ಗದಗ ಜಿಲ್ಲಾಡಳಿತ ಭವನದಲ್ಲಿ ಅಬೇಂಡ್ಕರ ಜಯಂತಿ ನಿಮಿತ್ಯ ರಕ್ತದಾನ ಶಿಬಿರ ಜರುಗಿತು. ಸಿ.ಎನ್​. ಶ್ರೀಧರ, ಡಾ. ದುರಗೇಶ್​ ಕೆ.ಆರ್​, ಗಂಗಪ್ಪ ಎಂ, ಶ್ರೀನಿವಾಸ ಮೂತಿರ್ ಕುಲಕಣಿರ್, ಡಾ. ಎಸ್​. ಎಸ್​. ನೀಲಗುಂದ, ಡಾ. ನಂದಾ ಹಣಬರಟ್ಟಿ, ಆರ್​. ಎಸ್​. ಬುರುಡಿ, ಬಸವರಾಜ ಬಳ್ಳಾರಿ ಇದ್ದರು. 
ರಾಜ್ಯ

ರಕ್ತದಾನ ಶ್ರೇಷ್ಠದಾನ: ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ರಕ್ತದಾನವು ಶ್ರೇಷ್ಠದಾನವಾಗಿದೆ. ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ, ಅಪಘಾತಗಳು ಸಂಭವಿಸಿದಾಗ, ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ಮತ್ತೊಂದು ಜೀವ ಉಳಿಸಲು ಸಹಾಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್​.ಶ್ರೀಧರ ಹೇಳಿದರು.
ಗದಗ ಜಿಲ್ಲಾಡಳಿತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ. ಎಚ್​. ಪಾಟೀಲ ವೈದ್ಯಕಿಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಭಾರತ ರತ್ನ ಡಾ. ಬಿ.ಆರ್​. ಅಂಬೇಡ್ಕರ ಅವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್​ ರವರ 119ನೇ ಜಯಂತ್ಯೋತ್ಸವ ನಿಮಿತ್ಯ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಿದ ತೃಪ್ತಿ ಹಾಗೂ ಮಾನಸಿಕ ಶಾಂತಿ ಇರುತ್ತದೆ. ರಕ್ತದಾನವು ದೇಹದಲ್ಲಿ ಹೊಸ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದರು.
ಡಾ. ದುರಗೇಶ್​ ಕೆ.ಆರ್​, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಶೀಲ್ದಾರರಾದ ಶ್ರೀನಿವಾಸ ಮೂತಿರ್ ಕುಲಕಣಿರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್​. ಎಸ್​. ನೀಲಗುಂದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಡಿಡಿಪಿಐ ಆರ್​. ಎಸ್​. ಬುರುಡಿ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಸೇರಿದಂತೆ ಸಮಾಜದ ಗಣ್ಯರು, ಹಿರಿಯರು, ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.