ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಕುರಿತು ಕಾರ್ಯಾಗಾರದಲ್ಲಿ ಬಿ.ಬಿ.ಅಸೂಟಿ ಮಾತನಾಟಡಿದರು. ಕೃಷ್ಣಗೌಡ ಪಾಟೀಲ, ಪಿ.ಡಿ.ಕರಿಗಾರ, ಅಶೋಕ ಮಂದಾಲಿ, ವಿದ್ಯಾಧರ ದೊಡಮನಿ, ಬಸವಂತಪ್ಪ ಎಸ್​. ಯು. ಸಜ್ಜನಶೆಟ್ಟರ್​, ತೇಜಸ್ವಿನಿ ಇತರರು ಇದ್ದರು.  
ರಾಜ್ಯ

ಯುವಕರು ಕೌಶಲ್ಯಾಭಿವೃದ್ಧಿ ಬೆಳೆಸಿಕೊಳ್ಳಿ: ಬಿ.ಬಿ.ಅಸೂಟಿ

ಶಿವಾನಂದ ಹಿರೇಮಠ
ಯುವನಿಧಿ ಯೋಜನೆಯ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು
ವಿಜಯವಾಣಿ ಸುದ್ದಿಜಾಲ ಗದಗ
ಯುವಕರಲ್ಲಿ ಉದ್ಯೋಗ ತರಬೇತಿ ಜೊತೆಗೆ ಕೌಶಲ್ಯಾಭಿವೃದ್ಧಿ ಬೆಳೆಸಿಕೊಳ್ಳಲು ಸಹಕರಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ಪದವಿ ಅಥವಾ ಡಿಪ್ಲೋಮಾ ಮುಗಿಸಿದ ಯುವಕರಿಗೆ ಉದ್ಯೋಗ ತರಬೇತಿಯ ಜೊತೆಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೊಡುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ. ರಾಜ್ಯ ಸರ್ಕಾರ 2023 ಚುನಾವಣೆ ಪೂರ್ವದಲ್ಲಿಯೇ 5 ಗ್ಯಾರಂಟಿಗಳನ್ನು ಉಚಿತವಾಗಿ ಕೊಡುವ ಕುರಿತು ಭರವಸೆ ನೀಡಿತ್ತು. ಅದರಂತೆಯೇ ಅನ್ನಭಾಗ್ಯ, ಗೃಹಲಕ್ಷಿ$್ಮ, ಶಕ್ತಿ, ಗೃಹಜ್ಯೋತಿ, ಯುವನಿಧಿ ಈ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡಜನರನ್ನು ಆಥಿರ್ಕವಾಗಿ ಸಬಲೀಕರಣಗೊಳಿಸಿ ಅವರ ಬದುಕನ್ನು ಹಸನಾಗಿಸಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ಮತ್ತು ಡಿಪ್ಲೋಮಾ ಹೊಂದಿರುವವರಿಗೆ 1,500 ಮಾಸಿಕ ಭತ್ಯೆಯನ್ನು ಗರಿಷ್ಟ 2 ವರ್ಷಗಳವರಗೆ ಅಥವಾ ಉದ್ಯೋಗ ಸಿಗುವವರೆಗೆ ಒದಗಿಸುತ್ತದೆ. ಯುವನಿಧಿ ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯೋಗಕ್ಕೆ ಸಹಾಯಕವಾಗುವ ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ಶೇ. 99.79ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯುವಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಗ್ಯಾರಂಟಿ ಸಮಿತಿಯ ಕಚೇರಿಗಳಿಗೆ ಸಂಪಕಿರ್ಸಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದಾಗಿದೆ. ಗ್ಯಾರಂಟಿ ಯೋಜನೆಗಳ ಸಮೀಕ್ಷೆಯನ್ನು ಆರ್​ಡಿಪಿಆರ್​ ವಿಶ್ವವಿದ್ಯಾಲಯದ ವಿದ್ಯಾಥಿರ್ಗಳು ಮಾಡಿದ್ದು ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ ಯುವ ನಿಧಿ ಯೋಜನೆಯ ಕುರಿತು ಅರಿವು ಮೂಡಿಸುವುದು ಹಾಗೂ ಯೋಜನೆಯ ಸದ್ಭಳಕೆ ಮಾಡಿಕೊಳ್ಳುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಯುವನಿಧಿ ಯೋಜನೆಯು ಯುವಕರಿಗೆ ಡಿಗ್ರಿ ಮುಗಿದ ನಂತರ ಉದ್ಯೋಗ ಸಿಗುವವರೆಗೆ ಆಥಿರ್ಕ ಸಹಾಯ ನೀಡುವ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಯುವಕರು ಯೋಜನೆಯ ಈ ಹಣವನ್ನು ಪಾಕೆಟ್​ ಮನಿ ಎಂದು ಬಳಸಿಕೊಳ್ಳದೇ ಉದ್ಯೋಗಕ್ಕೆ ಸಹಾಯವಾಗುವ ಕೌಶಲ್ಯತೆಯನ್ನು ಬೆಳೆಸಿಕೊಳ್ಳಲು ಉಪಯೋಗಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಕೌಶಲ್ಯತೆಯನ್ನು ಬೆಳೆಸಿಕೊಳ್ಳಲು ಹಾಗೂ ಸ್ವಯಂ ಉದ್ಯೋಗ, ಯುವನಿಧಿ ಯೋಜನೆಯ ಮಾಹಿತಿಗಾಗಿ ಇಂತಹ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲದ ಪಿ.ಡಿ.ಕರಿಗಾರ ಅವರು ಮಾತನಾಡಿ ಯುವನಿಧಿ ಯೋಜನೆಯ ಕುರಿತು ಕಾರ್ಯಾಗಾರವು ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದರು.
ಅಶೋಕ ಮಂದಾಲಿ, ವಿದ್ಯಾಧರ ದೊಡಮನಿ, ಬಸವಂತಪ್ಪ ಎಸ್​. ಯು. ಸಜ್ಜನಶೆಟ್ಟರ್​, ತೇಜಸ್ವಿನಿ ಇತರರು ಇದ್ದರು.