ಗದಗ ರಾಚೋಟೇಶ್ವರ ನಗರದ ಉದ್ಯಾನವನ ಕಬಳಿಕೆ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರವಿ ಗುಂಜೀಕರ, ಸು-ರಸಿಂಹ ೂರ್ಪಡೆ, ಉಪಾಧ್ಯ ಡಾ. ಎಸ್. ಆರ್. ಹಿರೇಮಠ, ಬಸವರಾಜ ಹಡಪದ, ಅಂಬರೀಶ ಇಟಗಿ, ಎಸ್. ಪಿ. ಪಾವನ, ನಂದಾ ಶಾಸ್ತ್ರಿ, ಈರಣ್ಣ ನವಲಿ ಇತರರು ಇದ್ದರು.
ಸೂಕ್ತ ಕಾನೂನು ಕೈಗೊಳ್ಳಲು ಆಗ್ರಹ:
ನಕಲಿ ದಾಖಲೆ ಸೃಷ್ಟಿಸಿ ರಾಚೋಟೆಶ್ವರ ನಗರದ ನಿವಾಸಿಗಳಿಗೆ ತೊಂದರೆ ನೀಡುತ್ತ ಸರ್ಕಾರಿ ಕಾಮಗಾರಿಗಳಿಗೆ ಅನಗತ್ಯ ಕಾರಣ ನಿಡಿ ಅಡೆತಡೆ ಮಾಡುತ್ತಿರುವವರು ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಚೋಟೇಶ್ವರ ನಗರದ ನಿವಾಸಿಗಳು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲಾ ಸರ್ಕಾರಿ ನೌಕರ ಸಂದ ಮಾಜಿ ಅಧ್ಯಕ್ಷ ಹಾಗೂ ರಾಚೋಟೇಶ್ವರ ನಗರ ೇಮಾಭಿವೃದ್ದಿ ಟ್ರಸ್ಟ್ನ ಅಧ್ಯ ರವಿ ಗುಂಜೀಕರ ಮಾತನಾಡಿ, ನಗರದ ವಾರ್ಡ ನಂ.22ರ ರಾಚೋಟೇಶ್ವರ ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ವರ್ಷಗಳಿಂದ ಪಾರ್ಕ ಸಮೇತ ಮಂಜೂರಾಗಿರುವ ಲೇಔಟ್ದಲ್ಲಿ ಉದ್ಯಾನವನ ಇದೆ. ಇಲ್ಲಿನ ಸಾರ್ವಜನಿಕರು ಹೆಚ್ಚಿನ ಬೇಡಿಕೆಯೊಂದಿಗೆ ನಿವೇಶನಗಳನ್ನು ಖರೀದಿಸಿ ಮನೆ ಕಟ್ಟಿಕೊಂಡು ವಾಸ ಆಗಿದ್ದಾರೆ. ಆದರೆ, ಲೇಔಟ್ ಮಾಲಿಕರು ಎಂದು ಹೇಳಿಕೊಂಡು ಕೆಲವರು ಒಟ್ಟು ಮೊಕ್ತಿಯಾರ್ ಪತ್ರ ಹೊಂದಿದ್ದೇವೆ ಎಂದು ಹೇಳುತ್ತ ಉದ್ಯಾನವನಕ್ಕೆ ಬಂದು ಈ ಉದ್ಯಾನವನದ ಸ್ಥಳದಲ್ಲಿ ತಮ್ಮ ನಿವೇಶನಗಳು ಇವೆ ಎಂದು ಸುಳ್ಳು ಹೇಳಿ ಶುದ್ಧ ನೀರಿನ ಟಕದ ಸರ್ಕಾರಿ ಕಾಮಗಾರಿ ನಡೆಸಲು ತೊಂದರೆ ಕೊಡುತ್ತಿದ್ದಾರೆ. ಗುತ್ತಿಗೆದಾರರಿಗೆ, ಕಾಮಿರ್ಕರಿಗೆ ಹೆದರಿಸಿ, ಬೆದರಿಸಿ ಗೂಂಡಾ ವರ್ತನೆ ಮಾಡುತ್ತಿದ್ದಾರೆ. ಅಲ್ಲದೇ ಈ ಲೇಔಟ್ನಲ್ಲಿ ಮಂಜೂರಾದ ಪ್ರಕಾರ ಕೇವಲ 48 ಪ್ಲಾಟಗಳು ಇದ್ದು, ಉದ್ಯಾನವನ ಜಾಗದ ನಂ.48ರಲ್ಲಿ ವಿಭಜನೆ ತೋರಿಸಿ ಕ್ರ.ಸಂ.49,50,51 ಹಾಗೂ 52ನೇ ನಿವೇಶನಗಳು ತಮ್ಮವು ಇವೆ ಎಂದು ಉದ್ಯಾನವನ ಜಾಗೆಯನ್ನು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಡಾ. ಎಸ್. ಆರ್. ಹಿರೇಮಠ, ಬಸವರಾಜ ಹಡಪದ, ಅಂಬರೀಶ ಇಟಗಿ, ಎಸ್. ಪಿ. ಪಾವನ, ನಂದಾ ಶಾಸ್ತ್ರಿ, ಈರಣ್ಣ ನವಲಿ, ನೀಲಮ್ಮ ಬೋಳನವರ, ಶರಣಪ್ಪ ಬೋಳನವರ, ಎಂ. ಬಿ. ತುಪ್ಪದ, ಮಂಜುನಾಥ ಮಾನೆ, ತೋಟಪ್ಪ ಕರಮುಡಿ ಸೇರಿದಂತೆ ಇತರರು ಇದ್ದರು.
2017-18 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಅಮೃತ ಸಿಟಿ ಯೋಜನೆಯ ಅಡಿಯಲ್ಲಿ ಒಟ್ಟು 42.09 ಲ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಸಂರ್ಪೂಣ ಅಭಿವೃದ್ಧಿಪಡಿಸಲಾಗಿದೆ. ಸುಸಜ್ಜಿತವಾಗಿ ರ್ಪೂಣಗೊಂಡ ಈ ಉದ್ಯಾನವನದಲ್ಲಿ ಈಗ ನಮ್ಮ ನಿವೇಶನಗಳಿವೆ ಎಂದು ಖಾಸಗಿ ವ್ಯಕ್ತಿಗಳು ಹಕ್ಕು ಸಾಧಿಸುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಶಾಸಕ ಹಾಗೂ ಕಾನೂನು ಸಚಿವರು ಹಮನ ಹರಿಸಿ ಸಮಸ್ಯೆ ಬಗೆಹರಿಸಬೇಕು.