Gadag Govindrao Report 
ರಾಜ್ಯ

ಗದಗ ಜಿಲ್ಲೆಗೆ ಇದ್ದು ಇಲ್ಲದಂತಾದ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ

ಶಿವಾನಂದ ಹಿರೇಮಠ
ಶಿವಾನಂದ ಹಿರೇಮಠ ಗದಗ
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಸ್ಥಾಪಿತ ಆಗಿರುವ ಕೆಕೆಆರ್​ಡಿಬಿಗೆ ರಾಜ್ಯ ಸರ್ಕಾರ ಅನುದಾನ ವಿನಿಯೋಗಿಸಿದ ಶೇ.1 ರಷ್ಟು ಕೂಡ ಬಯಲು ಸೀಮೆ ಜಿಲ್ಲೆಗಳ ಅಭಿವೃದ್ಧಿಗೆ ವಿನಿಯೋಗಿಸಿಲ್ಲ ಎಂಬುದು ಸತ್ಯ. ಗದಗ ಜಿಲ್ಲೆಯು ಪ್ರಮುಖವಾಗಿ ಪ್ರಿಂಟಿಂಗ್​ ಮತ್ತು ಜವಳಿ ಕ್ಷೇತ್ರಕ್ಕೆ ಹೆಸರುವಾಸಿ ಆಗಿದ್ದರೂ ಸಹ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆಗಳನ್ನೇ ರೂಪಿಸಿಲ್ಲ ಎಂಬುದು ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ವರದಿಯಿಂದ ತಿಳಿದು ಬರುತ್ತದೆ.
ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ(ಕೆಕೆಆರ್​ಡಿಬಿ) ಈ ವರೆಗೆ 19694 ಕೋಟಿ ರೂ. ಹಂಚಿಕೆ ಮಾಡಿದೆ. ಆದರೆ, 57 ತಾಲೂಕುಗಳನ್ನು ಒಳಗೊಂಡಿರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ 1995 ರಿಂದ 2025ರ ವರೆಗೆ ಒಟ್ಟು 686 ಕೋಟಿ ರೂ. ನಿಗದಿ ಪಡಿಸಿದೆ. ಗೋವಿಂದರಾವ ವರದಿ ಪ್ರಕಾರ, ಬಯಲು ಸೀಮೆಯ ಪ್ರತಿ ಜಿಲ್ಲೆಗೆ ಸರ್ಕಾರ ವಾಷಿರ್ಕ 22 ಕೋಟಿ ಹಣವನ್ನು ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿನಿಯೋಗಿಸುತ್ತಿದೆ. ಶೇ. 50 ಕ್ಕಿಂತ ಕಡಿಮೆ ಕಾಮಗಾರಿಗಳಿಗೆ ಪ್ರದೇಆಶಭೀವೃದ್ಧಿ ಮಂಡಳಿಯಿಂದ ಅನುಮೋದನೆ ಸಿಗುತ್ತಿದೆ. ಹೀಗಾಗಿ ಗದಗ ಜಿಲ್ಲೆಗೂ ಅನುದಾನ ಹಂಚಿಕೆ, ವಿನಿಯೋಗದಲ್ಲಿ ತಾರತಮ್ಮ ಆಗಿದೆ ಎಂದು ವರದಿಯಿಂದ ಸ್ಪಷ್ಟವಾಗುತ್ತಿದೆ. ಪ್ರಮುಖವಾಖಿ ಜವಳಿ ಮತ್ತು ಮುದ್ರಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಒದಗಿಸಬಹುದಿತ್ತು. ಹೀಗಾಗಿ ಗೋವಿಂದರಾವ ವರದಿಯಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯಕ್ಷಮತೆಯನ್ನು ಪ್ರಶ್ನಿಸಲಾಗಿದ್ದು, ಪ್ರದೇಶಾಭಿವೃದ್ಧಿ ಮಂಡಳೀಯ ಕಾರ್ಯಗಳನ್ನು ಪಂಚಾಯತ್​ ರಾಜ್​ ಸಂಸ್ಥೆಗಳ ಮೂಲಕ ಕೈಗೊಳ್ಳುವುದು ಸೂಕ್ತ ಎಂದು ಗೋವಿಂದರಾವ ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಸಂಪನ್ಮೂಲಗಳ ಲಭ್ಯತೆ ಮತ್ತು ಬಳಕೆಯಲ್ಲಿ ಗದಗ ಜಿಲ್ಲೆಯ ಒಟ್ಟಾರೆ ಸ್ಥತಿಗತಿ ಸಮಪರ್ಕವಾಗಿಲ್ಲ. ಜಿಲ್ಲೆಯು ಕೈಗಾರಿಕಾ ಕಾಮಿರ್ಕರು, ಬ್ಯಾಂಕ್​ ಶಾಖೆಗಳು, ನಗರೀಕರಣ ಅಭಿವೃದ್ಧಿ ವಲಯದಲ್ಲಿ "ಅತೀ ತೀವ್ರ ಕೊರತೆ' ವರ್ಗದಲ್ಲಿ ಒಳಗೊಂಡಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಜಿಲ್ಲೆಯ ಷೆಡ್ಯೂಲ್​ ವಾಣಿಜ್ಯ ಬ್ಯಾಂಕಗಳು ಮತ್ತು ಸಹಕಾರಿ ಬ್ಯಾಂಕಗಳಿಂದ ಪ್ರತಿ ಲಕ್ಷ ಜನಸಂಖ್ಯೆಗೆ ನೀಡಲಾಗುವು ಕೈಗಾರಿಕಾ ಮತ್ತು ವಾಣಿಜ್ಯ ಸಾಲಗಳ ವಿಷಯದಲ್ಲಿ ಹಿಂದೆ ಬಿದಿದ್ದೆ. ಈ ವಲಯದಲ್ಲಿ ಗದಗ ಜಿಲ್ಲೆಯಲ್ಲಿ "ಅತ್ಯಂತ ತೀವ್ರ ಕೊರತೆ' ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ನೀರಿನಲ್ಲಿ ಉತ್ತಮ, ಶಿಕ್ಷಣದಲ್ಲಿ ತೀವ್ರ ಕೊರತೆ:
ಶುದ್ಧ ಕುಡಿಯುವ ನೀರು ಒದಗಿಸುವ ಟಕಗಳಲ್ಲಿ ಉತ್ತಮ ಸಾಧನೆ ಮಾಡಿರುವ ಜಿಲ್ಲೆಯು ಶಿಕ್ಷಣ ಮತ್ತು ಅದಕ್ಕೆ ಪೂರಕ ಸೌಲಭ್ಯ ಒದಗಿಸುವಲ್ಲಿ ಹಿಂದೆ ಬಿದ್ದಿದೆ. ಶಿಕ್ಷಣ, ಮಕ್ಕಳಿಗೆ ಅನುಗುಣವಾಗಿ ಸ್ಥಾಪಿತವಾಗಿರುವ ಶಾಲೆಗಳ ಸಂಖ್ಯೆ, ವೈದ್ಯರ ಸಂಖ್ಯೆ, ಆಸ್ಪತ್ರೆಗಳ ಹಾಸಿಗೆ ಸಂಖ್ಯೆ, ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರಗಳು ಸೇರಿದಂತೆ ಸಾಮಾಜಿಕ ಮೂಲಸೌಕರ್ಯ ವಲಯದಲ್ಲಿ ಗದಗ ಜಿಲ್ಲೆ "ಅತ್ಯಂತ ತೀವ್ರ ಕೊರತೆ' ಅನುಭವಿಸುತ್ತಿರುವ ಜಿಲ್ಲೆಯಾಗಿದೆ. ಶಿಕ್ಷಕ ಮತ್ತು ವಿದ್ಯಾಥಿರ್ಗಳ ಅನುಪಾತ, ಸರ್ಕಾರಿ ಶಾಲೆಗಳ ಸಂಖ್ಯೆ, ವೈಯಕ್ತಿಕ ಶೌಚಾಲಯಗಳ ನಿಮಾರ್ಣದಲ್ಲಿ ನಿರೀಕ್ಷತ ಮಟ್ಟದ ಸಾಧನೆ ತೋರಿಲ್ಲ ಎಂಬುದು ವರದಿಯಲ್ಲಿದೆ.
ತಾಲೂಕುವಾರು ಮಾಹಿತಿ:
ಆದಾಯ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ವಿವಿಧ ಮಾನಂದಡಗಳನ್ನು ಅನುಸರಿಸಿರುವ ಗೋವಿಂದರಾವ ಸಮಿತಿಯು ಆಯಾ ವಲಯದಲ್ಲಿ ಕೊರತೆ, ತೀವ್ರ ಕೊರತೆ ಮತ್ತು ಅತ್ಯಂತ ತೀವ್ರ ಕೊರತೆ ಅನುಭವಿಸುತ್ತಿರುವುದನ್ನು ಗಮನಿಸಿದೆ. ಈ ಮಾನಂಡಗಳ ಅನ್ವಯ, ಜಿಲ್ಲೆಯ ರೋಣ ತಾಲೂಕು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಲಿತಾಂಕ ಹೊಂದಿರುವ ತಾಲುಕುಗಳ ಪಟ್ಟಿಯಲ್ಲಿ 37ನೇ ಸ್ಥಾನ ಹೊಂದಿದ್ದು, ಆದಾಯ ವಲಯದಲ್ಲಿ ಅತೀ ತೀವ್ರ ಕೊರತೆ, ಆರೋಗ್ಯ ವಲಯದಲ್ಲಿ ಕೊರತೆ ಹಾಗೂ ಶಿಕ್ಷಣ ವಲಯದಲ್ಲಿ ಅತ್ಯಂತ ತೀವ್ರ ಕೊರತೆ ಅನುಭವಿಸುತ್ತಿದೆ. ಅದೇ ರೀತಿ ಜಿಲ್ಲೆಯ ಮುಂಡರಗಿ ತಾಲೂಕು 50ನೇ ಸ್ಥಾನದಲ್ಲಿದೆ. ಅದೇ ರೀತಿ ಆದಾಯ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ಅತಿ ಹಿಂದುಳಿದ ಲಿತಾಂಕ ಹೊಂದಿರುವ ತಾಲೂಕುಗಳ ಪೈಕಿ ನರಗುಂದ 6ನೇ ಸ್ಥಾನ, ಗದಗ ತಾಲೂಕು 51ನೇ ಸ್ಥಾನ ಹೊಂದಿದೆ. ಆದಾಯ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ಅಭಿವೃದ್ಧಿ ಹೊಂದಿದ ತಾಲೂಕುಗಳು ಜಿಲ್ಲೆಯಲ್ಲಿಲ್ಲ.