ಗದಗ ನಗರದಲ್ಲಿ ಜರುಗಿದ ಗಂಜೀ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಸದಾಶಿವಾನಂದ ಶ್ರೀಗಳು ಉದ್ಘಾಟಿಸಿದರು. ನಿಂಗಪ್ಪ ಪಡಗದ, ಎಸ್​. ವಿ. ಸಂಕನೂರ, ರಾಜು ಕುರಡಗಿ, ಮೋಹನ ಮಾಳಶೆಟ್ಟಿ, ಎಂ. ಎಂ. ಹಿರೇಮಠ, ವಿನಾಯಕ ಮಾನ್ವಿ, ಈರಣ್ಣ ಕರಭಿಷ್ಟಿ, ಎ್​. ವಿ. ಮರಿಗೌಡ್ರ, ರಮೇಶ ಸಂಕಣ್ಣವರ, ಗುರುಶಾಂತಗೌಡ ಮರಿಗೌಡ್ರ, ಮಂಜುನಾಥ ಲಕ್ಕುಂಡಿ, ಸೋಮಣ್ಣ ಪುರದ, ಶಂಕರ ಕರಭಿಷ್ಟಿ, ಪ್ರಶಾಂತ ಮುದೇಗೊಣ್ಣವರ ಇತರರು ಇದ್ದರು.  
ರಾಜ್ಯ

ಭಾರತೀಯ ಪರಂಪರೆ ನೆನೆಸುವ ಜಾತ್ರೆ: ಸದಾಶಿವಾನಂದ ಶ್ರೀಗಳು

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಉಸುಗಿನಗಟ್ಟಿ ಓಣಿಯ ಗಂಜಿ ಬಸವೇಶ್ವರ 64ನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶಿವಾನಂದ ಮಠದ ಅಭಿನವ ಸದಾಶಿವಾನಂದ ಶ್ರೀಗಳು, ಗಂಜಿ ಬಸವೇಶ್ವರ ದೇವಸ್ಥಾನ ಮತ್ತು ಜಾತ್ರೋತ್ಸವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಓಣಿಯು ಸರ್ವಜನಾಂಗದ ಶಾಂತಿಯ ತೋಟದಂತಿದೆ. ಒಂದು ಕಡೆ ಬಸವಣ್ಣನವರ ಜಯಂತಿ, ಮತ್ತೊಂದು ಕಡೆ ರಾಮಾರಾಧ್ಯರ ಜಯಂತಿ ಜೊತೆಗೆ ಗಂಜಿ ಬಸವಣ್ಣನ ಜಾತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಹಸುಗಳ ಪ್ರದರ್ಶನ ಮಾಡುತ್ತಾ ಗೋ ಸಾಕಾಣಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಎತ್ತುಗಳ ಓಟ ಸ್ಪರ್ಧೆ ಇಟ್ಟುಕೊಂಡು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಿತ್ಯ ಸಂಜೆ ಭಾರತೀಯ ಪರಂಪರೆಯನ್ನು ಸಾರುವ ಧಾಮಿರ್ಕ ಸಭೆಗಳನ್ನು ಏರ್ಪಡಿಸುತ್ತಿದ್ದಾರೆ ಎಂದರು ಶ್ರೀಗಳು ಹೇಳಿದರು.
ಸಭೆಯ ಅಧ್ಯತೆ ವಹಿಸಿದ್ದ ನಿಂಗಪ್ಪ ಪಡಗದ ಮಾತನಾಡಿ, ಒಕ್ಕಲಗೇರಿ ಓಣಿ, ವಿಭೂತಿ ಓಣಿ, ಉಸುಗಿನಕಟ್ಟಿ ಓಣಿ, ಖಾನತೋಟ, ಯಲಿಗಾರ ಪ್ಲಾಟ ಸೇರಿದಂತೆ ಅನೇಖ ನಗರದ ಭಕ್ತರು ಒಕ್ಕಟ್ಟಾಗಿದ್ದೇವೆ. ಈ ಒಗ್ಗಟ್ಟೆ ನಮಗೆ ಬಲವನ್ನು ತಂದುಕೊಟ್ಟಿದೆ ಎಂದರು.
ಎಸ್​. ವಿ. ಸಂಕನೂರ, ರಾಜು ಕುರಡಗಿ, ಮೋಹನ ಮಾಳಶೆಟ್ಟಿ, ಎಂ. ಎಂ. ಹಿರೇಮಠ, ವಿನಾಯಕ ಮಾನ್ವಿ, ಈರಣ್ಣ ಕರಭಿಷ್ಟಿ, . ವಿ. ಮರಿಗೌಡ್ರ, ರಮೇಶ ಸಂಕಣ್ಣವರ, ಗುರುಶಾಂತಗೌಡ ಮರಿಗೌಡ್ರ, ಮಂಜುನಾಥ ಲಕ್ಕುಂಡಿ, ಸೋಮಣ್ಣ ಪುರದ, ಶಂಕರ ಕರಭಿಷ್ಟಿ, ಪ್ರಶಾಂತ ಮುದೇಗೊಣ್ಣವರ ಇತರರು ಇದ್ದರು.