Gadag 
ರಾಜ್ಯ

ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಬಸವರಾಜ ಬೊಮ್ಮಾಯಿ

ಶಿವಾನಂದ ಹಿರೇಮಠ
ಗದಗ: ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಓಲೈಕೆ ರಾಜಕಾರಣ ಮಾಡುತ್ತಿದೆ. ಸರ್ಕಾರ ಹಿಂದುಳಿದವರು, ಬಡವರು, ರೈತರ ಸಾಲ ಮನ್ನಾ ಎಲ್ಲರಿಗೂ ಮಾಡಬೇಕಿತ್ತು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ಇನ್ಸುರೆನ್ಸ್​ ಕೊಡುತ್ತಿಲ್ಲ. ಬಡ್ಡಿ ಮನ್ನಾ ಕೂಡ ಮಾಡುತ್ತಿಲ್ಲ. ಶೇ 80 ರಷ್ಟು ಜನರು ಸಂಕಷ್ಟದಲ್ಲಿ ಇದ್ದಾರೆ. ಜನ ವಿರೋಧಿ ನೀತಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್​ ಪೇಪರ್​ ಬಳಸಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯ. ಐಟಿ ಬಿಟಿ ರಾಜ್ಯ. ಇದನ್ನು ಮತ್ತೆ ಪ್ರಾಚಿನತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣಾ ಆಯೋಗ ಹ್ಯಾಕ್​ ಮಾಡುವ ಬಗ್ಗೆ ತೋರಿಸಿ ಎಂದು ಕರೆದರೂ ಕಾಂಗ್ರೆಸ್​ ಭಾಗವಸುತ್ತಿಲ್ಲ. ಯಾವ ಇವಿಎಂ ಚುನಾವಣೆ ಮೂಲಕ ಗೆದ್ದಿದ್ದಾರೆ ಅದನ್ನೇ ತಿರಸ್ಕಾರ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಮೊದಲು ರಾಜಿನಾಮೆ ಕೊಟ್ಟು ಬ್ಯಾಲೆಟ್​ ಪೇಪರ್​ ನಲ್ಲಿ ಚುನಾವಣೆ ಎದುರಿಸಲಿ. ಭಾರತದ ಚುನಾವಣೆ ಆಯೋದಗ ಪ್ರತಿನಿಧಿಗಳು ಆಫ್ರಿಕಾ ಯುರೋಪ್​ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಅಲ್ಲಿ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ನಮ್ಮ ಚುನಾವಣೆ ಆಯೋಗದ ಅಧಿಕಾರಿಗಳು ಹೋಗುತ್ತಾರೆ. ಅಂತಹ ತಂತ್ರಜ್ಞಾನ ನಮ್ಮಲಿದೆ ಎಂದರು.
ಪತ್ರಿಕೆಗಳಲ್ಲಿ ಮಹಾತ್ಮಾ ಗಾಂಧಿಜಿ ಕುರಿತು ಬಿಜೆಪಿ ನೀಡಿರುವ ಜಾಹೀರಾತಿನ ವಿರುದ್ದ ಕಾಂಗ್ರೆಸ್​ ಆರೋಪ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಜಾಹೀರಾತನ್ನು ಅವರು ನೀಡಿದ್ದಕ್ಕೆ ಏನು ಹೇಳುತ್ತಾರೆ. ಅಹಿಂಸೆಯ ಮೇಲೆ ನಂಬಿಕೆ ಇಟ್ಟಿದ್ದ ಗಾಂಧಿಜಿ ಬೇಜಾರಾಗಿದ್ದಾರೆ ಎಂದು ಹೇಳಿದರು.
ನಾಟಕ ನಿಲ್ಲಿಸಿ:
ನಾಯಕತ್ವ ಬದಲಾವಣೆಯ ಗೊಂದಲ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಅವರು ಯಾಕೆ ಹೇಳುತ್ತಾರೊ ಗೊತ್ತಿಲ್ಲ. ಸಿಎಂ ಹಲವಾರು ಬಾರಿ ಹೇಳಿದರೂ ಅವರ ಮಗನೇ ಸಟಿರ್ಪಿಕೆಟ್​ ಕೊಡುತ್ತಿದ್ದಾರೆ. ಮಗನ ಸಟಿರ್ಫಿಕೆಟ್​ ಇಟ್ಡುಕೊಂಡು ರಾಜ್ಯ ಆಳುವ ಅಗತ್ಯವಿಲ್ಲ. ಕಾಂಗ್ರೆಸ್​ ಹೈ ಕಮಾಂಡ್​ ಏನು ಮಾಡುತ್ತಿದೆ. ಕೂಡಲೇ ನಾಟಕ ಬಂದ್​ ಮಾಡಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂದರು.