ಗದಗ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ಗದಗ: ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಳವಡಿಸಿರುವ ಎಸಿನಲ್ಲಿ ಇರುವ ತಾಮ್ರದ ಪೈಪ್ ಕಳ್ಳತನದಿಂದ ರೋಗಿಗಳು ಪರದಾಡುವಂತಾದ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್ ಸ್ಥಗಿತಗೊಂಡಿದೆ.
ಈ ಆಸ್ಪತ್ರೆಯಲ್ಲಿ ಕಳೆದ 15 ದಿನಗಳ ಹಿಂದೆ ಇದೇ ರೀತಿ ಕಳ್ಳತವಾಗಿತ್ತು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತೆ ತಾಮ್ರದ ಪೈಪ್ಲೈನ್ ಹಾಕಿದ್ದರು. ಈಗ ಭದ್ರತೆ ಇಲ್ಲದ ಕಾರಣ ಮತ್ತೆ ಕಳ್ಳತನ ಮಾಡಲಾಗಿದೆ.
ಈ ಮೊದಲು ಆಸ್ಪತ್ರೆಯ ಆಕ್ಸಿಜನ್ ಪೈಪ್ ಕಳ್ಳತನವಾಗಿದ್ದವು. ಇದೀಗ ಆಸ್ಪತ್ರೆಯ ಸೆಂಟ್ರಲೈಜ್ ಎಸಿಯ ಯುನಿಟ್ ಕಾಪರ್ ಪೈಪ್ಕಳ್ಳತನವಾಗಿವೆ. 8 ಎಸಿ ಪೈಪ ಒಳಭಾಗದ ತಾಮ್ರದ ಪೈಪ ಕಳ್ಳತನ ಮಾಡಿದ್ದಾರೆ. ಜತೆಗೆ ಎಸಿ ಪೈಪ್ಲೈನ್ ಕತ್ತರಿಸಿದ್ದಾರೆ. ಹಾಗಾಗಿ ಆಸ್ಪತ್ರೆ ಎಸಿ ಬಂದ್ ಆಗಿವೆ. ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ. ರೋಗಿಗಳ ಸಂಬಂಧಿಕರು ಮನೆಯಿಂದ ಫ್ಯಾನ್ ತರುತ್ತಿದ್ದಾರೆ. ಪೈಪ್ ಕಳ್ಳತನ ಪ್ರಕರಣದಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಆತಂಕ ಎದುರಾಗಿದೆ.
ಇಲ್ಲಿ ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಪರೇಷನ್ ಥಿಯೇಟರ್, ಹೆರಿಗೆ ಕೋಣೆಗೆ ಎಸಿ ಸಂರ್ಪೂಣ ಬಂದ್ ಆಗಿವೆ. ಆದ್ದರಿಂದ, ಎಸಿ ಇಲ್ಲದೇ ಆಪರೇಷನ್ ಥಿಯೇಟರ್ ಬಂದ್ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲಿಯ ಅವ್ಯವಸ್ಥೆಯಿಂದಾಗಿ ರೋಗಿಗಳನ್ನು ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.
ಈ ಮೊದಲು ಈ ಆಸ್ಪತ್ರೆ ವೈದ್ಯಕಿಯ ಶಿಕ್ಷಣ ಇಲಾಖೆಗೆ ಒಳಪಟ್ಟಿತ್ತು. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರ ಆಗಿದೆ. ಮೊದಲಿನಿಂದಲೂ ಇಲ್ಲೂ ಭದ್ರತೆ ಕೊರತೆ ಇದೆ. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿ ಒಳಪಟ್ಟಿದ್ದು, ಸ್ಥಗಿತಗೊಂಡ ಸಿ.ಸಿ. ಕೆಮಾರಾ ದುರಸ್ಥಿ ಮಾಡಿ, ಹೊಸ ಸಿ.ಸಿ. ಕೆಮಾರ ಅಳವಡಿಸಲಾಗುತ್ತಿದೆ.
ಆಸ್ಪತ್ರೆಯು ಇತ್ತೀಚೆಗೆ ನಮ್ಮ ಸುಪಧಿರ್ಗೆ ಬಂದಿದೆ. ಭದ್ರತೆ ದೃಷ್ಟಿಯಿಂದ ಸಿ.ಸಿ. ಕೆಮೆರಾ ಅಳವಡಿಸಲಾಗುತ್ತಿದೆ. ಸೆಕ್ಯೂರಿಟಿ ವ್ಯವಸ್ಥೆಯನ್ನು ಹೆಚ್ಚಿಸಲಾಗುವುದು.
ಎಸ್. ಎಸ್. ನೀಲಗುಂದ, ಡಿಎಚ್ಒ