2025ರಲ್ಲಿ 1138, 2023ರಲ್ಲಿ 2404 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದ ಜಿಲ್ಲಾಡಳಿತ
ಕಂದಾಯ ಗ್ರಾಮಗಳಾಗಿರದೇ, ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿಕೊಂಡ ಜನ ವಸತಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಮನೆ ಹಕ್ಕು ಪತ್ರ ನೀಡುವ ಪ್ರಕ್ರಿಯೆಗೆ ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ಇಂದು ಹಾವೇರಿಯಲ್ಲಿ ನಡೆಯುವ ಸರ್ಕಾರದ ಸಾಧನೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ 575 ಕುಟುಂಬಳಿಗೆ ಮನೆ ಹಕ್ಕು ಪತ್ರ ವಿತರಿಸಲಿದೆ. ಈ ಹಿಂದೆ 2023ರಲ್ಲಿ 2404 ಮನೆಗಳನ್ನು, 2025ರಲ್ಲಿ 1138 ಮನೆಗಳನ್ನು ಸಕ್ರಮಗೊಳಿಸಿ ಕಂದಾಯ, ಪಂಚಾಯತರಾಜ್, ನೋಂದಣಿ ಇಲಾಖೆ ಸಹಯೋಗದಲ್ಲಿ 1226 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿತ್ತು. ಈಗ ಮೂರನೇ ಹಂತದಲ್ಲಿ 575 ಕುಟುಂಬಗಳು ಹಕ್ಕಪತ್ರ ಪಡೆಯಲಿವೆ.
ಜಿಲ್ಲೆಯ 5 ಗ್ರಾಮ/ಉಪ ಗ್ರಾಮಗಳನ್ನು ಗುರುತಿಸಿರುವ ಕಂದಾಯ ಇಲಾಖೆ ಒಟ್ಟು 575 ಅರ್ಹ ಕುಟುಂಬಗಳಿಗೆ ಇಸ್ವತ್ತು ಹಕ್ಕುಪತ್ರ ನೀಡಲು ಅಂತಿಮಗೊಳಿಸಲಾಗಿದೆ. ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಇಂಧಿರಾ ನಗರ, ಶಿರಹಟ್ಟಿಯ ಶ್ರೀರಾಮನಗರ, ಮುಂಡರಗಿಯ ಜಾಲವಾಡಗಿಯಲ್ಲಿ ಮೂರು ಉಪಗ್ರಾಮ, ಗಜೇಂದ್ರಗಡದಲ್ಲಿ ಸರ್ಜಾಪುರ ಮತ್ತು ಹುನಗುಂದ ಹಾಗೂ ಲೆ$್ಮಶ್ವರ ತಾಲೂಕಿನ ಬಸಾಪುರ ಗ್ರಾಮದಲ್ಲಿ 1 ಕುಟುಂಬಕ್ಕೆ ಹಕ್ಕುಪತ್ರ ನೀಡಲಾಗುತ್ತಿದೆ. 2000 ಚದರ ಅಡಿ ವರೆಗೂ ಹಕ್ಕುಪತ್ರ ಪಡೆಯಲು ಅರ್ಹರಾಗಿರುತ್ತಾರೆ.
ರಾಜ್ಯಾದ್ಯಂತ ಹಕ್ಕುಪತ್ರ ನೀಡುವ ಅಭಿಯಾನ ಆರಂಭಿಸಿದರೂ ಸಹ ಉತ್ತರ ಕರ್ನಾಟದಲ್ಲಿ ಹಲವು ದುಡಿಯಲು ಇತರೆ ಜಿಲ್ಲೆ ಮತ್ತು ರಾಜ್ಯಗಳಿಗೆ ವಲಸೆ ಹೋಗಿರುವ ಕಾರಣ ಹಕ್ಕಪತ್ರ ನೋಂದಣಿಗಾಗಿ ಕಂದಾಯ ಇಲಾಖೆಗೆ ಕೆವೈಸಿ ಮಾಡಲು ಸಾದ್ಯವಾಗುತ್ತಿಲ್ಲ. ಹಾಗಾಗಿ ಇನ್ನೂ ಲೆಕ್ಕ ಇಲ್ಲದಷ್ಟು ಕುಟುಂಬಗಳು ಹಕ್ಕುಪತ್ರ ಪಡೆಯುವುದು ಬಾಕಿ ಇವೆ.
ಜಿಲ್ಲಾಡಳಿತ 2023ಕ್ಕೂ ಮೊದಲೇ ಜಿಲ್ಲೆಯಲ್ಲಿ 30 ಜನವಸತಿಗಳನ್ನು ಗುರುತಿಸಿತ್ತು. ಈ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವತಿರ್ಸಲು ಮತ್ತು ಹಕ್ಕುಪತ್ರ ವಿತರಿಸಲು 2023ರಲ್ಲಿ ಚಾಲನೆ ನೀಡಿತ್ತು. ಅದರಂತೆ 2023ರಲ್ಲಿ 2404 ಮನೆಗಳನ್ನು ಗ್ರಾಮಠಣಾ ವ್ಯಾಪ್ತಿಗೆ ತಂದು ಹಕ್ಕುಪತ್ರ ನೀಡಲಾಗಿತ್ತು. ಕಳೆದ 2025ನೇ ಸಾಲಿನಲ್ಲಿ 1138 ಮನೆಗಳನ್ನು ಗುರಿತಿಸಿ ಹಕ್ಕುಪತ್ರ ನೀಡಿದೆ. 2025ರಲ್ಲಿ ರೋಣ ತಾಲೂಕಿನಲ್ಲಿ ಮೇಲ್ಮಠ ನೂತನ ಗ್ರಾಮವನ್ನು ಕಂದಾಯ ಗ್ರಾಮವಾಗಿಸಿ 61 ಮನೆಗಳಿಗೆ ಹಕ್ಕುಪತ್ರ ನೀಡಿದೆ. ಅದೇ ರೀತಿ ಗದಗ ತಾಲೂಕಿನಲ್ಲಿ ಅಡವಿಸೋಮಾಪುರ ಗ್ರಾಮದಿಂದ ಜಲಶಂಕರಿಯಲ್ಲಿ 321 ಮನೆ, ಲೆ$್ಮಶ್ವರ ತಾಲೂಕಿನಲ್ಲಿ ಬಸಾಪೂರು ನೂತನ ಗ್ರಾಮದಲ್ಲಿ 78 ಮನೆ, ಮುಂಡರಗಿಯಲ್ಲಿ ಹೊಸ ಹೊಂಬಳ, ಸಿಂಗಟರಾಯನ ಕೆರೆ(ಶಿವಾಜಿ ನಗರ), ಕಕ್ಕೂರು (ಆಶಾಕಿರಣ) ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವತಿರ್ಸಿ 134 ಮನೆ, ಶಿರಹಟ್ಟಿಯಲ್ಲಿ ಹೊಸಳ್ಳಿ, ಶಿವಾಜಿ ನಗರ, ಸೇವಾನಗರ, ಗುಡ್ಡದಪುರಗಳಲ್ಲಿ 538 ಮನೆ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ನಿಡಗುಂದಿಕೊಪ್ಪ, ಬೈರಾಪುರ ಮತ್ತು ನೆಲ್ಲೂರು ಪ್ಯಾಟಿ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿಸಿ 88 ಮನೆಗಳಿಗೆ 2025ರಲ್ಲಿ ಹಕ್ಕುಪತ್ರ ವಿತರಿಸಲಾಗಿತ್ತು. ಮುಂದುವರಿದು ಹಕ್ಕುಪತ್ರ ಜಾಗೃತಿ ಅಭಿಯಾನ ನಂತರ 2026ರಲ್ಲಿ 575 ಕುಟುಂಬಗಳನ್ನು ಗುರುತಿಸಲಾಗಿದೆ.
ಈ ಮೊದಲು ಕೇವಲ ಹಕ್ಕುಪತ್ರ ವಿತರಿಸಲಾಗುತ್ತಿತ್ತು. ಇದರಿಂದಾಗಿ ಹಕ್ಕುಪತ್ರ ಪಡೆದ ಮಾಲೀಕರು ನೋಂದಣಿ, ನೆ ಮತ್ತು ಗ್ರಾಪಂ ನಲ್ಲಿ ಇಸ್ವತ್ತು ಪಡೆಯಲು ಹರಸಾಹಸ ಪಡುತ್ತಿದ್ದರು. ಭಾಗಶಃ ಜನರಿಗೆ ಹಕ್ಕುಪತ್ರ ಪಡೆದ ನಂತರ ಆಸ್ತಿ ನೋಂದಣಿಗೆ ಯಾವ ಇಲಾಖೆಗೆ ಅಜಿರ್ ಸಲ್ಲಿಸಬೇಕು ಎಂಬ ಮಾಹಿತಿಯೇ ಇರಲಿಲ್ಲ. ರಾಜ್ಯಾದ್ಯಂತ ಈ ಸಮಸ್ಯೆ ಉಲ್ಭಣಿಸಿ ಆಸ್ತಿ ನೋಂದಣಿಗೆ ಪರದಾಟ ಏರ್ಪಟ್ಟಿತ್ತು. ಈ ಸಮಸ್ಯೆ ಮರುಕಳಿಸದಂತೆ ಎಚ್ಚರಿವಹಿಸಿರುವ ರಾಜ್ಯ ಸರ್ಕಾರ ನೋಂದಣಿ ಇಲಾಖೆ ಸಹಯೋಗ ಪಡೆದು ಹಕ್ಕುಪತ್ರದ ಜತೆಗೆ ಮನೆಯ ಸ್ವತ್ತಿಗೆ ನೇರವಾಗಿ ಇಸ್ವತ್ತು ದಾಖಲೆ ಸೃಷ್ಟಿಗೆ ಚಾಲನೆ ನೀಡಿದೆ. ಹಕ್ಕುಪತ್ರ ಪಡೆಯುವ ಅರ್ಹ ಲಾನುಭವಿಯನ್ನು ನೋಂದಣಿ ಕಚೇರಿಗೆ ಕರೆಯಿಸಿ ಆಸ್ತಿ ನೊಂದಣಿ ಮಾಡಿಸಿದ ನಂತರ ಗ್ರಾಪಂ ನಲ್ಲಿ ಸ್ವತ್ತಿನ ಇಸ್ವತ್ತು ಪಡೆಯುವವರೆಗೂ ಮೇಲುಸ್ತುವಾರಿ ವಹಿಸುತ್ತಿದೆ. ಹೀಗಾಗಿ ಅರ್ಹರಿಗೆ ಸ್ವತ್ತಿನ ಸಂರ್ಪೂಣ ಡಿಜಿಟಲೀಕರಣ ದಾಖಲೆಗಳು ಲಭ್ಯವಾಗುತ್ತಿವೆ.
ದಾಖಲೆ ರಹಿತವಾಗಿ ವಾಸಿಸುತ್ತಿರುವ ಜನವಸತಿಗಳಿಗೆ ವಸತಿಯ ದಾಖಲೆ ಸೃಷ್ಟಿ, ಅಂತಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುತ್ತದೆ. ಚುನಾವಣಾ ಪೂರ್ವದಲ್ಲಿ ಹಕ್ಕುಪತ್ರ ವಿತರಣೆ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಅದೇ ರೀತಿ ರಾಜ್ಯಾದ್ಯಂತ ಸಮೀೆ ನಡೆಸಿ ಜನವಸತಿಗಳನ್ನು ಗುರುತಿಸಲಾಗಿತ್ತು. ಮೂಲ ಗ್ರಾಮದಿಂದ 1 ಕಿಮೀ ದೂರ ಇರುವ ವಸತಿ ಪ್ರದೇಶದಲ್ಲಿ 50 ಕುಟುಂಬಗಳಿಗಿಂತ ಹೆಚ್ಚಿಗೆ ಕುಟುಂಬ ವಾಸವಿದ್ದು ಕನಿಷ್ಠ 250 ಜನರು ವಾಸಿಸುತ್ತಿರುವ ಜನವಸತಿಗಳಿಗೆ ಈ ಹಕ್ಕುಪತ್ರ ವಿತರಿಸುವ ನಿಯಮ ಅನ್ವಯವಾಗುತ್ತದೆ.
ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ. ಹಲವು ವರ್ಷಳಿಂದ ವಾಸವಿದ್ದು, ಮನೆಯ ಹಕ್ಕುಪತ್ರ ಇಲ್ಲದಿರುವ ಕುಟುಂಬಗಳಿಗೆ ಸ್ವತ್ತಿನ ಮೇಲೆ ಹಕ್ಕು ಸಾಧಿಸಲು ಸರ್ಕಾರ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಜಾರಿ ತಂದಿದೆ. ಈ ಬಾರಿ ನೋಂದಣಿ ಕಾರ್ಯದ ಜತೆಗೆ ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯುತ್ತಿರುವುದು ವಿಶೇಷ.
ಸಿ.ಎನ್. ಶ್ರೀಧರ, ಜಿಲ್ಲಾಧಿಕಾರಿ
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಮೂಲಕ ಪ್ರತಿ ಬಡವರಿಗೂ ಅರ್ಹ ಯೋಜನೆಗಳನ್ನು, ಹಕ್ಕುಗಳನ್ನು ತಲುಪಿಸಲಾಗಿದೆ. ಈಗ ಹಕ್ಕುಪತ್ರ ನೀಡುವ ಮಹತ್ವದ ಕಾರ್ಯ ರಾಜ್ಯದಲ್ಲಿ ಮುಂದುವರಿದಿದೆ. ಬಡ ಮತ್ತು ಹಿಂದೂಳಿದ ಜನರ ಹಕ್ಕುಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವುದೇ ರಾಜ್ಯ ಸರ್ಕಾರದ ಉದ್ದೇಶ.
ಎಚ್.ಕೆ. ಪಾಟೀಲ, ಕಾನೂನು ಸಚಿವ