ಗಾಳಿ ವಿದ್ಯುತ್ ಕಂಪನಿಗಲಿಂದ ಮುಖ್ಯ ರಸ್ತೆಯ ಬದಿಯ ಫುಟ್ ಪಾತ್ ಹಾಳಾಗಿರುವ ದೃಶ್ಯ
ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅನುಮತಿ ಇಲ್ಲದೆ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ರಾಜ್ಯ ಹೆದ್ದಾರಿಯ ಫುಟ್ ಪಾತ್ ಪಾತ್ ಕಿತ್ತು ಹಾಕಿದ ಟನೆ ಜಿಲ್ಲೆಯ ಗದಗ ಲೆ$್ಮಶ್ವರ ಗದಗ ಹೆದ್ದಾರಿಯಲ್ಲಿ ನಡೆದಿದೆ. ಈ ವರಗೆ ರೈತರ ಮೇಲೆ ದಬ್ಬಾಳಿಕೆಗೆ ಕಾರಣವಾಗಿದ್ದ ಕಂಪನಿಗಳು ಈಗ ಸರ್ಕಅರಿ ಆಸ್ತಿಗಳಿಗೆ ಧಕ್ಕೆ ನಿಡುತ್ತಿವೆ.
ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ರ್ಟಬೈನ್ ನ ಬೃಹತ್ ರೆಕ್ಕೆಗಳನ್ನು ಸಾಗಾಟ ಮಾಡುವುದಕ್ಕಾಗಿ ರಸ್ತೆ ವಿಭಜಕ, ರಸ್ತೆಯ ಪಕ್ಕದಲ್ಲಿ ಜಾನುವಾರುಗಳು ಅಡ್ಡ ಬರದಂತೆ ಅಳವಡಿಸಿರುವ ಬೆಲೆಬಾಳುವ ಕಬ್ಬಿಣದ ಗ್ರಿಲ್, ಅದರ ಪಕ್ಕಕ್ಕೆ ಪಾದಚಾರಿಗಳಿಗಾಗಿ ನಿಮಿರ್ಸಿದ್ದ ಪುಟ್ ಪಾತ್ ಬೇಕಾಬಿಟ್ಟಿಯಾಗಿ ಕಿತ್ತು ಹಾಕಿದ್ದಾರೆ.
ಬೃಹತ್ ಗಾತ್ರದ ಯಂತ್ರಗಳನ್ನು ಸಾಗಾಟ ಮಾಡುವುದಕ್ಕಾಗಿ ಲೆ$್ಮರದಿಂದ ಗದಗ ನಗರಕ್ಕೆ ಬರುವ ರಸ್ತೆಯ ಎಡ ಬದಿಯಲ್ಲಿ 100 ಮೀಟರ್ ಕಿತ್ತುಹಾಕಲಾಗಿದೆ ಹಾಗೂ ಲೆ$್ಮಶ್ವರ ಕಡೆಯಿಂದ ಬರುವ ವಾಹನಗಳು ಎಡಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಲು ಕಲ್ಪಿಸುವ ಸರ್ವೀಸ್ ರಸ್ತೆಯಲ್ಲಿ 100 ಮೀಟರ್ ನಷ್ಟು ರಾಜ್ಯ ಹೆದ್ದಾರಿಯನ್ನೇ ಸಂರ್ಪೂಣ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೂ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೇ ಇರುವುದರಿಂದಾಗಿ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇದಕ್ಕೆ ಸರ್ಕಾರ ಅನುದಾನವನ್ನು ನೀಡುತ್ತಿಲ್ಲ ಎನ್ನುವ ಗಂಭೀರ ಆರೋಪಗಳ ಮಧ್ಯೆಯ ನಿರ್ಮಾಣವಾಗಿ ಇನ್ನು ಕೇವಲ ಒಂದು ವರ್ಷ ಕಳೆಯುವುದರೊಳಗಾಗಿಯೇ ಉತ್ತಮ ರಸ್ತೆಯನ್ನು ಕಂಪನಿ ಒಡೆದು ಹಾಕಲಾಗಿದೆ. ಈ ಬಗ್ಗೆ ಯಾರಿಗೂ ಸೂಕ್ತವಾದ ಮಾಹಿತಿಯನ್ನು ನೀಡಿಲ್ಲ. ಇದಕ್ಕಾಗಿ ಯಾವುದೇ ಪೂರ್ವಾನುಮತಿಯನ್ನು ಪಡೆದಿಲ್ಲ ಎನ್ನುವುದನ್ನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.
ಗದಗ ಜಿಲ್ಲೆಯಲ್ಲಿ 280 ಕ್ಕೂ ಅಧಿಕ ಗಾಳಿ ಯಂತ್ರಗಳು ಸ್ಥಾಪನೆಯಾಗಿವೆ. ಇನ್ನು ನೂರಕ್ಕೂ ಅಧಿಕ ಗಾಳಿಯಂತ್ರಗಳು ಸ್ಥಾಪನೆಯಾಗುವ ಹಂತದಲ್ಲಿವೆ. ಗ್ರಾಮೀಣ ಭಾಗದಲ್ಲಿ ಈಗಾಗಲೇ ಶೇ 75 ಕ್ಕೂ ಅಧಿಕ ರಸ್ತೆಗಳು ಈ ಬೃಹತ್ ವಾಹನಗಳ ಓಡಾಟದಿಂದ ಹಾನಿಯಾಗಿವೆ. ಅವುಗಳನ್ನು ಕೂಡಲೇ ಹಾನಿ ಮಾಡಿದ ಕಂಪನಿಗಳಿಂದಲೇ ದುರಸ್ಥಿ ಮಾಡಿಸಬೇಕು ಎಂದು ಜಿಲ್ಲೆಯ ಜನರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ನಡೆದ ತೆಮಾಸಿಕ ಕೆಡಿಪಿ ಸಭೆಯಲ್ಲಿಯೂ ಈ ಕುರಿತು ಗಂಭೀರ ಚರ್ಚೆ ಆಗಿದೆ. ಕಂಪನಿಗಳ ವರ್ತನೆಯ ವಿರುದ್ಧ ಎಲ್ಲಾ ಶಾಸಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಕೂಡಲೇ ಗ್ರಾಮೀಣ ರಸ್ತೆಗಳನ್ನು ಹಾಳು ಮಾಡಿದ ಕಂಪನಿಗಳಿಂದಲೇ ದುರಸ್ಥಿ ಮಾಡಿಸಬೇಕು ಎಂದು ಠರಾವು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿ 6 ತಿಂಗಳು ಕಳೆದಿದ್ದರೂ ಯಾವುದೇ ಪ್ರಗತಿಯೂ ಆಗಿಲ್ಲ.
ಈ ಸಮಸ್ಯೆ ಗಮನಕ್ಕೆ ಬಂದಿದೆ. ಕಂಪನಿಯುವರು ಮಾಡಿದ ಅಕ್ರಮದ ಬಗ್ಗೆ ಈಗಾಗಲೇ ನಾನು ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇನೆ. ಈ ರಸ್ತೆಯನ್ನು ಕೆಶಿಫ್ ನವರು ನಿಮಿರ್ಸಿದ್ದು, 7 ವರ್ಷಗಳ ನಿರ್ವಹಣೆ ಇದೆ. ನಮ್ಮ ಇಲಾಖೆಗೆ ಇಇನ್ನೂ ಹಸ್ತಾಂತರ ಮಾಡಿಲ್ಲ.
ಉಮೇಶ ನಾಯಕ. ಇ.ಇ ಲೋಕೋಪಯೋಗಿ ಇಲಾಖೆ ಗದಗ