ಗದಗ ನಗರದ ಖಾಸಗಿ ಹೊಟೆಲ್​ ನಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಣ ಮಹಾಭಿಯಾನ&2026 ರ ಸಮಾರೂಪ ಸಭೆಯಲ್ಲಿ ಶಾಸಕ ಸುರೇಶಕುಮಾರ ಮಾತನಾಡಿದರು. ಮಾ. ನಾಗರಾಜ, ಸಿ.ಸಿ.ಪಾಟೀಲ, ಚಂದ್ರು ಲಮಾಣಿ, ಎಸ್​. ವಿ. ಸಂಕನೂರ, ಕಳಕಪ್ಪ ಬಂಡಿ, ನಾಗಮೂತಿರ್, ಲಿಂಗರಾಜ ಪಾಟೀಲ, ಆರ್​. ಕೆ. ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ ಹಾಗೂ ಹಲವರು ಇದ್ದರು. 
ರಾಜ್ಯ

ಸಾರ್ವಜನಿಕ ಸೇವೆಯೇ ಬಿಜೆಪಿ ಸಂಕಲ್ಪ : ಸುರೇಶಕುಮಾರ

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಭಾರತೀಯ ಜನತಾ ಪಾಟಿರ್ ಟಕದಿಂದ ನಗರದ ಖಾಸಗಿ ಹೊಟೆಲ್​ ನಲ್ಲಿ ಹಮ್ಮಿಕೊಂಡಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಣ ಮಹಾಭಿಯಾನ&2026 ರ ಸಮಾರೂಪ ಸಭೆ ಶುಕ್ರವಾರ ಜರುಗಿತು.
ಶಾಸಕ ಸುರೇಶಕುಮಾರ ಮಾತನಾಡಿ, ಭಾರತೀಯ ಜನತಾ ಪಾಟಿರ್ ಸಾರ್ವಜನಿಕವಾಗಿ ಸೇವೆಯೇ ಸಂಕಲ್ಪವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಪ್ರಧಾನ ಮಂತ್ರಿಗಳು ಸಾಕಷ್ಟು ಯೋಜನೆಗಳನ್ನು ನೀಡಿದ್ದು 4 ಕೋಟಿಗಿಂತ ಹೆಚ್ಚು ಜನ ಪ್ರಧಾನಮಂತ್ರಿ ಆವಾಸ್​ ಯೋಜನೆ, 17000 ಸಾವಿರ ಕೋಟಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಜತೆಗೆ 25 ಕೋಟಿ ಜನರನ್ನು ಬಡತನದಿಂದ ಹೋರ ತಂದಿದ್ದಾರೆ. 12 ಕೋಟಿ ಶೌಚಾಲಯಗಳನ್ನು ನಿಮಿರ್ಸಿದ್ದು, ಮುದ್ರಾ ಯೋಜನೆಯಡಿ 57 ಕೋಟಿ ಗೂ ಹೆಚ್ಚು ಸಾಲಗಳ ಸೌಲಭ್ಯ ನೀಡಿದ್ದಾರೆ. ಇನ್ನೂ ಹಲವು ಯೋಜನೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಜಾಗತಿಕ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ಬದಲಾಗುತ್ತಿರುವ ಪೂರೈಕೆ ಸರಣಿಗಳ ನಡುವೆ, ಭಾರತವು ಕಾರ್ಯತಂತ್ರದ ಸ್ವಾಯತ್ತತೆ, ಶಾಂತಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದರು.
ಬಿಜೆಪಿ ಗದಗ ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಎಂದಿಗೂ ಕಠಿಣ ಪರಿಶ್ರಮದಿಂದ ಆಯಾಸಗೊಂಡಿಲ್ಲ. ಅವರ ಕಠಿಣ ಪರಿಶ್ರಮದಿಂದ ಬಡ ಜನರ ಮುಖದಲ್ಲಿ ತರುವ ನಗುವನ್ನು ನೋಡಿ ತೃಪ್ತಿ ಪಡುತ್ತಾರೆ. ವಿಕಸಿತ ಭಾರತಕ್ಕಾಗಿ ಭವಿಷ್ಯದ ಕೃಷಿ ಪರಿಸರ ವ್ಯವಸ್ಥೆ ನಿಮಿರ್ಸಲು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ರೈತರ ಸಾಂಪ್ರದಾಯಿಕ ಜ್ಞಾನ, ವಿಜ್ಞಾನದ ಶಕ್ತಿ ಮತ್ತು ಸರ್ಕಾರದ ಬೆಂಬಲ ಒಟ್ಟಿಗೆ ಸೇರಿದಾಗ, ನಮ್ಮ ರೈತರು ಸಮೃದ್ಧರಾಗುವುದು ಮಾತ್ರವಲ್ಲದೆ, ನಮ್ಮ ಭೂಮಿ ತಾಯಿಯೂ ಸಹ ಆರೋಗ್ಯಕರ ಆಗಿರುತ್ತದೆ ಎಂದರು.
ರಾಜ್ಯಸಭಾ ಸದಸ್ಯ ಮಾ. ನಾಗರಾಜ, ಸಿ.ಸಿ.ಪಾಟೀಲ, ಚಂದ್ರು ಲಮಾಣಿ, ಎಸ್​. ವಿ. ಸಂಕನೂರ, ಕಳಕಪ್ಪ ಬಂಡಿ, ನಾಗಮೂತಿರ್, ಲಿಂಗರಾಜ ಪಾಟೀಲ, ಆರ್​. ಕೆ. ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ ಹಾಗೂ ಹಲವರು ಇದ್ದರು.