Gadag Namma Clinic  
ರಾಜ್ಯ

ಬಡವಾದ ನಮ್ಮ ಕ್ಲಿನಿಕ್​ಗಳು! ಬಡವರಿಗೆ ದೊರೆಯದ ಆರೋಗ್ಯ ಭಾಗ್ಯ

ಶಿವಾನಂದ ಹಿರೇಮಠ ಗದಗ
ಜಿಲ್ಲೆಯಲ್ಲಿ ಬಡ, ರ್ದುಬಲ ಮತ್ತು ಸ್ಲಂ ಪ್ರದೇಶದ ಜನರ ಆರೋಗ್ಯ ಸುರಕ್ಷತೆಗಾಗಿ ಸರ್ಕಾರ ಬಿಡುಗಡೆ ಮಾಡಿದ್ದ 28 ಲಕ್ಷ ಅನುದಾನವನ್ನು ಆರೋಗ್ಯ ಮತ್ತು ಪೌರಾಡಳಿತ ಇಲಾಖೆಯ ಸ್ಥಳಿಯ ಸಂಸ್ಥೆಗಳು ಬಳಕೆ ಮಾಡದೇ ಹಾಗೇ ಉಳಿಸಿಕೊಂಡಿವೆ. ಪೌರಾಡಳಿತ(ಯುಡಿಡಿ) ಮತ್ತು ಆರೋಗ್ಯ ಇಲಾಖೆಗಳ ನಡುವಿ ಸುತ್ತೋಲೆ ಸಮರದಿಂದ ರಾಜ್ಯದ್ಯಂತ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್​ಗಳು ಬಡವಾಗುತ್ತಿದ್ದು, ಸೂಕ್ತ ಸಮಯದಲ್ಲಿ ಮಹಿಳೆಯರಿಗೆ, ವೃದ್ಧರಿಗೆ ಚಿಕಿತ್ಸೆ ಸಿಗುತ್ತಿಲ್ಲ.
ವೈದ್ಯಕಿಯ, ತಾಂತ್ರಿಕ ಮತ್ತು ತಾಂತ್ರಿಕ ವಲ್ಲದ ಉಪಕರಣ ಖರೀದಿಗೆ ಮಿಸಲಿಟ್ಟ 28 ಲಕ್ಷ ಅನುದಾನ ಸೂಕ್ತ ಸಮಯದಲ್ಲಿ ಬಳಕೆ ಮಾಡದೇ ಹಾಗೇ ಉಳಿಸಿಕೊಂಡಿದ್ದರಿಂದ ಬಡ, ರ್ದುಬಲ ಜನರು ವಾಸಿಸುವ ಸ್ಲಂ ಪ್ರದೇಶಗಳಲ್ಲಿನ ಜನರ ಆರೋಗ್ಯ ಸುಧಾರಣೆ ಮರಿಚಿಕೆ ಆಗಿದೆ. ಇಲಾಖೆಗಳು ನಡುವಿನ ಹಗ್ಗ ಜಗ್ಗಾಟದಿಂದ ಕಳೆದ ಅಕ್ಟೋಬರ್​ 2025ರಲ್ಲೇ ಬಿಡುಗಡೆಯಾದ ಈ ಅನುದಾನ ಜಿಲ್ಲೆಯ ಆರೋಗ್ಯ ಇಲಾಖೆ ಖಾತೆಗಳಲ್ಲಿ ಕೊಳೆಯುತ್ತಿದೆ.
ಏನಿದು ಅನುದಾನ:
ಜಿಲ್ಲೆಯ ಸ್ಲಂ ಪ್ರದೇಶಗಳಲ್ಲಿನ ಜನರಿಗೆ ತುರ್ತು ಚಿಕಿತ್ಸೆ, ಹೆರಿಗೆ, ನವಜಾತ ಶಿಶು ಸಮಗ್ರ ಆರೋಗ್ಯ, ಆರೈಕೆ, ಲಸಿಕಾ ಕಾರ್ಯಕ್ರಮ ಸೇರಿದಂತೆ ಆರೋಗ್ಯ ಇಲಾಖೆ ಅಡಿಯಲ್ಲಿ ದೊರಕುವ ಎಲ್ಲ ಆರೋಗ್ಯ ಸೇವೆಗಳನ್ನು ನೀಡಲು ಸ್ಲಂ ಹಾಗೂ ಬಡ ರ್ದುಬಲ ಜನರು ವಾಸಿಸುವ ಜಿಲ್ಲೆಯ 21ಕ್ಕೂ ಹೆಚ್ಚು ಸ್ಥಳಗಳಲ್ಲಿ "ನಮ್ಮ ಕ್ಲಿನಿಕ್​' ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ನಮ್ಮ ಕ್ಲಿನಿಕ್​ಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕ ಅಲ್ಲದ ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರ 2025&26ನೇ ಸಾಲಿನ ಅಕ್ಟೋಬರ್​ ತಿಂಗಳಲ್ಲಿ ಗದಗ ನಗರಸಭೆಗೆ 28 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ತಾಂತ್ರಿಕ ವಸ್ತಗಳ ಖರೀದಿಗೆ ನಗರಸಭೆಯಲ್ಲಿ ಪರಿಣಿತರ ಕೊರತೆ ಇರುವ ಕಾರಣ ಜಿಲ್ಲೆಯ ಆರೋಗ್ಯ ಇಲಾಖೆ ಖಾತೆಗೆ ನಗರಸಭೆಯು ಕಳೆದ ನವೆಂಬರ್​ನಲ್ಲಿ ಅನುದಾನವನ್ನು ವರ್ಗಾವಣೆ ಮಾಡಿವೆ. ಹಿಗೀದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಹಣವನ್ನು ಖರ್ಚು ಮಾಡದೇ ಲಾಂತರ ರೂ. ಹಣವನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿವೆ.
ಆರೋಗ್ಯ ಇಲಾಖೆ ವಾದವೇನು?
ಕಳೆದ ಮಾ. 27 ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಸ್ಥಳಿಯ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನವನ್ನು ಸ್ಥಳಿಯ ಸಂಸ್ಥೆಗಳೇ ಬಳಕೆ ಮಾಡಬೇಕು. ಕಡಿಮೆ ವೆಚ್ಚದಲ್ಲಿ ವೈದ್ಯಕಿಯ ಉಪಕರಣ ಖರೀದಿ, ಸಿಬ್ಬಂದಿ ತರಬೇತಿ ಸೇರಿದಂತೆ ಕೆಲ ವಿಷಯಗಳಲ್ಲಿ ಆರೋಗ್ಯ ಇಲಾಖೆ ಸಹಕಾರವನ್ನು ಸ್ಥಳಿಯ ಸಂಸ್ಥೆಗಳು ಪಡೆಯಬಹುದು. ಸ್ಥಳಿಯ ಸಂಸ್ಥೆಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವುದೇ ಹಣವನ್ನು ಜಮೆ ಮಾಡಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನಮಗೆ ಈ ಅನುದಾನ ಬಳಕೆ ಮಾಡಲು ಪ್ರತ್ಯೇಕ ಖಾತೆ ಇಲ್ಲ. ಹಾಗಾಗಿ ಬಳಸುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪೌರಾಡಳಿತ ಇಲಾಖೆ ವಾದವೇನು?
Feb. 6, 2026ರಂದು ಸರ್ಕಾರ ನಡಾವಳಿಯನ್ನು ಹೊರಡಿಸಿದೆ. ಹಲವು ವೆಚ್ಚಗಳನ್ನು ನಮೋದಿಸಿ ನಿಧಿರ್ಷ್ಟ ಪಡಿಸಿದ ಖಾತೆಗೆ ಜಮೆ ಮಾಡಲು, ವೆಚ್ಚಗಳ ಮಾಹಿತಿ ನೀಡಲು ತಿಳಿಸಿದೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅನುದಾನ ವರ್ಗಾವಣೆ ಮಾಡಲಾಗಿದೆ. ವೈದ್ಯಕಿಯ ಉಪಕರಣಗಳು ಆಗಿರುವುದರಿಂದ ಅವರೇ ಆ ಹಣವನ್ನು ವಿನಿಯೋಗ ಮಾಡಬೇಕಾಗುತ್ತದೆ ಎಂದು ಪೌರಾಡಳಿತ ಇಲಾಖೆ ತಿಳಿಸಿದೆ.
ಕೋಟ್​:
ಇದು ರಾಜ್ಯಾದ್ಯಂತ ಇರುವ ಸಮಸ್ಯೆ ಆಗಿದೆ. ಸುತ್ತೋಲೆ ಪ್ರಕಾರ ಆರೋಗ್ಯ ಇಲಾಖೆಗೆ ಖರ್ಚು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಗರಸಭೆಯಿಂದ ನಮ್ಮ ಇಲಾಖೆಗೆ ವರ್ಗಾವಣೆ ಆದ ಹಣವನ್ನು ಮರಳಿ ನಗರಸಭೆ ಖಾತೆಗೆ ವರ್ಗಾಯಿಸಲಾಗವುದು.
- ಎಸ್​. ಎಸ್​. ನೀಲಗುಂದ , ಆರೋಗ್ಯ ಇಲಾಖೆ ಅಧಿಕಾರಿ, ಗದಗ
ಕೋಟ್​:
ಪೌರಾಡಳಿತ ಇಲಾಖೆ ಸುತ್ತೋಲೆಯಂತೆ ನಮ್ಮ ಕ್ಲಿನಿಕ್​ಗಳಿಗೆ ಸಂಬಂಧಿಸಿ 27.50 ಲಕ್ಷ ಹಣವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕಳೆದ ನವೆಂಬರ್​ ತಿಂಗಳಲ್ಲೇ ವರ್ಗಾಯಿಸಲಾಗಿದೆ. ಆ ಹಣವನ್ನು ಅವರೇ ಖರ್ಚು ಮಾಡಬೇಕು. ನಮ್ಮ ಕ್ಲಿನಿಕ್​ಗಳಿಗೆ ಬೇಕಾದ ಉಪಕರಣಗಳನ್ನು ವರೇ ಖರೀದಿಸಬೇಕಿದೆ.
ಆನಂದ ಬದಿ, ಆರೋಗ್ಯ ಮತ್ತು ಪರಿಸರ ಇಲಾಖೆ ಅಧಿಕಾರಿ, ನಗರಸಭೆ, ಗದಗ