ಗದಗ ನಗರದ ಡಿ.ಸಿ. ಕಂಪೌಂಡ್ ಆವರಣದಲ್ಲಿ ಏರ್ಪಡಿಸಿದ್ದ ಕಾಮಿರ್ಕ ದಿನಾಚರಣೆ ಕಾರ್ಯಕ್ರಮವನ್ನು ಎಚ್.ಕೆ. ಪಾಟೀಲ ಉದ್ಘಾಟಿಸಿದರು. ಅಭಿನವ ಕೊಟ್ಟೂರು ಶ್ರೀಗಳು, ಎಸ್. ವಿ. ಸಂಕನೂರು, ಅಕ್ಬರಸಾಬ್ ಬಬಜಿರ್, ಬಿ. ಬಿ. ಅಸೂಟಿ ಹಲವರು ಇದ್ದರು.
ದೇಶದ ಭವ್ಯ ಭವಿಷ್ಯವನ್ನು ನಿಮಿರ್ಸುವಲ್ಲಿ ಕಟ್ಟಡ ಕಾಮಿರ್ಕರ ಪಾತ್ರ ಅನನ್ಯ. ಅಹನಿರ್ಶಿ ಬೆವರು ಸುರಿಸಿ ದುಡಿಯುವ ಕಾಮಿರ್ಕರ ಹಿತರಣೆಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೀಜನೆಗಳು ಅವರಿಗೆ ಶ್ರೀರಕ್ಷೆ ಆಗಿವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಡಿಸಿ ಮಿಲ್ ಕಂಪೌಂಡ ಆವರಣದಲ್ಲಿ ಶುಕ್ರವಾರ ಕಟ್ಟಡ ನಿರ್ಮಾಣ ಕಾಮಿರ್ಕರ ಮಹಾ ಸಂದ ವತಿಯಿಂದ ಹಮ್ಮಿಕೊಂಡಿದ್ದ ಕಾಮಿರ್ಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಮಿರ್ಕರ ಪಾತ್ರ ಶ್ಲಾನೀಯ. ನಮ್ಮ ಕಣ್ಣಿಗೆ ಕಾಣುವ ರಸ್ತೆ, ಮೇಲ್ಸೇತುವೆ, ಕಾಲೇಜುಗಳು, ಮ್ಯೂಸಿಯಂ ಹಾಗೂ ಗುಡಿ ಗುಂಡಾರಗಳನ್ನು ನಿಮಿರ್ಸುವವರು ಕಾಮಿರ್ಕರು. ಸಾವಿರಾರು ವರ್ಷಗಳ ಕಾಲ ಉಳಿಯುವ ಇಂತಹ ಸ್ಮಾರಕಗಳ ಹಿಂದೆ ಕಾಮಿರ್ಕರ ರಕ್ತ ಮತ್ತು ಬೆವರಿದೆ. ಕಾನೂನಿನ ಇತಿಹಾಸ ದೇಶದಲ್ಲಿ ಕಾಮಿರ್ಕ ಕಲ್ಯಾಣ ಕಾನೂನುಗಳನ್ನು ಜಾರಿಗೆ ತರುವಲ್ಲಿ ಆಸ್ಕರ್ ರ್ನಾಂಡಿಸ ಮತ್ತು ಮಲ್ಲಿಕಾರ್ಜುನ ರ್ಖಗೆ ಅವರ ಕೊಡುಗೆ ಅಪಾರ. ಅವರ ಪ್ರಯತ್ನದಿಂದಾಗಿ ಇಂದು ಕಾಮಿರ್ಕರಿಗೆ ಸಾಮಾಜಿಕ ಭದ್ರತೆ ಲಭಿಸುತ್ತಿದೆ ಎಂದು ಹೇಳಿದರು.
ಕಾಮಿರ್ಕ ಕಾರ್ಡ ಎಂಬುದು ಎಂಬುದು ಕೇವಲ ಚೀಟಿಯಲ್ಲ. ಅದು ಕಾಮಿರ್ಕರಿಗೆ ಒಂದು ಸರ್ಕಾರಿ ನೌಕರಿಯಷ್ಟೇ ಸಮಾನವಾದ ಭದ್ರತೆ ನೀಡುತ್ತದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕಾಮಿರ್ಕರಿಗೆ ಈ ಕಾರ್ಡ ಮೂಲಕ ವಿತರಿಸಲಾದ ಕಿಟ್ಗಳು ಮತ್ತು ಸಹಾಯ ಹಸ್ತ ದೊಡ್ಡ ನೆರವು ನೀಡಿದೆ ಲಾನುಭವಿಗಳು ಕಾಮಿರ್ಕ ಕಾರ್ಡನಿಂದ ವಂಚಿತರಾಗಿದ್ದರೆ, ಅಂತಹವರು ಎಂಎಲ್ಎ ಕಚೇರಿ ಅಥವಾ ಕಾಮಿರ್ಕ ಸಂಟನೆಗೆ ಅಜಿರ್ ಸಲ್ಲಿಸಿದರೆ ಒಂದು ವಾರದೊಳಗೆ ಕಾರ್ಡ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಟ್ಟಡ ಕಾಮಿರ್ಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಗದಗ ಜಿಲ್ಲೆಯಲ್ಲಿ ಸುಸಜ್ಜಿತ ಕಾಮಿರ್ಕರ ಮಕ್ಕಳ ವಸತಿ ಶಾಲೆ ಮಂಜೂರಾಗಿದ್ದು, ಶ್ರೀದಲ್ಲೇ ಕಾಮಗಾರಿ ಆರಂಭವಾಗಲಿದೆ. ಕಾಮಿರ್ಕರ ಮಕ್ಕಳಿಗೆ ಗುಣಮಟ್ಟದ ಶಿಣ ನೀಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ವಸತಿ ಶಾಲೆಗಾಗಿ ಗದಗ ನಗರದ ಸಮೀಪದಲ್ಲಿ 10 ಎಕರೆ ವಿಶಾಲವಾದ ಭೂಮಿಯನ್ನು ಗುರುತಿಸಲಾಗಿದೆ. ಇದೇ ವರ್ಷದಲ್ಲಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಮುಂದಿನ ಶೈಣಿಕ ವರ್ಷದಿಂದಲೇ ಶಾಲೆಯಲ್ಲಿ ಚಟುವಟಿಕೆಗಳು ಆರಂಭವಾಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 85 ಕ್ಕೂ ಹೆಚ್ಚು ಅಂಕ ಪಡೆದ ಕಟ್ಟಡ ಕಾಮಿರ್ಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಭಿನವ ಕೊಟ್ಟೂರು ಶ್ರೀಗಳು, ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರು, ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಅಕ್ಬರಸಾಬ್ ಬಬಜಿರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯ ಬಿ. ಬಿ. ಅಸೂಟಿ, ಕಟ್ಟಡ ನಿರ್ಮಾಣ ಕಾಮಿರ್ಕರ ಸಂದ ಅಧ್ಯ ಮಹಬೂಬ್ ಖಾನ್ ಪಠಾಣ್, ನಗರಸಭೆ ಮಾಜಿ ಅಧ್ಯೆ ಉಷಾ ದಾಸರ ಹಲವರು ಇದ್ದರು.