Gadag Delimitation story 
ರಾಜ್ಯ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೂ ಇಲ್ಲ ಅನುದಾನ

ಹೊಲಗದ್ದೆ ದಾರಿ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಿಲ್ಲ.
ಯೋಜನಾ ಸಮಿತಿ ವರದಿ! ವಲಯವಾರು ಬೇಡಿಕೆ ಎಷ್ಟು
ಶಿವಾನಂದ ಹಿರೇಮಠ ಗದಗ
ಆಯಾ ಜಿಲ್ಲಾ ಯೋಜನಾ ಸಮಿತಿಗಳು ಸಲ್ಲಿಸುವ ಬೇಡಿಕೆಗಳ ಪಟ್ಟಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಅನುದಾನ ಮೀಸಲಿಡಲು ಸಾಧ್ಯ ಆಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದ್ದು, ವಿಕೇಂದ್ರಿಕರಣ ತತ್ವ ಮತ್ತು ವಿಕೇಂದ್ರಿಗಕರ ಸಮಿತಿಯ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ. ಪ್ರತಿ ಗ್ರಾಮಗಳ ಬೇಡಿಕೆಗಳ ಅನುಸಾರ ತಿಂಗಳುಗಟ್ಟಲೆ ವರದಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದರೂ ಸಹ ಪ್ರಸ್ತಾವನೆಗಳು ಕಾಗದದ ತುಂಡಾಗುತ್ತಿದೆಯೇ ವಿನರ್ಹ ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬ ಬೇಸರ ಆಡಳಿತಾಧಿಕಾರಿಗಳಲ್ಲಿ ಮೂಡಿರುವುದು ಸಹ. ಗದಗ ಜಿಲ್ಲೆಯಲ್ಲೂ ಸಹ ಅನುದಾನ ಬಾರದೆ 2026&27ನೇ ಸಾಲಿ ಯೋಜನೆಗಳು ಕೇವಲ ವರದಿ ಸಲ್ಲಿಕೆಗೆ ಸೀಮಿತವಾಗಿದ್ದು, 2027&28ನೇ ಸಾಲಿನ ಯೋಜನೆಗಳ ಸಿದ್ಧಪಡಿಸುವಿಕೆಗೆ ಅಧಿಕಾರಿಗಳಲ್ಲಿ ಉತ್ಸಾಹ ಮೂಡುತ್ತಿಲ್ಲ.
7 ತಾಲೂಕು, 122 ಗ್ರಾಪಂ ಹಾಗೂ 330 ಗ್ರಾಮಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಶೇ. 63ರಷ್ಟು ಮಳೆ ಆಧಾರಿತ ಕೃಷಿ ಭೂಮಿ ಇದೆ. ಜಿಲ್ಲೆಗೆ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳ ಅಭಿವೃದ್ಧಿಗೆ ಹೆಚ್ಚುವರಿ 106 ಕೋಟಿ ಅನುದಾನಕ್ಕೆ ಯೋಜನಾ ಕರಡು ಪ್ರತಿ ಸಲ್ಲಿಕೆ ಆಗಿತ್ತು. ಆದರೆ, ಅದರಲ್ಲಿ ಹೊಲಗದ್ದೆಗಳ ರಸ್ತೆ, ಒಳಗಟ್ಟಿ ನಿರ್ಮಾಣ, ಒಡ್ಡು ನಿರ್ಮಾಣ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಬಜೆಟ್​ ಹಂಚಿಕೆ ಮಾಡಲು ಸರ್ಕಾರ ಹಿಂದಡಿ ಇಟ್ಟಿತು.
ವಿಶೇಷ ಕಾರ್ಯಕ್ರಮಗಳಿಗೂ ಇಲ್ಲ ಅನುದಾನ:
2026 - 27ನೇ ಸಾಲಿನ ಗ್ರಾಪಂ ಬೇಡಿಕೆಗಳ ಪಟ್ಟಿಯಲ್ಲಿ ನೆಗಳ ಪ್ರಕಾರ ಹೊಲದ ದಾರಿ ನಿರ್ಮಾಣಕ್ಕೆ 115 ಕೋಟಿ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳ ಅಭಿವೃದ್ಧಿಗೆ 132 ಕೋಟಿ ರೂ., ನೀರು ಮತ್ತು ಮಣ್ಣಿನ ಸಂರಕ್ಷಣೆಗೆ 46 ಕೋಟಿ ರೂ., ಹಾಗೂ ಶಾಲಾ ಶೌಚಾಲಯ ಹಾಗೂ ಶಾಲೆಗಳ ನೀರಿನ ವ್ಯವಸ್ಥೆ ಕಲ್ಪಿಸಲು 9.62 ಕೋಟಿ ರೂ., ಬೇಡಿಕೆ ಸಲ್ಲಿಸಲಾಗಿತ್ತು. ಇಂತಹ ವಿಶೇಷ ಕಾರ್ಯಕ್ರಮಗಳಿಗಾದರೂ ಸರ್ಕಾರ ಅನುದಾನ ಮೀಸಲಿಡಬೇಕಿತ್ತು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರಿಕೃತ ವ್ಯವಸ್ಥೆ ಪ್ರಭಾವ:
ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರಿಗೊಳಿಸುವ ಮೂಲಕ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದ ರಾಜ್ಯ ಸರ್ಕಾರವೇ ಸ್ವತಃ ಅನುದಾನ ಬಿಡುಗಡೆ ಮಾಡದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಜಡತ್ವಕ್ಕೆ ಸಾಯಾಗಿದೆ. ಗದಗ ಜಿಲ್ಲೆಯವರೇ ಆದ ಮಾಜಿ ಶಾಸಕ ಹಾಗೂ ರಾಜ್ಯ ವಿಕೇಂದ್ರಿಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಿ.ಆರ್​. ಪಾಟೀಲ ಅವರು ಕೂಡ ಅನುದಾನ ಬಿಡುಗಡೆ ಮಾಡಿಸಲು ವಿಲರಾಗಿದ್ದಾರೆ. ವಿಕೇಂದ್ರಿಕರಣ ವ್ಯವಸ್ಥೆ ಮೂಲಕ ಗ್ರಾಮಗಳ ಅಭಿವೃದ್ಧಿಯ ಕನಸು ಕಾಣುತ್ತಿರುವ ಡಿ.ಆರ್​. ಪಾಟೀಲರು ರಾಜ್ಯ ಉಪಾಧ್ಯಕ್ಷರಾದ ಮೇಲೆ ವಿಕೇಂದ್ರಿಕರಣ ಸಮಿತಿಗೆ ಹೊಸ ಹುಮ್ಮಸ್ಸು ಬಂದಿದೆ. ಕಳೆದ ಹಲವು ವರ್ಷಗಳಿಂದ ನಿಸ್ತೇಜವಾಗಿದ್ದ ಸಮಿತಿಗೆ ಚುರುಕು ಮುಟ್ಟಿಸಿದ್ದರು. ಎಲ್ಲ ಜಿಲ್ಲೆಗಳಿಂದ ಗ್ರಾಮಗಳ ಅಭಿವೃದ್ಧಿ ಕುರಿತು ಯೋಜನಾ ವರದಿಗಳನ್ನು ಸಿದ್ದಪಡಿಸಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಶಾಸಕಾಂಗ ವ್ಯವಸ್ಥೆ ಪ್ರಭಾವದ ಮುಂದೆ ವಿಕೇಂದ್ರಿಕರಣ ವ್ಯವಸ್ಥೆ ತಲೆ ಭಾಗಿದಂತೆ ಕಾಣುತ್ತಿದೆ.
ಕೋಟ್​:
ಜಿಲ್ಲೆಗೆ ಅನುದಾನ ಬಿಡುಗಡೆ ಆಗಬೇಕುನ್ನುವ ಇಚ್ಚಾಶಕ್ತಿ ನಮಗೂ ಇದೆ. ಸರ್ಕಾರ ಸೂಚಿದ ಕಾರ್ಯವನ್ನು ತಮ್ಮದೇ ಪ್ರಮಾಣಿಕವಾಗಿ ಮಾಡಲಾಗಿದೆ. ಅನುದಾನ ಮೀಸಲೀಡುವ ಮತ್ತು ಬಿಡುಗಡೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಕಳೆದ ಸಾಲಿನಂತೆ ಈ ಬಾರಿಯೂ ಜಿಲ್ಲೆಯ ಗ್ರಾಪಂಗಳಿಂದ ಬೇಡಿಕೆ ಪಟ್ಟಿ ಸಂಗ್ರಹಿಸಲಾಗುತ್ತಿದೆ.
ಸಿ. ಎನ್​. ಶ್ರೀಧರ, ಜಿಲ್ಲಾಧಿಕಾರಿ