ಬೆಟಗೇರಿಯಲ್ಲಿ ಶ್ರೀಗಾತ್ರಿದೇವಿ ಸಹಕಾರ ಸಂದ ನೂತನ ಶಾಖೆಯನ್ನು ಡಿ.ಆರ್. ಪಾಟೀಲ ಉದ್ಘಾಟಿಸಿದರು. ಎಸ್.ವಿ. ಸಂಕನೂರು, ಎಸ್.ಜಿ. ನಂಜಯ್ಯನಮಠ, ರವೀಂದ್ರ ಕಲಬುಗಿರ್, ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು, ರುದ್ರಮುನಿ ಶಿವಾಚಾರ್ಯರು, ಗುರಣ್ಣ ಬಳಗಾನೂರ, ರಾವೇಂದ್ರ ಯಳವತ್ತಿ, ಶಕುಂತಲಾ ಅಕ್ಕಿ ಇತರರು ಇದ್ದರು.
ರೈತರು, ಬಡವರು, ವ್ಯಾಪಾರಿಗಳಲ್ಲಿ ಆಥಿರ್ಕ ಶಕ್ತಿ ತುಂಬುವಲ್ಲಿ ಸಂದ ಶ್ರಮ ಸಾರ್ಥಕ: ಡಿ.ಆರ್.ಪಾಟೀಲ
ಹಲವು ದಶಕಗಳ ಹೋರಾಟ, ಸಾಂಘಿಕ ಸಮನ್ವಯತೆ, ನಿರಂತರ ಶ್ರಮ, ಗ್ರಾಮೀಣ ಭಾಗದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ, ಮೂವತ್ತು ವರ್ಷಗಳ ನಿರಂತರ ಪರಿಶ್ರಮ, ನಂಜಯ್ಯನಮಠ, ಎಚ್. ವೈ. ಮೇಟಿ ಅವರಂತಹ ರಾಜಕಾರಣಿಗಳ ಒಡನಾಟ, ನೇಕಾರರ ಬದುಕಿನಲ್ಲಿ ಹೊಸಚೇತನ ತುಂಬುವ ಪ್ರಯತ್ನದಲ್ಲಿ ಹಾಗೂ ನೇಕಾರರ ಅಭಿವೃದ್ಧಿಗಾಗಿ ಗಾಯತ್ರಿ ಪತ್ತಿನ ಸಹಕಾರ ಸಂದ ಶಾಖೆಯ ನೂತನ ಕಟ್ಟಡ ಉದ್ಘಾಟನೆ ಎಂದು ಮಾಜಿ ಶಾಸಕ, ರಾಜ್ಯ ವಿಕೇಂದ್ರೀಕರಣ ಯೋಜನೆ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯ ಡಿ.ಆರ್. ಪಾಟೀಲ ಹೇಳಿದರು.
ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂದ ನೂತನ ಶಾಖೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಠೇವುದಾರರ ವಿಶ್ವಾಸ, ಸಾಲಗಾರರ ಪ್ರಾಮಾಣಿಕ ಮರುಪಾವತಿ, ಸಿಬ್ಬಂದಿಯ ಕರ್ತವ್ಯ ನಿಷ್ಠೆ, ನಿರ್ದೇಶಕ ಮಂಡಳಿಯ ಸಹಕಾರ ಮನೋಭಾವ ಒಂದು ಸಂಸ್ಥೆಯ ಜೀವಾಳವಾಗಿದೆ. ಇದೆಲ್ಲವೂ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂ ಆಥಿರ್ಕ ಪ್ರಗತಿ ಸಾಧಿಸುವುದರಲ್ಲಿ ಸಲವಾಗಿದೆ ಎಂದು ಅವರು ಹೇಳಿದರು.
ವಿಧಾನಪರಿಷತ್ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ಆಥಿರ್ಕ ೇತ್ರದ ಜೊತೆಗೆ ಶಿಣ ೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿರುವ ರವೀಂದ್ರ ಕಲಬುಗಿರ್ ಅವರ ಸೇವೆ ಅಮೋ. ಅವರ ಮೇಲಿನ ವಿಶ್ವಾಸದಿಂದ ನಲವತ್ತು ಶಾಖೆಗಳ ಅಂದಾಜು ಠೇವಣಿ 300 ಕೋಟಿ ರೂ. ದಾಟುತ್ತಿರುವುದು ಪ್ರಗತಿಯ ದ್ಯೋತಕವಾಗಿದೆ. ಸಮಾಜದಲ್ಲಿ ಸರ್ವರ ಆಥಿರ್ಕ ಸಂಕಷ್ಠಗಳಿಗೆ ಸ್ಪಂದಿಸುವ ಮೂಲಕ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂ ಇನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದರು.
ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಮಾತನಾಡಿದರು. ರವೀಂದ್ರ ಕಲಬುಗಿರ್, ಬೆಟಗೇರಿ ನೀಲಕಂಠ ಮಠದ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು, ಕೆರೂರ ದೇವಾಂಗಮಠದ ರುದ್ರಮುನಿ ಶಿವಾಚಾರ್ಯರು, ಗುರಣ್ಣ ಬಳಗಾನೂರ, ರಾವೇಂದ್ರ ಯಳವತ್ತಿ, ಶಕುಂತಲಾ ಅಕ್ಕಿ ಇತರರು ಇದ್ದರು.