ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಹಲ್ಲೆ ನಡೆದ ಸ್ಥಳದಲ್ಲಿ ರಕ್ತ ಹರಡಿರುವುದು. 
ರಾಜ್ಯ

ಮಾನಸಿಕ ಅಸ್ವಸ್ಥನಿಂದ ಹಲ್ಲೆ! 6 ಜನರಿಗೆ ಗಂಭೀರಗಾಯ

ಶಿವಾನಂದ ಹಿರೇಮಠ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ತಾಂಡಾದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಬುಧವಾರ ಅಪರಾಹ್ನ 1 ಗಂಟೆಗೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕ ವಾಗಿದೆ.
ಬೇಸಿಗೆ ಹಿನ್ನೆಲೆ ಮನೆ ಅಂಗಳದಲ್ಲಿ ಮಲಗಿದ್ದ ಗ್ರಾಮಸ್ಥರ ಮೇಲೆ 44 ವರ್ಷದ ಹರ್ಜಪ್ಪ ಲಮಾಣಿ ಎಂಬಾತ ಏಕಾಏಕಿ ಹಲ್ಲೆ ನಡೆಸಿದ್ದಾನೆ. ನಡುರಾತ್ರಿ ನಡೆದ ಈ ದಾಳಿಯಲ್ಲಿ ಹೆಗ್ಗಪ್ಪ, ಶೇಖಪ್ಪ, ದೇವಕ್ಕ, ಚಾವಲವ್ವ, ಶಿವಪ್ಪ, ಷಣ್ಮುಖಪ್ಪ ಹಾಗೂ ಬಾಬು ಎಂಬುವರಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾದವರ ಕೂಗಾಟ ಕೇಳಿ ಸ್ಥಳಿಯರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿಯನ್ನು ಹಿಡಿಯಲು ಯತ್ನಿಸಿದವರ ಮೇಲೆಯೂ ಹರ್ಜಪ್ಪ ದಾಳಿ ಮಾಡಲು ಮುಂದಾಗಿದ್ದಾನೆ. ಈ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟನೆಯ ಭೀಕರತೆಯನ್ನು ತೋರಿಸುತ್ತಿವೆ. ಸ್ಥಳಿಯ ಯುವಕರು ಒಗ್ಗೂಡಿ ಹಲ್ಲೆಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಹರ್ಜಪ್ಪನನ್ನೂ ಚಿಕಿತ್ಸೆಗಾಗಿ ಗದಗ ಜಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮುಂಡರಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟನೆಯ ನಿಖರ ಕಾರಣಗಳ ಬಗ್ಗೆ ಪೊಲೀಸರು ತನಿಣೆ ನಡೆಸಿದ್ದಾರೆ.