ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಜುಕ್ತಿ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮ ಕುರಿತು ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಎಸ್​.ಎಂ. ಮಾರನಬಸರಿ, ಎಸ್​.ಡಿ. ಪಾಟೀಲ, ಶರಣಬಸವ ಎಸ್​. ಗುಡಿಮನಿ, ಶಿವಾನಂದಯ್ಯ ಹಿರೇಮಠ, ಚಂದ್ರು ಬಾಳಿಹಳ್ಳಿಮಠ ಇತರರು ಇದ್ದರು.  
ರಾಜ್ಯ

ವೀರಶೈವ ಧರ್ಮ ಪೀಠದ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಪ್ರಥಮವಾಗಿ ವೀರಶೈವ ಧರ್ಮಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಜುಕ್ತಿಹಿರೇಮಠದ 50ನೇ ವರ್ಷದ ರಥೋತ್ಸವದ ನಿಮಿತ್ಯ ನೂತನವಾಗಿ ತಯಾರಿಸಲಾದ ರಥ ಲೋಕಾರ್ಪಣೆಯ ಧರ್ಮ ಸಮಾರಂಭ ಮೇ.6 ರಿಂದ 10ರವರೆಗೆ ನಡೆಯಲಿದೆ ಎಂದು ಜುಕ್ತಿಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಕ್ತಿ ಹಿರೇಮಠ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಭವ್ಯ ಸಮಾರಂಭದಲ್ಲಿ ಆರೋಗ್ಯ ಸಂವರ್ಧನೆ, ಉಚಿತ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಕೃಷಿ ಮಹಿಳಾ ಜಾಗೃತಿ, ಉಡಿತುಂಬುವ ಕಾರ್ಯಕ್ರಮ, ಯುವ ಜಾಗೃತಿ ಮತ್ತು ಹಿರಿಯ ನಾಗರಿಕರ ಸಂರಣಾ ಸಮಾವೇಶಗಳು ಆಯೋಜನೆಗೊಂಡಿದೆ ಎಂದರು.
ಸೂಡಿ ಗ್ರಾಮದ ಮಾನವ ಧರ್ಮ ಮಂಟಪದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವು ಮೆ. 6ರಂದು ಚಾಲನೆಗೊಳ್ಳಲಿದೆ. ಬೆಳಗ್ಗೆ 10.30ಕ್ಕೆ ಆರೋಗ್ಯ ಸಂವರ್ಧನ ಸಮಾರಂಭ ನೆರವೇರಲಿದೆ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಣ್ಣಿನ ಹಾಗೂ ಆರೋಗ್ಯದ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ನೆರವೇರಲಿದೆ. ಮಾಜಿ ಶಾಸಕ ಡಿ. ಆರ್​ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ವಿಜಯಲಕ್ಷಿ$್ಮ ಬಾಳೆಕುಂದ್ರಿ ಅವರು ಆಹಾರ ಆರೋಗ್ಯ ಆಧ್ಯಾತ್ಮ ಕುರಿತು ಉಪನ್ಯಾಸ ನೀಡುವರು. ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ, ಬೆಳಗಾವಿಯ ಕೆಎಲ್​ಇ ಸಂಸ್ತೆಯ ನಿರ್ದೇಶಕ ವೈ.ಎಸ್​. ಪಾಟೀಲ, ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ, ಎಚ್​. ಡಿ. ಪಾಟೀಲ ಉಪಸ್ಥಿತಿ ಇರುವರು.
ಮೇ 7ರಂದು ಗುರುವಾರವಾರ ಕೃಷಿ ಋಷಿಯ ನೆನಹು ಶೀಷಿರ್ಕೆ ಅಡಿಯಲ್ಲಿ ಇಡೀ ದಿನ ವಿಶೇಷ ಕಾರ್ಯಕ್ರಮ ನೆರವೇರಲಿದೆ. ರೋಣ ಶಾಸಕ ಜಿ. ಎಸ್​. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರೇ ವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಸಿ.ಸಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಶಂಕ್ರಣ್ಣ ಮನವಳ್ಳಿ, ಶಿವರುದ್ರಯ್ಯ ವೀರಯ್ಯ ಕುಲಕಣಿರ್, ಎಸ್​.ಎಂ. ಮಾರನಬಸರಿ ಸೇರಿ ಇತರರು ಆಗಮಿಸಲಿದ್ದಾರೆ ಎಂದರು.
ಮೆ. 8 ರಂದು ಶುಕ್ರವಾರ ಮಹಿಳಾ ಜಾಗೃತಿ ಸಮಾರಂಭ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಚಿವೆ ಲಕ್ಷಿ$್ಮ ಹೆಬ್ಬಾಳಕರ ಉಪಸ್ಥಿತಿ ಇರುವರು. ಚಿಂತಕಿ ಬಿ. ವಿ. ಆರತಿ ಮಹಿಳೆ ಮತ್ತು ಭಾರತೀಯ ಸಂಸತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ನಂತರ ಪಿಎಚ್​ಡಿ ಪದವಿ ಪಡೆದ ವಿದ್ಯಾಥಿರ್ಗಳಿಗೆ ಗುರುರೆ ನೀಡಲಾಗುವುದು ಎಂದರು.
ಮೆ. 9ರಂದು ಶನಿವಾರ ಬೆಳಗ್ಗೆ 10.30 ಕ್ಕೆ ಯುವ ಜಾಗೃತಿ ಮತ್ತು ಹಿರಿಯ ನಾಗರಿಕ ಸಂರಣಾ ಸಮಾವೇಶ ಆಯೋಜನೆಗೊಂಡಿದೆ. ನರಸಾಪುರ ಹಿರೇಮಠದ ಮರುಳ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಿಕಾರಿಪುರದ ಶಾಸಕ ಮತ್ತು ಬಿಜೆಪಿ ಬಿ. ವೈ. ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ರಾಜ್ಯ ಹಿರಿಯ ನಾಗರಿಕರ ಸಂದ ಅಧ್ಯ ಬಿ.ಎ. ಪಾಟೀಲ್​ ವಿಶೇಷ ಉಪನ್ಯಾಸ ನೀಡುವರು. ಮೇ 10 ರಂದು ರವಿವಾರ ಬೆಳಿಗ್ಗೆ 9 ಗಂಟೆಗೆ ಶ್ರೀಮದ್​ ರಂಭಾಪುರಿ, ಉಜ್ಜಯಿನಿ, ಕಾಶಿ, ಶ್ರಿಶೈಲ ಜಗದ್ಗರುಗಳು ಗ್ರಾಮಕ್ಕೆ ಆಗಮಿಸಲಿದ್ದು, ಈ ಎಲ್ಲ ಪಂಚಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಲಿದೆ. ನಂತರ ನಡೆಯಲಿರುವ ಧರ್ಮಸಭೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ದಾನಿಗಳ ನಾಮಲಕ ಅನಾವರಣಗೊಳಿಸುವರು.ಕಾರ್ಯಕ್ರಮದಲ್ಲಿ ಹೊನ್ನ ತೇರು ಗ್ರಂಥವನ್ನು ಸಂಸದ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡುವರು. ನೂತನವಾಗಿ ನಿಮಿರ್ಸಿರುವ ರಥವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯ ಶಂಕರ ಮಹದೇವ ಬಿದರಿ ಅವರು ಉದ್ಘಾಟಿಸುವರು ಎಂದು ಶ್ರೀಗಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯ ಎಸ್​.ಎಂ. ಮಾರನಬಸರಿ, ಅಧ್ಯ ಎಸ್​.ಡಿ. ಪಾಟೀಲ, ಕಾರ್ಯಾಧ್ಯ ಶರಣಬಸವ ಎಸ್​. ಗುಡಿಮನಿ, ಶಿವಾನಂದಯ್ಯ ಹಿರೇಮಠ, ಚಂದ್ರು ಬಾಳಿಹಳ್ಳಿಮಠ ಇತರರು ಇದ್ದರು.
ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ
ಗದಗ: ಸಮಾಜದಲ್ಲಿ ವಿಶಿಷ್ಟ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ, ಅವರಿಗೆ ಶ್ರೀಮಠದಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮೇ.6 ರಂದು ಧಾರವಾಡದ ವೈದ್ಯ ಡಾ.ಎಸ್​.ಆರ್​. ರಾಮನಗೌಡರ ಅವರಿಗೆ ವೈದ್ಯ ರತ್ನಾಕರ ಪ್ರಶಸ್ತಿ, ಮೆ.8 ರಂದು ಶುಕ್ರವಾರ ಸುವರ್ಣ ಕನ್ನಡಿಗ&2026 ಪ್ರಶಸ್ತಿ ಪುರಸತ ಡಾ. ಜ್ಯೋತಿ ತೆಗ್ಗಿನಮಠ ಅವರಿಗೆ ಸಾಧನೆಯ ಸಹ್ಯಾದ್ರಿ ಪ್ರಶಸ್ತಿ, ಮೆ.10 ರಂದು ರವಿವಾರ ಧಾರವಾಡದ ಭಾಷಾ ವಿಜ್ಞಾನಿ ಪ್ರೊ. ಸಂಗಮೇಶ ಸವದತ್ತಿಮಠ ಅವರಿಗೆ ಭಾಷಾ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಕೋಟ್​
ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಕನಿಷ್ಟ ಹತ್ತು ಸಾವಿರ ಜನ ಭಕ್ತರಿಗೆ ಪ್ರಸಾದ, ಕೊನೆಯ ದಿನ ಅಂದರೆ ಅಡ್ಡಪಲ್ಲಕ್ಕಿ ಮಹೋತ್ಸವ ದಿನ 25 ಸಾವಿರ ಜನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಶ್ರೀ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಜುಕ್ತಿಹಿರೇಮಠ, ಸೂಡಿ