ಜೆನ್ ಜಿ ಹೋರಾಟದಲ್ಲಿ ಭಾಗವಹಿಸಿದ್ದ ಹಲವರಿಗೆ ನೋಟಿಸ್
ಜಿಲ್ಲಾ ಕೇಂದ್ರಬಿಂದು ಗದಗ ಕ್ಷೇತ್ರದಲ್ಲಿ ಸಂಟನಾ ಶಕ್ತಿಗಾಗಿ ಪ್ರಯತ್ನಿಸುತ್ತಿರುವ ಬಿಜೆಪಿ ಟಕದಲ್ಲಿ ರಾಜಕೀಯ ಶೀತಲ ಸಮರ, ಬೇಗುದಿ ಆರುವಂತೆ ಕಾಣುತ್ತಿಲ್ಲ. ಅದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಮೂಲಭೂತ ಹಕ್ಕಿಗಾಗಿ ಜೆನ್ಜಿ ಹೋರಾಟ ನಡೆಸಿದ್ದ ಬಿಜೆಪಿ ಸ್ಥಳಿಯ ನಾಯಕರಿಗೆ ಜಿಲ್ಲಾ ಬಿಜೆಪಿ ಟಕ ಕಾರಣ ಕೇಳಿ ನೋಟೀಸ್ ನೀಡಿದೆ.
ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಜೆನ್ಜಿ ಹೋರಾಟ ನಡೆಸಿದ್ದರು. ಗದಗ ನಗರದ ಕುಡಿಯುವ ನೀರಿನ ಸಮಸ್ಯೆ, ನಗರದಲ್ಲಿ ಕೈಗಾರಿಕೆ ಸ್ಥಾಪನೆ, ನೀರಾವರಿ ಯೋಜನೆಗಳ ತುರ್ತು ಅನುಷ್ಠಾನ, ಕಪ್ಪತಗುಡ್ಡದಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ಸೇರಿದಂತೆ ಹತ್ತು ಹಲವು ಬೇಡಿಕೆಗೆ ಆಗ್ರಹಿಸಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಪ್ರತಿಭಟನೆಯಲ್ಲಿ ಎಬಿವಿಪಿ ವಿದ್ಯಾಥಿರ್ಗಳು, ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯಥಿರ್ ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ ಭದ್ರೇಶ ಕುಸ್ಲಾಪುರ, ನಗರಸಭೆ ಸದಸ್ಯ ರಾವೇಂದ್ರ ಯಳವತ್ತಿ, ನಗರ ಮಹಿಳಾ ಮೋರ್ಚಾ ಬಿಜೆಪಿ ಅಧ್ಯೆ ಸ್ವಾತಿ ಅಕ್ಕಿ, ನಗರ ಮಂಡಲ ಉಪಾಧ್ಯಕ್ಷ ಚೆನ್ನಮ್ಮ ಉಳಕನ್ನವರ ಸೇರಿದಂತೆ ಅನೇಕ ಬಿಜೆಪಿ ಸದಸ್ಯರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈಗ ಈ ಜೆನ್ಜಿ ಪ್ರತಿಭಟನೆಯೇ ಮುಳುವಾಗಿ ಪರಿಣಮಿಸಿದ್ದು, ಜಿಲ್ಲಾ ಬಿಜೆಪಿ ಟಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ಮೊದಲಿನಿಂದಲೂ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಎರಡು ಬಣಗಳು ಇದ್ದೇ ಇವೆ. ಅನಿಲ ಮೆಣಸಿನಕಾಯಿ ವರ್ಸಸ್ ಮತ್ತೊಂದು ತಂಡ ಎಂಬ ಎರಡು ಗುಂಪು ಇರುವುದು ಬಿಜೆಪಿಗೂ ಗೊತ್ತಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯಥಿರ್ ಸೋಲಿಗೆ ಗದಗ ವಿಧಾನಸಭಾ ಕ್ಷೇತ್ರದ ಕೆಲ ಬಿಜೆಪಿ ಪ್ರಮುಖರೇ ಎಂಬುದು ಅನಿಲ ಮೆಣಸಿನಕಾಯಿ ಆರೋಪಿಸುತ್ತ ಬಂದಿದ್ದಾರೆ. ಅಂದಿನಿಂದಲೂ ಈ ಶೀತಲ ಸಮರ ಮುಂದುವರಿದಿದೆ. ಅದರ ಭಾಗವಾಗಿ ಈ ನೋಟಿಸ್ ನೀಡುವ ಪ್ರಕ್ರಿಯೆ ಆಗಿದೆ ಎಂದು ಹಲವರು ಆರೋಪಿಸಿದ್ದಾರೆ.
"ಪಕ್ಷಕ್ಕೆ ಪೂರಕವಲ್ಲದ ಸಂಟನೆಗಳ ಜತೆ ಗುರುತಿಸಿಕೊಂಡು ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದೀರಿ? ಇದಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗಾಗಿ ಉತ್ತರ ನೀಡಲು ನೋಟಿಸ್ನಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೀಲ ಮೆಣಸಿಕಾಯಿ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಹೊರತುಪಡಿಸಿ 22ಸ್ಥಳಿಯ ಬಿಜೆಪಿಗರಿಗೆ, ನಗರ ಮಂಡಲ ಸದಸ್ಯರಿಗೆ, ನಗರ ಸಭೆ ಸದಸ್ಯರಿಗೆ ನೋಟಿಸ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ನಾನು ರೈತ ಪರ. ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಶಾಶ್ವತ ಪರಿಹಾರ ನೀಡಬೇಕು ಜೊತೆಗೆ ಯುವಕರಿಗೆ ಉದ್ಯೋಗ ನೀಡಲು ಈ ಭಾಗಗಳಲ್ಲಿ ಕೈಗಾರಿಕೆ ಪ್ರಾರಂಭಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಪಕ್ಷಕ್ಕೆ ಮುಜುಗರ ಆಗುತ್ತೆದೆ ಎಂದು ನೋಟಿಸ್ ನೀಡಿದಕ್ಕೆ ಬೇಸರ ಮೂಡಿದೆ. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರ ಅವಶ್ಯಕತೆ ಅನಿವಾರ್ಯತೆ ಇಲ್ಲವೆ ಎಂದು ಅನಿಸುತ್ತಿದೆ.
ರಾವೇಂದ್ರ ಯಳವತ್ತಿ, ನಗರಸಭೆ ಸದಸ್ಯ (ನೋಟಿಸ್ ಪಡೆದವರು)
ಪಕ್ಷದ ವ್ಯಾಪ್ತಿಯಲ್ಲಿ ನೋಟಿಸ್ ನೀಡಿದ್ದು ನಿಜ. 22 ಜನರಿಗೆ ನೋಟಿಸ್ ನೀಡಲಾಗಿದೆ. ಪಕ್ಷಕ್ಕೆ ಮುಜುಗರು ಆಗುವಂತಹ ಯಾವುದೇ ಟನೆಯನ್ನು ಪಕ್ಷ ಸಹಿಸುವುದಿಲ್ಲ.