ಜಗತ್ತಿನ ಎಲ್ಲ ಸಂಸತಿಗಳು ನಾಶವಾದರೂ ಹಿಂದೂ ಸಂಸತಿ ಮಾತ್ರ ತಲೆ ಎತ್ತಿ ನಿಂತಿದೆ. ಸಾವಿರಾರು ವರ್ಷಗಳ ಆಕ್ರಮಣವನ್ನು ಎದುರಿಸಿದರೂ ಹಿಂದೂ ಧರ್ಮ ಜೀವಂತವಾಗಿ ಉಳಿದಿದೆ ಎಂದು ಪ್ರಖರ ವಾಗ್ಮಿ ಜಗದೀಶ ಕಾರಂತ ಹೇಳಿದರು.
ನಗರದ ವೀರಶೈವ ಜನರಲ್ ಲೈಬ್ರರಿ ಆವರಣದಲ್ಲಿ ಶನಿವಾರ ನಡೆದ ಹಿಂದೂ ಸಮ್ಮೇಳನದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಹಿಂದೂ ಎನ್ನುವ ಧರ್ಮ ಇದೆ. ಜಗತ್ತಿನಲ್ಲಿ 100 ಕೋಟಿ ಜನರು ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಜಗತ್ತಿನಲ್ಲಿ ಅನೇಕ ನಾಗರಿಕತೆಗಳು ಉದಯಿಸಿ ನಶಿಸಿ ಹೋಗಿವೆ. ಆದರೆ, ಜಗತ್ತಿನ ಏಕೈಕ ಪ್ರಾಚಿನ ಸಿಂದೂ ನಾಗರಿಕತೆ ಇನ್ನೂ ಉಳಿದಿದೆ ಎಂದರು.
ಕೆಲವು ಹತಾಶ ಶಕ್ತಿಗಳು ಇಂದಿಗೂ ನಮ್ಮ ಧರ್ಮ, ಸಮಾಜ, ಸಂಸತಿಯನ್ನು ಕೊಲ್ಲಲು ಕತ್ತಿ ಮಸಿಯುತ್ತಿವೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹಿಂದೂ ಎನ್ನುವ ಭಾವನೆ ನಮ್ಮಲ್ಲಿರುವವರೆಗೂ ಹಿಂದೂತ್ವ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದೂ ಸತ್ತಾಗ ಭಾರತ ಸಾಯುತ್ತದೆ. 1200 ವರ್ಷ ಭಾರತವನ್ನು ಇಸ್ಲಾಂ ಆಳಿತು. ಬಾಬರ್, ಟಿಪ್ಪು ಸುಲ್ತಾನ ಸೇರಿದಂತೆ ಹಲವರ ಆಕ್ರಮಣ ಎದುರಿಸಿ ಮೆಟ್ಟಿ ನಿಂತ ಪರಾಕ್ರಮಿ ನಮ್ಮ ಹಿಂದೂ ಸಮಾಜ ಎಂದರು.
ಜಾತಿಯ ಸಮ್ಮೇಳನ, ಭಾಷಾ ಸಮ್ಮೇಳನ, ರಾಜಕೀಯ ಸಭೆ-ಸಮಾರಂಭ ನೋಡಿದ್ದೇವೆ. ಆದರೆ, ಹಿಂದೂ ಸಮಾವೇಶದಲ್ಲಿ ಭಾಗವಹಿಸುವುದು ಪ್ರಮುಖವಾಗಿದೆ. ನಾವು ಹುಟ್ಟಿದ ಜಾತಿ, ಕಾಯಕ ಬದಲಾದರು ನಾವೆಲ್ಲರೂ ಹಿಂದೂವಾಗಿ ಬದುಕಬೇಕು. ಜಗತ್ತಿನ 50 ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಬಹುತೇಕ ರಾಷ್ಟ್ರಗಳು ಭಾರತವನ್ನು ಹಿಂದೂಸ್ಥಾನ ಎಂದು ಅಂತ ಗುರುತಿಸುತ್ತವೆ ಎಂದು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ, ರಾಣಾ ಪ್ರತಾಪ್ ಸಿಂಹನಂತ ಅನೇಕ ಶೂರರು ಹಿಂದೂ ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹಿಂದೂತ್ವ ಭಾರತದ ಆತ್ಮ, ಹಿಂದೂತ್ವ ಭಾರತದ ಉಸಿರು ಎಂದು ವೀರಾವೇಶದಿಂದ ಹೋರಾಡಿದ್ದಾರೆ. ಇಂದಿಗೂ ಭಾರತವನ್ನು ಕೊಲ್ಲಬೇಕು, ಹಿಂದೂತ್ವ ಕೊಲ್ಲಬೇಕು ಎನ್ನುವ ಮನಸ್ಥಿತಿಗಳು ಇವೆ. ಇದಕ್ಕಾಗಿ ಹಿಂದೂ ಸಮಾವೇಶದ ಅವಶ್ಯಕತೆ ಇದೆ ಎಂದರು.
ಸಮ್ಮೇಳನದ ಸಾನ್ನಿಧ್ಯ ಡಾ. ನೀಲಮ್ಮ ತಾಯಿ ಅಸುಂಡಿ ವಹಿಸಿಕೊಂಡಿದ್ದರು. ರಾವೇಂದ್ರ ಹಬೀಬ, ಅಶ್ವಿನಿ ಜಗತಾಪ, ರಾಣಿ ಚಂದಾವರಿ, ಪರಮೇಶ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗದಗ: ನಗರದಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಹಿಂದೂ ಸಮಾಜವನ್ನು ಒಂದೂಗೂಡಿಸುವ ಉದ್ದೇಶದಿಂದ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಗದಗ- ಬೆಟಗೇರಿ ಅವಳಿ ನಗರದಲ್ಲಿ ಜರುಗಿತು.
ಶೋಭಾಯಾತ್ರೆ ವಿವಿಧ ವಾಧ್ಯ ವೃಂದಗಳೊಂದಿಗೆ ಮುಳಗುಂದ ನಾಕಾ ಹತ್ತಿರದ ಅಂಬಾಭವಾನಿ ದೇವಸ್ಥಾನದಿಂದ ಆರಂಭವಾಗಿ ತ್ರಿಕೂಟೇಶ್ವರ ದೇವಸ್ಥಾನ, ಜೋಡಮಾರುತಿ ದೇವಸ್ಥಾನ, ಪಟೇಲ ರಸ್ತೆ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ವೀರಶೈವ ಜನರಲ್ ಲೈಬ್ರರಿ ಆವರಣದಲ್ಲಿ ಸಂಪನ್ನಗೊಂಡಿತು.
ಮೇರವಣಿಗೆಯಲ್ಲಿ ಭಾರತ ಮಾತೆ, ಅಖಂಡ ಭಾರತ, ಭೂವನೇಶ್ವರಿ, ಪ್ರಭು ಶ್ರೀರಾಮಚಂದ್ರ, ಮಹಷಿರ್ ವಾಲ್ಮಿಕಿ, ಭಾರತೀಯ ಸೇನೆ, ಬಾಲಗಂಗಾಧರ ತಿಲಕ್, ಲಾಲಾ ರಜಪೂತ ರಾಯ್, ಬಿಪಿನ್ ಚಂದ್ರಫಾಲ್, ಮುಂಡರಗಿ ಭೀಮರಾಯ, ಹುಯಿಲಗೋಳ ನಾರಾಯಣರಾವ್, ಮಹಾರಾಣಾ ಪ್ರತಾಪ್, ಇಮ್ಮಡಿ ಪುಲಕೇಶಿ, ಕೃಷ್ಣದೇವರಾಯ, ಹಕ್ಕ-ಬುಕ್ಕರು ಸೇರಿದಂತೆ ವಿವಿಧ ದಾರ್ಶನಿಗಳ ಭಾವಚಿತ್ರಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಮೆರವಣಿಗೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಪುಟ್ಟ ಮಕ್ಕಳ ಕೋಲಾಟ ನೋಡುಗರ ಗಮನ ಸೆಳೆಯಿತು.