ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಜಗದೀಶ ಶೇಟ್ಟರ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರುಡಗಿ, ಎಂ.ಎಂ.ಹಿರೇಮಠ, ಸಂಗಮೇಶ ದುಂದೂರ, ತೊಟೊಸೊ ಭಾಂಡಗೆ, ಸುರೇಶ ಮರಳಪ್ಪನವರ, ಕೆ.ಪಿ.ಕೋಟಿಗೌಡ್ರ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ರವಿ ಮಾನ್ವಿ ಇತರರು ಇದ್ದರು.  
ರಾಜ್ಯ

ಮಮತಾ ಬ್ಯಾನರ್ಜಿ ಅವರದ್ದು ಮೂರ್ಖತನದ ಪರಮಾವಧಿ: ಜಗದೀಶ ಶೆಟ್ಟರ

ವಿಜಯವಾಣಿ ಸುದ್ದಿಜಾಲ ಗದಗ
ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾಟಿರ್ಗೆ 206 ಶಾಸಕರನ್ನು ನೀಡಿ ಅಲ್ಲಿನ ಜನ ಆಶಿರ್ವಧಿಸಿದ್ದಾರೆ. ಇದನ್ನು ಒಪ್ಪಿಕೊಂಡು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನಜಿರ್ರವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳ ಪದವಿಗೆ ರಾಜೀನಾಮೆ ನೀಡದೇ ಇರುವುದು ಮೂರ್ಖತನದ ಪರಮಾವಧಿ ಆಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಮಮತಾ ಬ್ಯಾನಜಿರ್ರವರ ಆಡಳಿತಕ್ಕೆ ಬೇಸತ್ತ ಜನ ಭಾರತೀಯ ಜನತಾ ಪಾಟಿರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಹುಮತವನ್ನು ಸ್ಪಷ್ಟವಾಗಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮತದಾರರಿಗೆ ನಾನು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಟಿಎಂಸಿಯ ಗುಂಡಾಗಿರಿ, ಸತತವಾಗಿ ಕೇಂದ್ರ ಸರ್ಕಾರದೊಂದಿಗೆ ಸಂರ್ಷ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರದೇ ಜನರಿಗೆ ಮೋಸ ಮಾಡಿದ್ದನ್ನು ಅರಿತ ಅಲ್ಲಿಯ ಜನ ಟಿಎಂಸಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಮತಗಳವು ಆಗಿದೆ ಎಂದು ಮಮತಾ ಬ್ಯಾನಜಿರ್ರವರು ಆರೋಪಿಸಿದ್ದಾರೆ. ಇದನ್ನು ಬೆಂಬಲಿಸಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ದಿವಾಳಿತನದ ಪರಮಾವಧಿ. ಒಂದು ರಾಜ್ಯದ ಜನ ಸರ್ಕಾರ ಬದಲಿಸಿದಾಗ ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಚುನಾಯಿತ ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು ಬೇಜವಾಬ್ದಾರಿಯಿಂದ ಹೇಳಿಕೆ ನೀಡುವ ಮಮತಾ ಬ್ಯಾನಜಿರ್ ಹಾಗು ರಾಹುಲ್​ ಗಾಂಧಿಯವರ ನಡೆ ಖಂಡನೀಯ ಎಂದರು.
ಇದೇ ತಿಂಗಳು 9ರಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗು ಬಿಜೆಪಿಯ ಹಿರಿಯ ಧುರಿಣ ಬಿ.ಎಸ್​.ಯಡಿಯೂರಪ್ಪನವರು ರಾಜಕೀಯ ಪ್ರವೇಶಿಸಿ 50 ವರ್ಷ ಕಳೆದ ಹಿನ್ನೆಲೆ ಚಿತ್ರದುರ್ಗ ನಗರದಲ್ಲಿ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಹಾಗು ಅಭಿಮಾನಿಗಳು ಭಾಗವಹಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ, ಜಿಲ್ಲಾ ವಕ್ತಾರ ಎಂ.ಎಂ.ಹಿರೇಮಠ, ಸಂಗಮೇಶ ದುಂದೂರ, ತೊಟೊಸೊ ಭಾಂಡಗೆ, ಸುರೇಶ ಮರಳಪ್ಪನವರ, ಕೆ.ಪಿ.ಕೋಟಿಗೌಡ್ರ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ರವಿ ಮಾನ್ವಿ ಇತರರು ಇದ್ದರು.