ಶೇ. 40 ರಷ್ಟು ಕೃಷಿ ಪತ್ತಿನ ಸಹಕಾರ ಸಂಗಳಲ್ಲಿ ಜಾರಿಯಾಗದ ಯೋಜನೆ
ರಾಜ್ಯದಲ್ಲಿ ಅಪೇಕ್ಸ್, ಡಿಸಿಸಿ, ಕೆಸಿಸಿ ಬ್ಯಾಂಕ್ಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಆದಂತೆ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಗಳಲ್ಲಿ (ಫ್ಯಾಕ್ಸ್) ಏಕೀಕೃತ ತಂತ್ರಾಂಶ ವ್ಯವಸ್ಥೆ ಅನುಷ್ಠಾನ ಜಾರಿಗೊಳ್ಳುತ್ತಿಲ್ಲ. 6 ವರ್ಷಗಳ ಹಿಂದೆಯೇ ಯೋಜನೆ ಜಾರಿಯಾದರೂ ಸಹ ಯೋಜನೆ ನುಷ್ಠಾನ ಎಂಬುದು ಕುಂಟುತ್ತ ಸಾಗಿದೆ. ಕೇಂದ್ರದ ನಿಯಮದಂತೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಆದರೆ, ಸಹಕಾರ ಸಂಗಳ ಆಡಳಿತ ಮಂಡಳಿ ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಪ್ರಭಾವದಿಂದ ಈ ವ್ಯವಸ್ಥೆ ವಿಳಂಬ ಆಗುತ್ತಿದೆ. ಹೀಗಾಗಿ ಸ್ಥಳಿಯ ಸಹಕಾರಿ ಪತ್ತಿನ ಸಂಗಳಲ್ಲಿ ಆಗಾಗ ಅಕ್ರಮ ಪ್ರಕರಣ ಬೆಳಕಿಗೆ ಬರುತ್ತಿವೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 182ಫ್ಯಾಕ್ಸ್ಗಳ ಪೈಕಿ 161ಫ್ಯಾಕ್ಸ್ಗಳು ಈ ಯೋಜನೆಗೆ ಆಯ್ಕೆ ಆಗಿದ್ದವು. ಆಯ್ಕೆಯಾದಫ್ಯಾಕ್ಸ್ಗಳಲ್ಲಿ 135ಫ್ಯಾಕ್ಸ್ಗಳಲ್ಲಿ ಕಂಪ್ಯೂಟರೀಕರಣ ಮತ್ತು ತಂತ್ರಾಂಶ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇನ್ನೂ ಶೇ. 40 ರಷ್ಟುಫ್ಯಾಕ್ಸ್ಗಳಲ್ಲಿ ಯೋಜನೆ ಅಳವಡಿಕೆ ಬಾಕಿ ಇದೆ.
"ಒನ್ ನೇಷನ್ ಒನ್ ಬೈಲಾ' ಪರಿಕಲ್ಪನೆ ಮೂಲಕ ದೇಶದ ಎಲ್ಲಫ್ಯಾಕ್ಸ್ಗಳನ್ನು ಗಣಕೀಕೃತಗೊಳಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ "ಇಂಟಲೆಕ್ಟ' ತಂತ್ರಾಂಶವನ್ನು ಎಲ್ಲಫ್ಯಾಕ್ಸ್ಗಳು ಅಳವಡಿಸಿಕೊಳ್ಳಲು ಯೋಜನೆ ಜಾರಿ ತಂದಿದೆ. ಗ್ರಾಮೀಣ ರೈತರಿಗೆ ಶೇ.100 ರಷ್ಟು ಹಣಕಾಸಿನ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020 ರಲ್ಲೇ ಈ ಯೋಜನೆಗೆ 2500 ಕೋಟಿ ರೂ. ಮೀಸಲಿಟ್ಟಿತ್ತು. ಅದರಂತೆ ಆಯ್ದ ಫ್ಯಾಕ್ಸ್ಗಳಲ್ಲಿ ಈಗಾಗಲೇ ಗಣಕೀಕರಣ ವ್ಯವಸ್ಥೆ ಅಳವಡಿಸಲು ಸೂಚಿಸಲಾಗಿತ್ತು. ಜಿಲ್ಲೆಯಲ್ಲಿ 161ಫ್ಯಾಕ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೂ, ಕಳೆದ ಮೂರ್ನಾಲ್ಕು ವರ್ಷದಿಂದ ಈ ವ್ಯವಸ್ಥೆ ಸಪರ್ಮಕವಾಗಿ ಅಳವಡಿಕೆ ಆಗಿಲ್ಲ. ಪಾರದರ್ಶಕ ವ್ಯವಸ್ಥೆಯನ್ನು ಸ್ಥಳಿಯ ಫ್ಯಾಕ್ಸ್ ಆಡಳಿತ ಮಂಡಳಿ ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಶೂನ್ಯ ಬಡ್ಡಿದರಲ್ಲಿ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯ ಯೋಜನೆ ಪಲಾನುಭವಿಗಳಿಗೆ ಸಿಗುತ್ತಿಲ್ಲ. ಮೂಲಗಳ ಪ್ರಕಾರ ರಾಜ್ಯದ 6500ಕ್ಕೂ ಅಧಿಕ ಪ್ಯಾಕ್ಸ್ಗಳ ಪೈಕಿ ಇನ್ನೂ ಶೇ. 60 ರಷ್ಟುಫ್ಯಾಕ್ಸ್ಗಳಲ್ಲಿ ಮತ್ತು ಗದಗ ಜಿಲ್ಲೆಯಲ್ಲಿ ಶೇ. 40 ರಷ್ಟುಫ್ಯಾಕ್ಸ್ಗಳಲ್ಲಿ ಸಮರ್ಪಕ ಕಂಪ್ಯೂಟರೀಕರಣ ಆಗಿಲ್ಲ. ಜತೆಗೆ ಕಂಪ್ಯೂಟರ್ ಕೌಶಲ್ಯ ಹೊಂದಿದ ಸಿಬ್ಬಂದಿಗಲೂ ಇಲ್ಲದಂತಾಗಿದೆ. ಸಹಕಾರ ಕ್ಷೇತ್ರದ ಬ್ಯಾಂಕಿಂಗ್ ವ್ಯವಹಾರಗಳು ಭೌತಿಕವಾಗಿಯೇ ಜರುಗುತ್ತಿದ್ದು, ಅವ್ಯವಹಾರಗಳಿಗೆ ರಾಜ ಮಾರ್ಗ ಸೃಷ್ಟಿಯಾಗಿದೆ.
ಏಕೀಕೃತ ವ್ಯವಸ್ಥೆ ಇಲ್ಲದೇ ಅವ್ಯವಹಾರ:
ಇತ್ತೀಚೆಗೆ ತಾಲೂಕಿನ ಹರ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿ ಇಲ್ಲದ ಕಾರಣದಿಂದ ಅದನ್ನೇ ಬಂಡವಾಳ ಮಾಡಿಕೊಂಡು ರೈತರಿಗೆ ವಿವಿಧ ರೂಪದಲ್ಲಿ ಸಿಗಬೇಕಿದ್ದ 1 ಕೋಟಿಗೂ ಅಧಿಕ ಹಣವನ್ನು ಲಪಟಾಯಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಹಿಂದೆ ಹಲವು ಅಧಿಕಾರಿಗಳ ಕೈವಾಡ ಇದೇ ಎಂಬುದು ಮೇಲ್ನೋಟಕ್ಕೆ ಸಾಭಿತಾಗಿತ್ತು. ಲೆಕ್ಕಪರಿಶೋಧನೆ ಹೆಸರಲ್ಲಿ ಪ್ರಕರಣ ತಾಕಿರ್ಕ ಅಂತ್ಯ ಕಾಣಲಿಲ್ಲ. ಈ ಪ್ರಕರಣದಿಂದ ಹರ್ಲಾಪುರ ಗ್ರಾಮದ ರೈತರಿಗೆ ಅನ್ಯಾಯಾವಾಗಿತ್ತು.
ಏನಿದು ಒನ್ ನೇಷನ್ ಒನ್ ಬೈಲಾ?
ಫ್ಯಾಕ್ಸ್ಗಳಲ್ಲಿ ಜರಗುತ್ತಿರುವ ಅವ್ಯವಹಾರ ತಡೆಯಲು, ರೈತರಿಗೆ ನೇರವಾಗಿ ಸಾಲಸೌಲಭ್ಯ ದೊರೆಯುಂತೆ ಮಾಡಲುಫ್ಯಾಕ್ಸ್ಗಳನ್ನು ಡಿಜೀಟಲೀಕರಣ ಮಾಡುವ ಉದ್ದೇಶ ಹೊಂದಲಾಗಿದೆ.ಫ್ಯಾಕ್ಸ್ಗಳನ್ನು "ಇಂಟಲೆಕ್ಟ್' ಎಂಬ ತಂತ್ರಾಂಶದ ಅಡಿಯಲ್ಲಿ ತರುವುದು ಮತ್ತು ವಾಣಿಜ್ಯ ಬ್ಯಾಂಕ್ಗಳಂತೆ ಫ್ಯಾಕ್ಸಗಳಲ್ಲೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸುವುದೇ ಒನ್ ನೇಷನ್ ಒನ್ ಬೈಲಾ ಯೋಜನೆ ಆಗಿದೆ. ಡಿಸಿ ಬ್ಯಾಂಕ್ ಅಡಿಯಲ್ಲಿ 2017ರ ಮುಂಚೆ ಸ್ಥಾಪನೆಯಾದ ಆಯ್ದಫ್ಯಾಕ್ಸ್ಗಳಿಗೆ ಕಂಪ್ಯೂಟರ್ ಮತ್ತೀತರ ಸಾಮಗ್ರಿ ಖರೀದಿಸಲು 2.75 ಲಕ್ಷದಿಂದ 3 ಲಕ್ಷ ವರೆಗೂ ಅನುದಾನ ವಿನಿಯೋಗಿಸಲು ಸೂಚಿಸಲಾಗಿದೆ. ಯೋಜನೆ ಮಾತ್ರ ಸಮರ್ಪಕ ಸಾಕಾರಗೊಂಡಿಲ್ಲ.
ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಬಲವರ್ಧನೆಗಾಗಿ ಸಹಕಾರ ಕಾಯ್ದೆ ತಿದ್ದುಪಡಿಗೊಳಿಸಲಾಗಿತ್ತು. ಸೆಕ್ಷನ್ 128/ಎ ಸೃಷ್ಟಿಸುವ ಮೂಲಕ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಖ ಜಿಲ್ಲಾ ಪ್ರಾಧಿಕಾರಿ, ಕೌಶಲ್ಯಭರಿತ ಸಿಬ್ಬಂದಿ ನೇಮಕ, ಫ್ಯಾಕ್ಸಗಳಲ್ಲಿ ವಂಶಾಡಳಿತಕ್ಕೆ ಇತಿಶ್ರೀ,ಫ್ಯಾಕ್ಸ್ ಗಳಲ್ಲಿ ಏಕೀಕೃತ ಅಂತರ್ಜಾಲ ವ್ಯವಸ್ಥೆ ಜಾರಿಗೆ ರಾಜ್ಯ ಸರ್ಕಾರ ಕಾಯಿದೆ ತಿದ್ದುಪಡಿಮಾಡಿದೆ. ಆದರೆ, ಸೆಕ್ಷನ್ 128/ಎ ಉಪ ನಿಯಮಗಳ ಸೃಷ್ಟಿಯಾಗದ ಹಿನ್ನೆಲೆ ಕಾಯ್ದೆ ಇನ್ನೂ ಜಾರಿಆಗಿಲ್ಲ. ಇಂತಹ ಕಾನೂನು ರ್ದುಬಳಕೆ ಮಾಡಿಕೊಳ್ಳುತ್ತಿರುವ ಫ್ಯಾಕ್ಸ್ಗಳ ಸ್ಥಳಿಯ ಆಡಳಿತ ಮಂಡಳಿಗಳು ಕೊಟ್ಯಂತರ ರೂ. ಅವ್ಯವಹಾರ ನಡೆಸುತ್ತಿವೆ ಎಂಬದು ಹರ್ಲಾಪುರಫ್ಯಾಕ್ಸ್ ಪ್ರಕರಣ ಸಾಯಾಗಿದೆ.
"ಒನ್ ನೇಷನ್ ಒನ್ ಬೈಲಾ' ಯೋಜನೆ ಜಾರಿ ನಂತರ ಸಹಕಾರ ಇಲಾಖೆ ಅಧಿಕಾರಿಗಳಿಗೆ ನಿರ್ವಹಣಾ ಜವಾಬ್ದಾರಿ ವಹಿಸಬೇಕು. ್ಯಾಕ್ಸ್ ಆಡಳಿತ ಮಂಡಳಿಗಳಿಗೆ ಈ ಜವಾಬ್ದಾರಿ ವಹಿಸಿದ್ದೇ ಆದರೆ, ಪುನಃ ಸ್ಥಳಿಯ ರಾಜಕಾರಣ, ಪ್ರಭಾವಗಳಿಂದ ವ್ಯವಸ್ಥೆ ನಾಶವಾಗಿ ಪಾರದರ್ಶಕತೆ ಇರುವುದಿಲ್ಲ.
ನಿರ್ದೇಶಕ, ರಾಜ್ಯ ಫ್ಯಾಕ್ಸ್ ಕ್ಷೇಮಾಭಿವೃದ್ಧಿ ಮಹಾಮಂಡಳ
ಒನ್ ನೇಷನ್ ಒನ್ ಬೈಲಾ ಪ್ರಕಾರ ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಆಯ್ಕೆ ್ಯಾಕ್ಸ್ಗಳಲ್ಲಿ ಕಂಪ್ಯೂಟರ್ ಅಳವಡಿಸುವುದು ಮತ್ತು ತಂತ್ರಾಂಶ ಅಳವಡಿಸುವು ಕಾರ್ಯ ಮಾಡುತ್ತಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಪೂರಕವಾದ ಸಹಾಯವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಡುತ್ತಾರೆ. ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನ ಕಾರ್ಯ ನಡೆಯುತ್ತಿದೆ.
ಎಸ್. ಎಸ್. ಕಬಾಡಿ, ಉಪ ನಿಬಂಧಕರು ಸಹಕಾರ ಇಲಾಖೆ ಗದಗ