ಶ್ಲಾನೀಯ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜನರ ಆಥಿರ್ಕ ಶಕ್ತಿಯನ್ನು ಹೆಚ್ಚಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಆಥಿರ್ಕ ಶಕ್ತಿ ನೀಡುವಲ್ಲಿ ಈ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ದೇಶದಲ್ಲಿ ಆಹಾರ ಕೊರತೆ ಇಲ್ಲ. ದೇಶಕ್ಕೆ ರೈತರು ಸಮರ್ಪಕವಾಗಿ ಆಹಾರ ಪೂರೈಸುತ್ತಿದ್ದಾರೆ. ರೈತರ ಹಿತಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ರೈತರಿಗೆ ನಿರಂತರ ವಿದ್ಯುತ್​ ಸರಬರಾಜು ನೀಡುವ ಮೂಲಕ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೆ.ಎಚ್​. ಪಾಟೀಲರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಗದಗ ಜಿಲ್ಲೆಯ ಜನರು ಮತ್ತು ನಾಯಕರು ತೋರಿಸುತ್ತಿರುವ ಬದ್ಧತೆ ಶ್ಲಾನೀಯ ಎಂದು ಜಾರ್ಜ್​ ಹೇಳಿದರು. 
ಕಾನೂನು ಸಚಿವ ಎಚ್​.ಕೆ. ಪಾಟೀಲ, ರೈತರ ಉತ್ಪನ್ನದಲ್ಲಿ ಹೆಚ್ಚಿನ ಲಾಭ ರೈತರಿಗೆ ಸಿಗಬೇಕು ಎಂಬುದು ತಂದೆಯವರಾದ ಕೆ.ಎಚ್​. ಪಾಟೀಲ ಅವರ ಇಚ್ಚೇ ಆಗಿತ್ತು. ಹತ್ತಿ ಬೆಳೆಗಾರರ ಶೇಯೋಭಿವೃದ್ಧಿಗೆ ಕಾಟನ್​ ಸೇಲ್​ ಸೊಸೈಟಿ ಆರಂಭಿಸಿದರು. ಬಡವರ, ಮಧ್ಯಮ ವರ್ಗದ ಜನರ ಆರೋಗ್ಯದ ಕಾಳಿಜಿಯನ್ನೂ ಅವರು ಹೊಂದಿದ್ದರು. ಅವರ ಇಚ್ಚಾಶಕ್ತಿಯಂತೆ ಹುಲಕೋಟಿಯ ಕೆ.ಎಚ್​. ಪಾಟೀಲ್​ ಆಸ್ಪತ್ರೆಯಲ್ಲಿ ನಾಲ್ಕು ಮಹತ್ವದ ಉಚಿತ ಆರೋಗ್ಯ ಸೇವೆಗಳನ್ನು ಜಾರಿ ತಂದಿದ್ದೇವೆ ಎಂದರು. 
ಆಸ್ಪತ್ರೆಯಲ್ಲಿ ಪ್ರಸಕ್ತ ವರ್ಷ 100 ಉಚಿತ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ, 12 ಉಚಿತ ಕಿಡ್ನಿ ಪ್ರತಿರೋಪಣ (ಟ್ರಾನ್ಸ್​ಪ್ಲಾಂಟ್​), 1000 ಉಚಿತ ಮೋತಿ ಬಿಂದು (ಕ್ಯಾಟರಾಕ್ಟ್​) ಶಸ್ತ್ರಚಿಕಿತ್ಸೆ ಹಾಗೂ ಹೆಣ್ಣು ಮಗು ಜನಿಸಿದರೆ ವೆಚ್ಚವನ್ನು ಉಚಿತವಾಗಿ ನೀಡುವ ವಿಶೇಷ ಯೋಜನೆ ಜಾರಿಗೆ ತಂದಿದ್ದೇವೆ ಎಂದರು. 
ಕೆ.ಎಚ್​. ಪಾಟೀಲ ಜಿಲ್ಲಾ ಆಸ್ಪತ್ರೆಗಳಿಗೆ ಬರುವ ಹೊರರೋಗಿಗಳು ಹಾಗೂ ಅವರ ಜೊತೆಯಲ್ಲಿ ಬರುವವರಿಗೆ ಬುತ್ತಿಯ ಆಲಯ ಆರಂಭಿಸುವ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಈ ಯೋಜನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಚಾಲನೆ ನೀಡಿದ್ದಾರೆ ಎಂದರು.  
ಆರೋಗ್ಯ ಸಚಿವ ದಿನೇಶ ಗುಂಡೂರಾವ, ಮಾಜಿ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಜಿ.ಎಸ್​. ಪಾಟೀಲ, ಎ್​ಕೆಸಿಸಿಐ ಅಧ್ಯೆ ಉಮಾ ರೆಡ್ಡಿ, ಎ. ಎಂ. ಹಿಂಡಸಗೇರಿ, ಐ.ಜಿ. ಸನದಿ, ಯು.ಬಿ. ಬಣಕಾರ, ಬಿ.ಆರ್​. ಯಾವಗಲ್ಲ, ಜಿ.ಎಸ್​. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಡಿ.ಆರ್​. ಪಾಟೀಲ, ಆನಂದ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಇತರರು ಇದ್ದರು.
ಇಂಧಿರಾ ನೆನಪು:
ಗದಗ ನಗರದಲ್ಲಿ ಕೆ.ಎಚ್​. ಪಾಟೀಲ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಗೋಲ್ಡನ್​ ಜುಬ್ಲಿ ಕಾರ್ಯಕ್ರಮದಲ್ಲಿ ಇಂಧಿರಾ ಗಾಂಧಿ ಬರುವುದನ್ನು ತಪ್ಪಿಸಲು ಅಂದಿನ ಹಲವು ಕಾಂಗ್ರೆಸ್​ ಮುಖಂಡರು ಪಿತೂರಿ ನಡೆಸಿದ್ದರು. ಬಾಗಲಕೋಟೆಯಿಂದ ಗದಗ ನಗರಕ್ಕೆ ಆಗಮಿಸಲು ರಸ್ತೆ ಸರಿಯಿಲ್ಲ. ಹಾಗಾಗಿ ಭದ್ರತೆ ದೃಷ್ಟಿಯಿಂದ ಕರ್ನಾಟಕ(ಗದಗ) ಬರುವುದು ಬೇಡ ಎಂದು ಅಂದಿನ ಮುಖ್ಯಮಂತ್ರಿಗಳಿಂದ ಇಂಧಿರಾ ಅವರಿಗೆ ಪತ್ರ ಬರೆಸಲಾಗಿತ್ತು. ಆದರೆ, ಇಂಧಿರಾ ಅವರು "ಪರವಾಗಿಲ್ಲ ನಾನು ರೈಲ್ವೆ ಮೂಲಕ ಬರುತ್ತೇನೆ ಎಂದು ಮರಳಿ ಉತ್ತರಿಸಿದ್ದರು. ತದನಂತರವೂ ವಾಸ್ತವ್ಯ ಹೂಡಲು ಪ್ರವಾಸಿ ಮಂದಿರ ದುಸ್ಥಿತಿಯಲ್ಲಿದೆ. ಹಾಗಾಗಿ ಗದಗ ನಗರಕ್ಕೆ ಬರುವುದು ಬೇಡ ಎಂದು ಮತ್ತೊಮ್ಮೆ ಪತ್ರ ಬರೆದಿದ್ದರು. ಇಂಧಿರಾ ಅವರು " ನಾನು ರೈಲು ಭೋಗಿಯಲ್ಲೇ ತಂಗುತ್ತೇವೆ' ಎಂದು ಮರಳಿ ಉತ್ತರಿಸಿ ಗದಗ ನಗರಕ್ಕೆ ರೈಲ್ವೆ ಮೂಲಕ ಬಂದಿದ್ದರು. ಹಾಗೂ ರೈಲ್ವೆ ಭೋಗಿಯಲ್ಲಿ ತಂಗಿದ್ದು, ಬೆಳಗ್ಗೆ 8 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇಂಧಿರಾ ಗಾಂಧಿ ಅವರಿಗೆ ಕೆ.ಎಚ್​. ಪಾಟೀಲ ಅವರ ಮೇರು ವ್ಯಕ್ತಿತ್ವದ ಬಗ್ಗೆ ತಿಳಿದಿತ್ತು.  ಅದಕ್ಕಾಗಿ ಗದಗ ನಗರದ ಕಾರ್ಯಕ್ರಮವನ್ನು ತಪ್ಪಿಸದೇ ಹಾಜರಾಗಿದ್ದರು ಎಂದು ಡಿ.ಆರ್​. ಪಾಟೀಲ ತಪ್ಪ ಭಾಷಣದ ವೇಳೆ ನೆನಪುಗಳನ್ನು ಸ್ಮರಿಸಿದರು.  
ದೂರದೃಷ್ಟಿ ಇಂದಿಗೂ ಪ್ರಸ್ತುತ:
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕೆ.ಎಚ್​. ಪಾಟೀಲರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಅರಣ್ಯ ಭೂಮಿ ರಸುವ ಕುರಿತಾಗಿ ಹಲವು ಸಾವಾಲುಗಳು ಎದುರಾಗಿದ್ದವು. ಆದರೆ, ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದೇ ಅರಣ್ಯ ರಕ್ಷಣೆಯೇ ಮೊದಲ ಆಧ್ಯತೆ ಎಂಬಂತೆ ಸೇವೆ ಸಲ್ಲಿಸಿದ ಕೀತಿರ್ ಕೆ.ಎಚ್​. ಪಾಟೀಲ ಅವರಿಗೆ ಸಲ್ಲುತ್ತದೆ. ಅಂದು ಅವರು ತಂದ ಹಲವು ಕಾನೂನುಗಳಿಂದ ಇಂದು ಸಾವಿರಾರು ಎಕೆರೆ ಅರಣ್ಯ ಭೂಮಿ ರಸಲು ಸಹಾಯವಾಗಿದೆ. ಅವರ ದೂರದೃಷ್ಟಿ ಯೋಜನೆಗಳು ಇಂದಿಗೂ ಪ್ರಸ್ತುತ ಎಂದು ಈಶ್ವರ ಖಂಡ್ರೆ ಹೇಳಿದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಭಾಕರ ಕೋರೆ ಅವರಿಗೆ ಕೆ.ಎಚ್​. ಪಾಟೀಲ್​ ಪ್ರಶಸ್ತಿ, 5 ಲಕ್ಷ ರೂ. ಪ್ರಶಸ್ತಿ ಮೊತ್ತ ನೀಡಿ ಸನ್ಮಾನಿಸಲಾಯಿತು. ಇದೆ ವೇಳೆ ಕೆ.ಎಚ್​. ಪಾಟೀಲ್​ ಅವರೊಂದಿಗೆ ಒಡನಾಡಿಗಳಾಗಿದ್ದ 101 ಜನರನ್ನು, ಕುಟುಂಬ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.