ಗದಗನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಸುದ್ದಿಗೋಷ್ಟಿ ನಡೆಸಿದರು. ಸಿ. ಸಿ. ಪಾಟೀಲ, ರಾಜು ಕುರುಡಗಿ, ಎಸ್​. ವಿ. ಸಂಕನೂರ, ಎಂ. ಎಸ್​. ಕರೀಗೌಡ್ರ ಇತರರು ಇದ್ದರು. 
ರಾಜ್ಯ

ಮೋದಿ ಸರ್ಕಾರದ 12 ವರ್ಷಗಳ ವಿಕಾಸ, ವಿಶ್ವಾಸ ಮತ್ತು ಜನಕಲ್ಯಾಣದ ಪ್ರಯಾಣ: ಡಿ. ವಿ. ಸದಾನಂದಗೌಡ್ರ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ದೇಶ ಕಳೆದ 12 ವರ್ಷಗಳಲ್ಲಿ ಕೇವಲ ದೇಶದ ಚಿತ್ರಣವನ್ನು ಮಾತ್ರವಲ್ಲದೆ ಅದೃಷ್ಟವನ್ನು ಸಹ ಬದಲಾಯಿಸಿದೆ. ಜನತೆಯ ಅಚಲ ವಿಶ್ವಾಸ ಮತ್ತು ಸರ್ಕಾರದ ಸೇವಾ ಮನೋಭಾವನೆಯೇ ಈ 12 ವರ್ಷಗಳ ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹೇಳಿದರು.
ನಗರದ ಖಾಸಗಿ ಹೊಟೆಲ್​ ನಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2014 ರಲ್ಲಿ ದೇಶದ ಜನತೆ ನರೇಂದ್ರ ಮೋದಿ ಅವರ ಮೇಲೆ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದರು. ನಿರಂತರ 12 ವರ್ಷಗಳ ಕಾಲ ದೇಶದ ಜನತೆ ಅಭಿವೃದ್ಧಿ ಪರ ಇರುವ ಬಿಜೆಪಿ ನೇತೃತ್ವದ ಎಡಿಎ ಗೆ ಮತ ನೀಡುತ್ತಿದೆ. ಜನರ ಆಶಯದಂತೆ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. "ಪಿಎಂ ಕಿಸಾನ್​ ಸಮ್ಮಾನ್​ ನಿಧಿ' ಮೂಲಕ ರೈತರ ಹಿತಾಸಕ್ತಿ ಕಾಮಾಡುತ್ತಿದೆ. ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗೆ ಮೊದಲ ಆದ್ಯತೆ ಎಂಬುದಕ್ಕೆ ಕೇಂದ್ರ ಸರ್ಕಾರ ನಿದರ್ಶನ. ಮೋದಿ ಸರ್ಕಾರವು "ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​, ಸಬ್​ ಕಾ ವಿಶ್ವಾಸ್​' ಎಂಬ ಮಂತ್ರವನ್ನು ಕೇವಲ ಒಂದು ೂಷಣೆ ಆಗಿರಿಸದೆ ಅದನ್ನು ಒಂದು ಜನಾಂದೋಲನವನ್ನಾಗಿ ಪರಿವತಿರ್ಸಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಬಂದ ನಂತರ ದೇಶದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇಂದು ದೇಶದ ಗಡಿಮತ್ತು ಆಂತರಿಕ ಭದ್ರತೆಯು ಸಂರ್ಪೂಣವಾಗಿ ಬಲಗೊಂಡಿವೆ. ನವ ಭಾರತ ವಿರುದ್ಧ ಯಾವುದೇ ಕೃತ್ಯ ಎಸಗಿದರೆ ತಕ್ಕ ಉತ್ತರ ನೀಡಲಾಗುತ್ತಿದೆ. ಸರ್ಕಾರದ ಬಲವಾದ ಇಚ್ಛಾಶಕ್ತಿಯಿಂದಾಗಿ ದೇಶವು ಇಂದು ನಕ್ಸಲ್​ ಮುಕ್ತವಾಗಿದೆ ಎಂದು ಡಿ.ವಿ. ಸದಾನಂದಗೌಡ ಹೇಳಿದರು.
ಜನಧನ ಯೋಜನೆಯಡಿ 58 ಕೋಟಿಗೂ ಹೆಚ್ಚು ಬ್ಯಾಂಕ್​ ಖಾತೆಗಳನ್ನು ತೆರೆದಿದ್ದು, ಅದರಲ್ಲಿ 32 ಕೋಟಿಗೂ ಹೆಚ್ಚು ಖಾತೆಗಳನ್ನು ಮಹಿಳೆಯರೇ ಹೊಂದಿರುವುದು ಸಮಗ್ರ ಅಭಿವೃದ್ಧಿಯ ಪ್ರತಿಕವಾಗಿದೆ. ಆಯುಷ್ಮನ್​ ಭಾರತ ಯೋಜನೆಯಡಿ 60 ಕೋಟಿಗೂ ಹೆಚ್ಚು ಹೆಲ್ತ್​ ಕಾರ್ಡ್​ಗಳನ್ನು ವಿತರಿಸಲಾಗಿದೆ. ಪ್ರಧಾನಮಂತ್ರಿ ಸುರಾ ಬಿಮಾ ಯೋಜನೆ ಮೂಲಕ 58 ಕೋಟಿಗೂ ಹೆಚ್ಚು ಜನರಿಗೆ ಬಲಿಷ್ಠ ರಣಾ ಕವಚ ಸಿಕ್ಕಿದೆ. ಪಿಎಂ ಆವಾಸ್​ ಯೋಜನೆಯಡಿ 4 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನಿಮಿರ್ಸಿ ಕೊಡಲಾಗಿದೆ. ಉಜ್ವಲ ಯೋಜನೆಯ ಮೂಲಕ 11 ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನೀಲ ಸಂಪರ್ಕವನ್ನು ಕಲ್ಪಿಸಲಾಗಿದೆ. "ಜಲ ಜೀವನ್​ ಮಿಷನ್​ ಯೋಜನೆ' ಅಡಿಯಲ್ಲಿ 16 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿಯ ಮೂಲಕ ಸ್ವಚ್ಛ ಕುಡಿಯುವ ನೀರನ್ನು ತಲುಪಿಸಲಾಗಿದೆ. "ಸ್ವಚ್ಛ ಭಾರತ ಮಿಷನ್​ ಅಡಿಯಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿಮಿರ್ಸುವ ಮೂಲಕ ದೇಶದಲ್ಲಿ ಸ್ವಚ್ಛತೆಯ ಹೊಸ ಕ್ರಾಂತಿಯನ್ನು ಸೃಷ್ಟಿಸಲಾಗಿದೆ. ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ 74 ಲಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಯಾವುದೇ ತೊಡಕುಗಳಿಲ್ಲದೆ ಸಾಲ ದೊರಕಿದೆ. ಮುದ್ರಾ ಯೋಜನೆಯಡಿ 57 ಕೋಟಿಗೂ ಹೆಚ್ಚು ಸಣ್ಣ ಉದ್ಯಮಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ವಿತರಿಸಲಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ 30 ಲ ಜನರು ಪ್ರಯೋಜನವನ್ನು ಪಡೆದಿದ್ದಾರೆ. ಈ ಸಾಲಿನ ಬಜೆಟ್​ನಲ್ಲಿ ಬುಡಕಟ್ಟು ಸಮಾಜದ ಕಲ್ಯಾಣಕ್ಕಾಗಿ 15,000 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸಿ. ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ, ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ, ಎಂ. ಎಸ್​. ಕರೀಗೌಡ್ರ, ಆರ್​. ಕೆ. ಚವ್ಹಾಣ, ಬೂದಪ್ಪ ಹಳ್ಳಿ, ಈಶ್ವರಪ್ಪ ಮುನವಳ್ಳಿ, ಸುಧೀರ ಕಾಟಿಗರ, ಶಿವು ಹಿರೇಮನಿಪಾಟೀಲ, ಬಿ.ಎಸ್​.ಚಿಂಚಲಿ, ಕೆ.ಪಿ.ಕೋಟಿಗೌಡ್ರ, ಅನೀಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ರಮೇಶ ಸಜ್ಜಗಾರ ಹಲವರು ಇದ್ದರು.