Gadag Crime 
ರಾಜ್ಯ

ಪೊಲೀಸರ ಮೇಲೆ ದುಷ್ಕಮಿರ್ಗಳಿಂದ ಹಲ್ಲೆ! ಐವರ ಬಂಧನ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಜಗಳವನ್ನು ಬಿಡಿಸಲು ತೆರಳಿದ್ದ ಪೊಲೀಸ್​ ಸಿಬ್ಬಂದಿಯ ಮೇಲೆಯೇ ದುಷ್ಕಮಿರ್ಗಳು ಹಲ್ಲೆ ನಡೆಸಿದ ಟನೆ ಗುರುವಾರ ರಾತ್ರಿ ಗದಗ ನಗರದ ದೋಭಿಗಾಟ್​ ಬಳಿ ನಡೆದಿದೆ.
ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿಯನ್ನು ಅವಾಚ್ಯ ಶಬ್ಬಗಳಿಂದ ನಿಂದಿಸಿ, ಹಲ್ಲೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆಯನ್ನು ನಿಯಂತ್ರಿಸಲು ಡ್ಯೂಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಸಿವಿಲ್​ ಡ್ರೆಸ್​ ಮೇಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿದ್ದರು. ಈ ವೇಳೆ ಕೆಲ ದುಷ್ಕ್ಕಮಿರ್ಗಳು ಏಕಾಏಕಿ ಪೊಲೀಸರ ಮೇಲೆಯೇ ತಿರುಗಿಬಿದ್ದು, ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಟನೆಯಲ್ಲಿ ಒಬ್ಬ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಾಕ್ಸ್​:
ಮಫ್ತಿಯಲ್ಲಿದ್ದ ಪೊಲೀಸ್​ ಮೇಲೆ ಹಲ್ಲೆ ಮಾಡಿದ್ದ 5 ಜನ ಯುವಕರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತ ಆರೋಪಿಗಳನ್ನು ಗದಗ ನಗರದ ತೇಜಾ ನಗರದ ನಿವಾಸಿ ವಿಜಯ ಲಮಾಣಿ (19), ಮಲ್ಲಸಮುದ್ರ ಗ್ರಾಮದ ಅನ್ವರ ಬುವಾಜಿ (25), ಮೊಹಮ್ಮ ಹೊಸಮನಿ (26). ಮಲ್ಲಸಮುದ್ರ ಗ್ರಾಮದ ಆಸೀಫ್​ ಡೆಕ್ಕೇದ (18), ರಾಜೇಸಾಬ ಕುಂದಗೋಳ (20) ಎಂದು ಗುರುತಿಸಲಾಗಿದೆ.
ಕೋಟ್​.
ಗುರುವಾರ ರಾತ್ರಿ ಧೋಬಿಘಾಟ್​ ಸಮೀಪ ಐವರು ಯುವಕರು ಕ್ಷುಲ್ಲಕ್ಕ ಕಾರಣಕ್ಕಾಗಿ ಜಗಳವಾಡುತ್ತಿದ್ದರು. ಆ ಸಮಯದಲ್ಲಿ ಕರ್ತವ್ಯದಲ್ಲಿ ಇರದಿದ್ದರೂ, ಅಲ್ಲಿದ್ದ ನಮ್ಮ ಪೊಲೀಸ್​ ಕಾನ್​ಸ್ಟೇಬಲ್​ ತಮ್ಮ ಸಮಯಪ್ರಜ್ಞೆಯಿಂದ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಮುಂದಾದರು. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಕರ್ತವ್ಯದಲ್ಲಿ ಇರದೇ ಇದ್ದರೂ ಜಗಳವನ್ನು ತಡೆದು ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿದ್ದು ಅವರ ಕಾರ್ಯ ಶ್ಲಾನೀಯ. ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದ ಐವರನ್ನೂ ಪೊಲೀಸರು ಬಂಧಿಸಿ, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ರೋಹನ ಜಗದೀಶ. ಎಸ್ಪಿ ಗದಗ.