"ಕಾಲಮಿತಿಯೊಳಗೆ ಅಜಿರ್ಗಳ ವಿಲೇವಾರಿ' ಯೋಜನೆಯಲ್ಲಿ ಮುನ್ನಡೆ ಸಾಧಿಸಿದ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಗದಗ ಜಿಲ್ಲೆಯೂ ಒಂದಾಗಿದೆ. ಗದಗ ಜತೆಗೆ ಧಾರವಾಡ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳು ಸಹ ಕಾಲಮಿತಿ ಒಳಗಾಗಿ ಅಜಿರ್ಗಳನ್ನು ವಿಲೇವಾರಿ ಮಾಡಿವೆ. ಗದಗ ಜಿಲ್ಲೆ ಕಳೆದ 6 ತಿಂಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಸಾಮಾನ್ಯ ನಾಗರಿಕರಿಗೆ ಕಾಲಮಿತಿಯಲ್ಲಿ ನ್ಯಾಯ ಒದಗಿಸಲು ಜಿಲ್ಲಾಡಳಿತ ಪ್ರಮಾಣಿಕ ಪ್ರಯತ್ನ ಮಾಡಿದೆ. ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಗದಗ ಜಿಲ್ಲೆ ಪ್ರಶಂಶೆ ವ್ಯಕ್ತವಾಗಿತ್ತು. ಅದಕ್ಕೆ ಪೂರಕ ಎಂಬಂತೆ ಜಿಲ್ಲೆ ಪ್ರಸಕ್ತ ಸಾಲಿನಲ್ಲೂ ಉತ್ತಮ ಸಾಧನೆ ಮಾಡಿದೆ. "ಭೂಮಿ' ಗೆ ಸಂಬಂಧಿಸಿದ ಅಜಿರ್ ಮತ್ತು ವ್ಯಾಜ್ಯಗಳ ವಿಲೇವಾರಿ ಸಂಬಂಧಿಸಿದ ಯೋಜನೆ ಇದಾಗಿದ್ದು, ಅಜಿರ್ ಸಲ್ಲಿಸಿದ 7 ದಿನಗಳೊಳಾಗಿ ಸೂಕ್ತ ರೀತಿಯಲ್ಲಿ ಅಜಿರ್ ವಿಲೇವಾರಿ ಮಾಡಿ, ಸಾಮಾನ್ಯ ನಾಗರಿಕನಿಗೆ ಕಾಲಮಿತಿಯಲ್ಲಿ ನ್ಯಾಯ ಒದಗಿಸುವಲ್ಲಿ ಜಿಲ್ಲಾಡಳಿತ ಯಶಸ್ಸಯಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್. ಅಶೋಕ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಸಮೀೆ, ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗೆ ಸಲ್ಲಿಸಿದ ಅಜಿರ್ಗಳು, ಭೂಸ್ವಾಧಿನ ಅಜಿರ್ಗಳ ಸಂಬಂಧಿಸಿದಂತೆ ತುರ್ತು ವಿಲೇವಾರಿಗೆ ಆದೇಶಿಸಲಾಗಿತ್ತು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಲಾಗುವ ಭೂಮಿಯ ಕ್ರಯ, ವಿಭಾಗ, ದಾನಪತ್ರ, ಹಕ್ಕು ಮತ್ತು ಋಣ ಅಳವಡಿಕೆಗೆ ಸಂಬಂಧಿಸಿದ ಆನ್ಲೈನ್ ಅಜಿರ್ಗಳನ್ನು 7 ದಿನಗಳ ಒಳಗಾಗಿ, ಆನ್ಲೈನ್ ಅಲ್ಲದ ಅಜಿರ್ಗಳನ್ನು 15 ದಿನಗಳ ಒಳಗಾಗಿ ವಿಲೇವಾರಿ ಮಾಡಲಾಗುತ್ತಿದೆ. ಸಮೀೆ ವಿಭಾಗದಲ್ಲಿ ಭೂಮಿಯ ಪೋಡಿ ಮಾಡುವುದು, ಕಂದಾಯ ಇಲಾಖೆಯಲ್ಲಿ ಖಾತಾ ಬದಲಾವಣೆ, ಪಾವತಿ ಖಾತಾ ಮತ್ತು ಭೂಮಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಉಪ ವಿಭಾಗಾಧಿಕಾರಿ, ತಹಸೀಲ್ದಾರ ಆದೇಶಗಳು, ಮಲಪ್ರಭ, ತುಂಗಭದ್ರ ಸಂಬಂಧಿಸಿದ ಬೂಸ್ವಾಧಿನ ಪ್ರಕ್ರಿಯೆಗಳಂತ ಅಜಿರ್ಗಳನ್ನು ಕಾಲಮಿತಿಯಲ್ಲಿ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಶಂಸೆ ಮಾಡಿದೆ. ಗದಗ ಹೊರತುಪಡಿಸಿ ಧಾರವಾಡ ಜಿಲ್ಲಾಡಳಿತವೂ ಕೂಡ ರಾಜ್ಯ ಸರ್ಕಾರದ ಆದೇಶವನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿವೆ. ಗದಗ ಜಿಲ್ಲೆಗಿಂತಲೂ ಅಧಿಕ ಅಜಿರ್ಗಳ ವಿಲೇಮಾರಿ ಮಾಡಿದೆ.
* ಸಾಮಾನ್ಯ ನಾಗರಿಕರು, ರೈತರು ಭೂಮಿಯ ಕ್ರಯ, ಪೋಡಿ, ಕೃಷಿಯೇರ ಭೂ ವರ್ಗಾವಣೆ ಪ್ರಕ್ರಿಯೆಗೆ ವಿಳಂಬವಾಗುತ್ತಿತ್ತು.
* ಅಜಿರ್ ವಿಲೇವಾರಿಗೆ ಸಾಮಾನ್ಯವಾಗಿ 45 ದಿನ ಮಿತಿಯಿದ್ದರೂ ವಿಲೇವಾರಿ ವಿಳಂಬ. ಕಚೇರಿಗೆ ಸುತ್ತಾಟ
* ದಲ್ಲಾಳಿಗಳ ಹಾವಳಿ ! ಭ್ರಷ್ಟಾಚಾರಕ್ಕೆ ದಾರಿ
*ಜನರ ಅಲೆದಾಟ ತಪ್ಪಿಸಲು ಸರ್ಕಾರದಿಂದ ಕಟ್ಟು ನಿಟ್ಟಿನ ಆದೇಶ.
* ನೋಂದಾಯಿತ ಅಜಿರ್ಗೆ 7 ದಿನ, ನೊಂದಾಯಿವಲ್ಲದ ಅಜಿರ್ಗೆ 15 ದಿನ ಕಾಲಮಿತಿ.
* ದಲ್ಲಾಳಿ ಹಾವಳಿಗಳಿಂದ ಮುಕ್ತಿ. ಜನರಿಗೆ ಉಳಿತಾಯ
ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಈ ಮೊದಲು ಕ್ಲಿಷ್ಠವಾಗುತ್ತಿದ್ದವು. ವ್ಯವಸ್ಥೆ ಮೊದಲಿನಂತಿಲ್ಲ. ಎಲ್ಲವೂ ಪಾರದರ್ಶಕವಾಗಿದ್ದು, ಜನರಿಗೆ ಭೂ ಸಂಬಂಧಿತ ಅಜಿರ್ಗಳಿಗೆ ಪರಿಹಾರ ವೇಗವಾಗಿ ದೊರೆಯುತ್ತಿದೆ.
ಸಿ.ಎನ್. ಶ್ರೀಧರ, ಜಿಲ್ಲಾಧಿಕಾರಿ