ಸಣ್ಣ ನೀರಾರಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಗಳ ನಡುವಿನ ಕಾನೂನು ಸಮರದಿಂದ ಮೀನು ಕೃಷಿಗೆ ಹಿನ್ನೆಡೆ ಉಂಟಾಗಿದೆ. ಏತ ನೀರವಾರಿ ಕರೆಗಳಲ್ಲಿ ಮೀನು ಕೃಷಿ ನಡೆಸಲು ಸಣ್ಣ ನೀರಾವರಿ ಇಲಾಖೆ ಮೂಲಕವೇ ಇ&ಟೆಂಡರ್ ನಡೆಸಲು ಅನುಮತಿ ಕೋರಿ ಕಾನೂನು ಸಮರ ಸಾರಿದ್ದರಿಂದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಈ ಬಾರಿ ಮೀನು ಕೃಷಿ ಗಣನೀಯ ಇಳಿಕೆ ಕಂಡಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ನೇರ ಪ್ರಕ್ರಿಯೆಗಳಿಗೆ ಇಲಾಖೆ ತಡೆ ನೀಡಿದ ಹಿನ್ನೆಲೆ ಜಿಲ್ಲೆ ಹಾಗೂ ರಾಜ್ಯಾದ ಒಳನಾಡು ಜಿಲ್ಲೆಗಳಲ್ಲಿ ಮೀನು ಕೃಷಿಗೆ ಪ್ರಸಕ್ತಸಾಲಿನಲ್ಲಿ ಹಿನ್ನಡೆ ಉಂಟಾಗಿದೆ. ಜಿಲ್ಲೆಯಲ್ಲೂ ಸಹ ಮೀನು ಕೃಷಿ ಇಳುವರಿ ಕುಂಠಿತ ಗೊಂಡಿದೆ. ಹೀಗಾಗಿ 2024&25ನೇ ಸಾಲಿನಲ್ಲಿ 10200 ಟನ್ ಮೀನು ಕೃಷಿ ಇಳುವರಿ ಉತ್ಪಾದಿಸಿದ್ದ ಜಿಲ್ಲೆಯಲ್ಲಿ 2025&26ನೇ ಸಾಲಿನಲ್ಲಿ 7397 ಟನ್ ಗೆ ಕುಸಿದಿದೆ.
ಈ ಮೊದಲು ಜಿಲ್ಲೆಯ ಎಲ್ಲ ಕರೆಗಳಲ್ಲಿ ಮೀನು ಕೃಷಿ ನಡೆಸಲು ಮೀನುಗಾರಿಕೆ ಇಲಾಖೆ ಅನುಮತಿಯೊಂದೇ ಸಾಕಿತ್ತು. ಜಿಲ್ಲಾಮಟ್ಟದಲ್ಲಿಯೇ ಖಾಸಗಿ ವ್ಯಕ್ತಿಗಳಿಗೆ, ಸಂ ಸಂಸ್ಥೆಗಳಿಗೆ, ಸ್ವಸಹಾಯ ಸಂಗಳಿಗೆ, ಕೃಷಿ ಪತ್ರಿನ ಸಂಗಳು ಮೀನುಗಾರಿಕೆ ಇಲಾಖೆಯಿಂದ ವಾಷಿರ್ಕ ಅನುಮತಿ ಪಡೆದು ಕೆರೆಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದವು. ಹೀಗಾಗಿ ಮೀನು ಕೃಷಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಏತ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಕಡ್ಡಾಯ ಮತ್ತು ಇ&ಟೆಂಡರ್ ಮೂಲಕವೇ ಕೆರೆಗಳ ಗುತ್ತಿಗೆ ನೀಡಲು ನೀರಾವರಿ ಇಲಾಖೆ ಮುಂದಡಿ ಇಟ್ಟಿದೆ. ಕೆಲವಡೆ ಕೊರ್ಟ ಮೆಟ್ಟಿಲೇರಿ ಮೀನುಗಾರಿಕೆ ಇಲಾಖೆಗೆ ನಿರ್ಭಂದ ಹೇರಿದೆ. ಹೀಗಾಗಿ ಜಿಲ್ಲೆಯ 15 ಕೆರೆಗಳು ಮೀನುಗಾರಿಕೆ ಇಲಾಖೆ ಕೈತಪ್ಪಿ ಹೋಗುತ್ತಿದ್ದು, ಇನ್ಮುಂದೆ ಸಣ್ಣ ನೀರಾವರಿ ಇಲಾಕೆ ಈ ಕೆರೆಗಳ ಮೀನು ಕೃಷಿ ನಿರ್ವಹಣೆ ನಡೆಸಲಿದೆ.
ಜಿಲ್ಲೆಯಲ್ಲಿ ಜಂತ್ಲೀಶಿರೂರು, ಬರದೂರು, ಹಿರೇವಡ್ಡಟ್ಟಿ, ಬಟ್ಟೂರು, ಚಬ್ಬಿ, ಗದಗ ಭೀಷ್ಮಕೆರೆ ಸೇರಿದಂತೆ 1044 ಹೆಕ್ಟರ್ ವ್ಯಾಪ್ತಿಯ 15 ಏತ ನೀರಾವರಿ ಕೆರೆಗಳಿವೆ. ಈ ಕೆರೆಗಳಿಗೆ ನದಿ ಪಾತ್ರದಿಂದ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆ ಪ್ರತಿ ವರ್ಷ ಅನುದಾನ ವ್ಯಯಿಸುತ್ತದೆ. ಹೀಗಾಗಿ ಈ ಕೆರೆಗಳಲ್ಲಿ ನಡೆಸುವ ಮೀನುಗಾರಿಕೆ ಲಾಭವನ್ನೂ ನೀರಾವರಿ ಇಲಾಖೆಯೇ ಪಡೆಯಬೇಕೆಂಬ ಉದ್ದೇಶ ಹೊಂದಿದ್ದರಿಂದ ಮೀನುಗಾರಿಕೆ ಇಲಾಖೆ ವಿರುದ್ಧ ಕೆಲ ಪ್ರಕರಣಗಳು ನ್ಯಾಯಾಂಗ ಮೆಟ್ಟಿಲೇರಿವೆ. ಹೀಗಾಗಿ ಏತ ನೀರವಾರಿ ಕೆರೆಗಳಲ್ಲಿ ಮೀನುಗಾರಿಕೆ ಇಲಾಖೆ ಮೀನುಕೃಷಿ ನಡೆಸಿಲ್ಲ. ಇನ್ನೂಳಿದಂತೆ ಗ್ರಾಪಂ, ಜಿಪಂ ಅಡಿಯಲ್ಲಿ ಇರುವ ಕೆರೆಗಳಲ್ಲಿ ಮಾತ್ರ ಮೀನು ಕೃಷಿ ನಡೆಸಲಾಗಿದೆ.
ರಾಜ್ಯದಲ್ಲಿ ಒಟ್ಟು 3764 ಏತನೀರಾವರಿ ಕೆರೆಗಳಿವೆ. ಒಟ್ಟು 1.50 ಲಕ್ಷ ಹೆಕ್ಟೇರ್ ಜಲವಿಸ್ತಿರ್ಣವಿದೆ. 2014ರ ಕರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ, 20218ರ ಸೆಕ್ಷನ್ 5/1ರ ಅಡಿಯಲ್ಲಿ ಏತ ನೀರಾವರಿ ಕೆರೆಗಳ ಒತ್ತುವರಿ ತೆರವು ಮತ್ತು ಮೀನುಗಾರಿಕೆ ಸಂಬಮಧಿಸಿದ ಚಟುವಟಿಕೆಯನ್ನು ಪ್ರೋತ್ಸಾಹಿಸಲು ನೀರಾವರಿ ಇಲಾಖೆಗೆ ಹಕ್ಕನ್ನು ಒದಗಿಸಲಾಗಿದೆ. ಈ ನಿಯಮದಡಿ ನೀರಾವರಿ ಇಲಾಖೆಯುವ ಮೀನು ಕೃಷಿಗಾಗಿ ತಮ್ಮ ಹಕ್ಕನ್ನು ಪ್ರತಿಪಾಧಿಸುತ್ತಿದೆ.
ಜಿಲ್ಲೆಯಲ್ಲಿ ಮೀನುಗಾರಿಕೆ ಕೃಷಿಗೆ ಉತ್ತಮ ವಾತಾವರಣ ಇದೆ. ಆದರೆ ನಿರಾವರಿ ಇಲಾಖೆಯ ನಿಯಮಗಳಿಂದ ಏತ ನಿರಾವರಿ ಕೆರೆಗಳಲ್ಲಿ ಮೀನು ಕೃಷಿ ನಡೆಸಲು ಸಾಧ್ಯ ಆಗುತ್ತಿಲ್ಲ. ಇಟೆಂಡರ್ ಮೂಲಕ ನಾವೇ ಮೀನುಗಾರಿಕೆ ನಿರ್ವಹಣೆ ಮಾಡುತ್ತೇವೆ ಎಂದು ನೀರಾವರಿ ಇಲಾಖೆ ಕೋರ್ಟ ಮೆಟ್ಟಿಲೇರಿದೆ. ಏನೆ ಇದ್ದರೂ., ಗದಗ ಜಿಲ್ಲೆಗೆ ಇನ್ನೂ ಹೆಚ್ಚಿನ ಅನುದಾನ ಸಿಕ್ಕರೆ ಮೀನುಕೃಷಿ ಇಳುವರಿ ಹೆಚ್ಚಿಸಬಹುದು.
ನಾಗರಾಜ ಸಿ ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ