ಬಿಡದಿ ಟೌನ್ಶಿಪ್ ವಿರೋಧಿಸಿ ಜಿಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ವೆಂಕನಗೌಡ ಗೋವಿಂದಗೌಡ್ರ ಸುದ್ದಿಗೋಷ್ಟಿ ನಡೆಸಿದರು. ಪ್ರುಲ್ ಪುಣೇಕರ, ಬಸವರಾಜ ಅಪ್ಪಣ್ಣನವರ, ಜಿ. ಕೆ. ಕೊಳ್ಳಿಮಠ ಸೇರಿದಂತೆ ಇತರರು ಇದ್ದರು.
ರಾಜ್ಯ ಸರ್ಕಾರ ಬಿಡದಿ ಟನ್ಶಿಪ್ ಭೂಸ್ವಾಧಿನ ಮಾಡಲು ನಿರ್ಣಯಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಜೂ. 21 ರಂದು ಬೃಹತ್ ಪಾದಯಾತ್ರೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಗದಗದಿಂದ 200 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ. ಆರ್. ಗೋವಿಂದಗೌಡ್ರ ಹೇಳಿದರು.
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಅಂಚಿಪುರದಿಂದ ಹೊಸೂರಿನ ವರೆಗೂ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ತಾನು ಮಾಡುವ ಕಾರ್ಯಗಳಿಂದ ಸಾಮಾನ್ಯ ಜನರಿಗೆ ಉಪಯೋಗ ಆಗಬೇಕು. ಲಾಭದ ಉದ್ದೇಶದಿಂದ ಸರ್ಕಾರ ಯಾವುದೇ ಕಾರ್ಯ ಮಾಡಬಾರದು ಎಂದರು.
ಬಿಡದಿಯಲ್ಲಿ ಸುಮಾರು 514 ರೈತರು ಭೂಮಿ ಹೊಂದಿದ್ದು, ಟೌನ್ಶಿಪ್ ಮಾಡಲು 400 ಕ್ಕೂ ಹೆಚ್ಚು ರೈತರು ವಿರೋಧ ಮಾಡಿದ್ದಾರೆ. ಆದರೂ, ರಾಜ್ಯ ಸರ್ಕಾರ ಬಂಡತನ ಮಾಡಲು ಹೋರಟಿದ್ದು ಸರಿಯಲ್ಲ. ಮುಖ್ಯಮಂತ್ರಿ ಡಿ. ಕೆ ಶಿವಕುಮಾರ ಸಿಎಂ ಆದಾಗಿನಿಂದ ಯಾವುದೇ ಕೆಲಸ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ಬಿಡದಿ ಗೊಂದಲ ಸೃಷ್ಟಿಸಿದ್ದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಕೇವಲ ಮಂತ್ರಿ ಮಂಡಲದ ಬಗ್ಗೆ ಹಗ್ಗ ಜಗ್ಗಾಟ ನಡೆಯುತ್ತಿದೆ. ರಾಜ್ಯದಲ್ಲಿ ರೈತರಿಗೆ ಸಮರ್ಪಕ ಬೀಜ-ಗೋಬ್ಬರ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು. ಎಲ್ಲ ಶಾಸಕರು ಬೆಂಗಳೂರಿನಿಂದ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಈ ಗೊಂದಲದ ನಡುವೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನನಗೂ ಫ್ರಿ, ನಿನಗೂ ಫ್ರೀ ಎಂದು ಹೇಳಿ ಈಗ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಲು ಹೋರಟಿದೆ. ಗ್ಯಾರಂಟಿ ಪಡೆಯಲು ಮತ್ತೆ ಹೊಸದಾಗಿ ಅಜಿರ್ ಹಾಕುವಂತೆ ಒತ್ತಡ ಹೇರಲಾಗಿದೆ. ಮಹಿಳೆಯರು ತಮ್ಮ ಕೆಲಸ ಕಾರ್ಯ ಬಿಟ್ಟು ಕ್ಯೂ ನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ ಎಂದರು.
ರಾಜ್ಯ ಸರ್ಕಾರ ಮೂರು ವರ್ಷದಲ್ಲಿ ಸ್ಮಾರ್ಟ ಕಾರ್ಡ ವಿತರಿಸದೇ ಈಗ ಸ್ಮಾರ್ಟಕಾರ್ಡ ಬಗ್ಗೆ ಪ್ರಸ್ತಾಪಿಸಿರುವುದು ಸರಿಯಲ್ಲ. ಈ ಹಿಂದೆ ಇದ್ದ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೇ ರಾಜ್ಯಾದ್ಯಂತ ಜನರು ಧಂಗೆ ಏಳುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರುಲ್ ಪುಣೇಕರ, ಬಸವರಾಜ ಅಪ್ಪಣ್ಣನವರ, ಜಿ. ಕೆ. ಕೊಳ್ಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.