ಜೆನ್ ಜಿ ಜತೆಗೂಡಿ ಹೋರಾಟ ನಡೆಸಿದ ಗದಗ ಜಿಲ್ಲೆಯ ಬಿಜೆಪಿ ಮುಖಂಡರಿಗೆ, ಸ್ಥಳೀಯ ನಾಯಕರಿಗೆ, ನಗರಮಂಡಲ, ಗ್ರಾಮೀಣ ಮಂಡಲ ಸದಸ್ಯರಿಗೆ ಜಿಲ್ಲಾ ಘಟಕ ಕಾರಣ ಕೇಳಿ ನೋಟೀಸ್ ನೀಡುತ್ತಿದ್ದರೆ, ಅತ್ತಕಡೆ ಚಿಕ್ಕ ಜಂತಕಲ್ಲನಲ್ಲಿ ಜೆನ್ ಜಿ ಜತೆ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇದ್ರ ಅವರು ಭಾನುವಾರ ವಿವಿಧ ವಿಷಯಗಳ ಕುರಿತು ಚರ್ಚಾ ಸಭೆ ಹಮ್ಮಿಕೊಂಡಿದ್ದಾರೆ. ಈ ಬೆಳವಣಿಗೆ ಸ್ಥಳೀಯ ಬಿಜೆಪಿಯಲ್ಲಿ ಇರಿಸು ಮುರಿಸು ಉಂಟಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೇ ಜೆನ್ ಜಿ ಜತೆ ಸಮಾಲೋಚನೆ ನಡೆಸುತ್ತಿರುವಾಗ ಗದಗ ನಲ್ಲಿ ಜೆನ್ ಜಿ ಪ್ರತಿಭಟನೆಗೆ ವಿರೋಧವೇಕೆ ಎಂಬ ಪ್ರಶ್ನೆ ಜೆನ್ ಜಿಗಳು, ನೋಟೀಸ್ ಪಡೆದ ನಾಯಕರಲ್ಲಿ ಹುಟ್ಟಿದೆ
ಈ ವರಗೆ ಒಳಮುನಿಸು ಬೇಗುದಿಯಿದ್ದ ಮುಖಂಡರಲ್ಲಿ ನೋಟೀಸ್ ನೀಡಿದ ಪ್ರಕರದಿಂದ ಮುನಿಸು ಸ್ಪೋಟಗೊಳ್ಳುವಂತೆ ಕಾಣುತ್ತಿದೆ.
ನೋಟೀಸ್ ನೀಡಿದ ಪ್ರಕರಣ ನಾನಾ ತಿರುವು ಪಡೆಯುತ್ತಿದ್ದು, ಹಲವರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಗದಗ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಗಳು ಅಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈ ಬೆಳವಣಿಗೆಗೆ ಪೂರ್ಣವಿರಾಮ ಇಲ್ಲದಂತಾಗಿದೆ.
ಇತ್ತೀಚೆಗೆ ನಗರದಲ್ಲಿ ಜೆನ್ ಜಿ ಹೋರಾಟಗಾರರು ಮೂಲಭೂತ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಅದಕ್ಕೂ ಮೊದಲ ರಕ್ತದಿಂದ ಪತ್ರ ಬರೆಯುವ ಚಳುವಳಿಯು ನಡೆದಿತ್ತು. ಗದಗ ನಗರದ ನೀರಿನ ಸಮಸ್ಯೆ ಬಗೆಹರಿಸುವುದು, ಕೈಗಾರಿಕೆ ಸ್ಥಾಪನೆ, ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರುಗಳು, ಕಾರ್ಯಕರ್ತರು ಭಾಗಿ ಆಗಿದ್ದರು. ಹಾಗಾಗಿ, ಜೆನ್ ಜಿ ಹೋರಾಟದಲ್ಲಿ ಭಾಗಿ ಆಗಿದ್ದ ಬಿಜೆಪಿ ನಾಯಕರಿಗೆ ಬಿಜೆಪಿ ಘಟಕ ನೋಟೀಸ್ ನೀಡಿತ್ತು. ಪಕ್ಷಕ್ಕೆ ಪೂರಕವಲ್ಲದ ಪ್ರತಿಭಟನೆಯಲ್ಲಿ ಭಾಗಿ ಆಗಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಕುರಿತು ಉತ್ತರ ನೀಡುವಂತೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ