ಗದಗ ತೊಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥರು ಹಾಗೂ ಯೋಗ ಸಾಧಕ ರುದ್ರಣ್ಣ ಗುಳಗುಳಿ ಉಪನ್ಯಾಸ ನೀಡಿದರು. ತೋಂಟದಾರ್ಯ ಶ್ರೀಗಳು, ಕೆ. ಎಸ್. ಪಲ್ಲೇದ, ಮೌನಯೋಗಿ ಡಾ. ವಿಶ್ವನಾಥ ಗುರುಗಳನ್ನು ಅವರನ್ನು ಸನ್ಮಾನಿಸಲಾಯಿತು. ಡಾ. ಉಮೇಶ ಪುರದ, ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ. ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇತರರು ಇದ್ದರು.
ಗದಗ: ನಿತ್ಯ ಬದುಕಿನಲ್ಲಿ ನೈತಿಕ ಆಚರಣೆಗಳನ್ನು ಶುದ್ಧವಾಗಿ ಇಟ್ಟುಕೊಳ್ಳಲು ಯೋಗ ಸಹಕಾರಿ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಬಹಳ ಸಹಕಾರಿ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೊಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಯೋಗವನ್ನು ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಇಡೀ ವಿಶ್ವಕ್ಕೆ ಯೋಗದ ಮಹತ್ವವನ್ನು ಸಾರುವಲ್ಲಿ ನಮ್ಮ ದೇಶದ ಕೊಡುಗೆ ಅಪಾರವಾಗಿದೆ. ಹಣಕ್ಕಿಂತಲೂ ದೊಡ್ಡದು ನಮ್ಮ ಆರೋಗ್ಯ. ಶುಚಿ ಆಹಾರ, ವಿಹಾರ, ನಡಿಗೆ, ವ್ಯಾಯಾಮ, ಯೋಗ ಪ್ರತಿಯೊಬ್ಬರೂ ದಿನನಿತ್ಯ ರೂಢಿಸಿಕೊಳ್ಳಬೇಕು. ಮನುಷ್ಯನ ದೈಹಿಕ ಮತ್ತು ಮಾನಸಿಕ ಅಸಮತೋಲನ ಹೆಚ್ಚಾಗಿದೆ. ಸಮತೋಲನಭರಿತ ಆರೋಗ್ಯ ನಮ್ಮದಾಗಬೇಕಾದರೆ ಯೋಗ ಅತ್ಯಂತ ಪರಿಣಾಮಕಾರಿ ಆಗಿದೆ. ಭಾರತೀಯ ಪರಂಪರೆಯಲ್ಲಿ ಪತಂಜಲಿಯ ಯೋಗ ಮಾದರಿ ವಿಶ್ವಕ್ಕೆ ಮಾದರಿಯಾಗಿದೆ. ಇದು ಭಾರತೀಯತ್ವದ ಹೆಚ್ಚುಗಾರಿಕೆ ಎಂದರು.
ಗದುಗಿನ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥರು ಹಾಗೂ ಯೋಗ ಸಾಧಕ ರುದ್ರಣ್ಣ ಗುಳಗುಳಿ ಉಪನ್ಯಾಸ ನೀಡಿ, ನಮ್ಮ ದಿನಚರಿ ದಿನನಿತ್ಯ ಯೋಗದಿಂದ ಪ್ರಾರಂಭವಾಗಬೇಕು. ಈ ಯೋಗದಿಂದ ಬೆಳಗಿನಿಂದ ರಾತ್ರಿಯವರೆಗೆ ಚೈತನ್ಯದಿಂದ ಬದುಕಲು ಸಾಧ್ಯವಾಗುತ್ತದೆ. ನಾವು ಜೀವನದಲ್ಲಿ ಎಲ್ಲ ಕೆಲಸ ಕಾರ್ಯಗಳಿಗೂ ಸಮಯವನ್ನು ಮೀಸಲಾಗಿಡುತ್ತೇವೆ. ಆರೋಗ್ಯದ ವಿಷಯಕ್ಕೆ ಬಂದಾಗ ನಿರ್ಲಕ್ಷ$್ಯ ಭಾವ ತೋರುತ್ತೇವೆ. ಒತ್ತಡದ ಬದುಕಿನಿಂದ ಬಿಡುಗಡೆ ಹೊಂದಲು ಯೋಗವೊಂದೇ ಮಾರ್ಗವಾಗಿದೆ ಎಂದರು.
ಲಿಂಗಾಯತ ಪ್ರಗತಿಶೀಲ ಸಂದ ಮಾಜಿ ಅಧ್ಯ ಪ್ರಕಾಶ ಕರಿಸೋಮನಗೌಡರ ಮಾತನಾಡಿ, ತೋಂಟದಾರ್ಯ ಮಠದಲ್ಲಿ ಪ್ರತಿ ಸೋಮವಾರ ಜರುಗುವ ಈ ಶಿವಾನುಭವ ಬಹಳ ವೈಶಿಷ್ಠಯತೆಯಿಂದ ಕೂಡಿದೆ. ಶಿವಾನುಭವ ವೇದಿಕೆ ಅನೇಕ ಸಾಹಿತಿಗಳು, ಕಲಾವಿಧರು ಸೇರಿದಂತೆ ಸಾಕಷ್ಟು ಜನರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದ ಅಟ್ಯಾಪಾಠ್ಯ ಕ್ರೀಡೆಯಲ್ಲಿ ಬಂಗಾರ ಪದಕ ಪಡೆದ ಸಿಂಗಟರಾಯನಕೆರೆ ತಾಂಡಾದ ರಾಹುಲ ಶೇಖರ ಕಾರಭಾರಿ, ಮಠದಲ್ಲಿ ಯೋಗ ತರಬೇತಿ ನೀಡಿದ ಬಸವ ಯೋಗ ಮಹಾವಿದ್ಯಾಲಯದ ಮುಖ್ಯಸ್ಥ ಕೆ. ಎಸ್. ಪಲ್ಲೇದ, ಮೌನಯೋಗಿ ಡಾ. ವಿಶ್ವನಾಥ ಗುರುಗಳನ್ನು ಅವರನ್ನು ಸನ್ಮಾನಿಸಲಾಯಿತು. ಡಾ. ಉಮೇಶ ಪುರದ, ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ. ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇತರರು ಇದ್ದರು.