ಬೆಟಗೇರಿ ಮುಖ್ಯ ಮಾರುಕಟ್ಟೆ ಗೋಡೆ ಮರು ನಿರ್ಮಾಣದ ಕಾರ್ಯ ಮರಿಚಿಕೆ  
ರಾಜ್ಯ

ಬೆಟಗೇರಿ ಮಾರುಕಟ್ಟೆ ಗೋಡೆ ನಿರ್ಮಾಣ ಮರಿಚಿಕೆ

ಶಿವಾನಂದ ಹಿರೇಮಠ ಗದಗ
ಕಳೆದ ಏಪ್ರಿಲ್​ 26 ರಂದು ಬಿರುಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಬಿರುಕು ಬಿಟ್ಟು ಭಾಗಿದ್ದ ಬೆಟಗೇರಿ ಮುಖ್ಯ ಮಾರುಕಟ್ಟೆಯ ಬೃಹತ್​ ಗೋಡೆ ಮರು ನಿರ್ಮಾಣದ ಕಾರ್ಯ ಮರಿಚಿಕೆ ಆಗಿದೆ.
ಅಕಾಲಿಕ ಮಳೆ ಗಾಳಿಯಿಂದ ಬಿರುಕು ಬಿಟ್ಟು ಸಂಪೂರ್ಣ ಭಾಗಿದ್ದ ಗೋಡೆಯನ್ನು ಸ್ಥಳಿಯ ಮಾರುಕಟ್ಟೆಯಲ್ಲಿನ ತರಕಾರಿ ಮಾರಾಟಗಾರರ ಹಿತದೃಷ್ಟಿಯಿಂದ ಕಳೆದ ಮೆ ತಿಂಗಳಲ್ಲೇ ನಿರಂತರ ಒಂದು ವಾರಗಳಕಾಲ ಕಾರ್ಯಾಚರಣೆ ನಡೆಸಿ ತೆರೆವು ಮಾಡಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಕಾನೂನು ಸಚಿವ ಎಚ್​.ಕೆ. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಒಳಗೊಂಡಂತೆ ಸಂಪೂರ್ಣ ಆಡಳಿತ ವರ್ಗವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತ್ತು. ಒಂದು ತಿಂಗಳೊಳಗಾಗಿ ಪುನರ್​ ನಿರ್ಮಾಣ ಮಾಡುವುದಾಗಿ ಸಚಿವರ ಸಮೇತವಾಗಿ ಜಿಲ್ಲಾಡಳಿತ ಸ್ಥಳಿಯ ಮಾರುಕಟ್ಟೆ ಜನರಿಗೆ ಭರವಸೆ ನೀಡಿದ್ದರು. ಆದರೆ, ಟನೆ ನಡೆದು 6 ತಿಂಗಳು ಗತಿಸಿದರೂ ಕೂಡ ಪುನರ್​ ನಿರ್ಮಾಣ ಕೆಲಸದ ಚರ್ಚೆಯೆ ಇಲ್ಲವಾಗಿದೆ. ಮುಂಬರುವ ಮುಂಗಾರು ಮಳೆಯ ಒಳಗಾಗಿ ಗೋಡೆ ನಿರ್ಮಾಣ ಆಗದಿದ್ದರೆ ನೂರಾರು ತರಕಾರಿ ಮಾರಾಟಗಾರರು ತರಕಾರಿ ಮಾರಾಟ ಮಾಡದಂತಹ ಪರಿಸ್ಥಿತಿ ನಿರ್ಮಾಣ ಆಗಲಿದೆ. ತರಕಾರಿ ಮಾರಾಟಗಾರರ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣ ಆಗಲಿದ್ದು, ನಗರಸಭೆ, ಜಿಲ್ಲಾಡಳಿತ ಮತ್ತು ಕಾನೂನು ಸಚಿವ ಎಚ್​.ಕೆ. ಪಾಟೀಲ ಮುತುವಜಿರ್ ವಹಿಸಿ ಆದಷ್ಟು ಬೇಗ ಕಾಮಗಾರಿ ಆರಂಭಕ್ಕೆ ಶುಭ ಶಕುನಕ್ಕೆ ಹಾಡಬೇಕಿದೆ.
ನಿರ್ಮಾಣವೇ ಅವೈಜ್ಞಾನಿಕ:
2017ರಲ್ಲಿ 1.80 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಅಂದಿನಿಂದಲೂ ಅವೈಜ್ಞಾನಿಕವಾಗಿ ಈ ಕಟ್ಟಡ ನಿಮಿರ್ಸಿದ್ದಾರೆ ಎಂಬ ಆರೋಪಗಳು ಮತ್ತು ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋವು ಇತ್ತು. ನಿರ್ಮಾಣದ ನಂತರ ಬೃಹತ್​ ಪಿಲ್ಲರಗಳು ಬಾಗಿದ್ದರಿಂದ ಪಿಲ್ಲರ್​ ಗಳಿಗೆ ಬೆಂಬಲವಾಗಿ ಕಬ್ಬಿಣದ ಪಿಲ್ಲರ್​ಗಳನ್ನು ಅಳವಡಿಸಲಾಗಿತ್ತು. ತದನಂತರ ಏಪ್ರಿಲ್​ ತಿಂಗಳಲ್ಲಿ ಸುರಿದ ಮಳೆಗೆ ತರಕಾರಿ ಮಾರುಕಟ್ಟೆ ಪ್ರಾಂಗಣದ ಮೇಲ್ಚಾವಣಿ ಹಾರಿದೆ ಹಾಗೂ ಕಂಪೌಂಡ ಬಿರುಕು ಬಿಟ್ಟಿತ್ತು. ಯಾವುದೇ ಸಮಯದಲ್ಲಾದರೂ ತರಕಾರಿ ಮಾರುಕಟ್ಟೆ ಪ್ರಾಂಗಣ ಬೀಳುವ ಸ್ಥಿತಿ ಉದ್ಭವಿಸಿತ್ತು. ತರಕಾರಿ ವ್ಯಾಪಾರಸ್ಥರು ಆತಂಕದಲ್ಲಿಯೇ ತರಕಾರಿ ಮಾರಾಟವನ್ನು ಬಿಟ್ಟು ಸ್ಥಳದಿಂದ ತೆರಳಿದ್ದರು. ಮುಂಜಾಗೃತ ಕ್ರಮವಾಗಿ 100 ಕ್ಕೂ ಅಧಿಕ ತರಾಕಾರಿ ವ್ಯಾಪಾರಸ್ಥರಿಗೆ ಹೊರಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸರ್ಕಾರಕ್ಕೆ ಅನಗತ್ಯ ವೆಚ್ಚ:
ಅವೈಜ್ಞಾನಿಕ ಕಾಮಗಾರಿಗಳು ಸರ್ಕಾರದ ಬೊಕ್ಕಸಕ್ಕೆ ಭವಿಷ್ಯದಲ್ಲಿ ಯಾವತ್ತಿದ್ದರೂ ಹೊರೆಯಾಗಿ ಪರಿಣಮಿಸುತ್ತವೆ ಎಂಬುದಕ್ಕೆ ಬೆಟಗೇರಿ ತರಕಾರಿ ಮಾರುಕಟ್ಟೆ ಕಟ್ಟಡವೇ ಸಾ. ಅಂದಾಜು 1.80 ಕೋಟಿ ವೆಚ್ಚದಲ್ಲಿ ನಿಮಿರ್ಸಿದ್ದ ಈ ಮಾರುಕಟ್ಟೆಗೆ ಮತ್ತೊಮ್ಮೆ ಲಾಂತರ ರೂ.ಗಳನ್ನು ಹೂಡಿ ದುರಸ್ಥಿ ಕೆಲಸ ಮಾಡಬೇಕಿದೆ.
ಏನಿದು ಯೋಜನೆ:
ಬೆಟಗೇರಿ ತರಕಾರಿ ಮಾರುಕಟ್ಟೆಯು ರಸ್ತೆ ಪಕ್ಕದಲ್ಲಿ ಇದ್ದಿದ್ದರಿಂದ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತ ಆಗುತ್ತಿತ್ತು. ನೂರಾರು ಬಡಜನರು ತರಕಾರಿ ಮಾರಿ ತಮ್ಮ ಜೀವನ ನಿರ್ವಹಿಸುತ್ತಿದ್ದರು. ಬಹಿರಂಗ ಮಾರುಕಟ್ಟೆ ಇದ್ದಿದ್ದರಿಂದ ಮಳೆ, ಗಾಳಿ, ಬಿಸಿಲಿಗೆ ವ್ಯಾಪಾರಸ್ಥರಿಗೆ ತೀವ್ರ ತೋಂದರೆ ಆಗುತ್ತಿತ್ತು. ಈ ಹಿನ್ನೆಲೆ ಮಾರುಕಟ್ಟೆ ಪ್ರಾಂಗಣ ನಿಮಿರ್ಸಲು ಉದ್ದೇಶಿಸಲಾಯಿತು. ನೂರಾರು ತರಕಾರಿ ವ್ಯಾಪಾರಸ್ಥರು ವ್ಯಾಪಾರ ಮಾಡುವಂತಹ ಸುಸಜ್ಜಿತ ಮಾರುಕಟ್ಟೆ ಪ್ರಾಂಗಣ ನಿಮಿರ್ಸಲು 2016ಕ್ಕೆ ಚಾಲನೆ ನೀಡಲಾಯಿತು. ವಿದ್ಯುತ್​ ದೀಪ ಮತ್ತು ಸೂಕ್ತ ಆಸನಗಳ ವ್ಯವಸ್ಥೆಗೊಳಿಸಿ ತರಕಾರಿ ಮಾರಕಟ್ಟೆ ಪ್ರಾಂಗಣ ನಿಮಿರ್ಸಲಾಯಿತು. ತರಕಾರಿ ಮಾರುಕಟ್ಟೆ ಕಾಮಗಾರಿ 2018ಕ್ಕೆ ಉದ್ಘಾಟನೆ ಆಯಿತು. ಆದರೆ, ನಿಯಮಿತ ಎತ್ತರಕ್ಕಿಂತ ಮಾರುಕಟ್ಟೆ ಪ್ರಾಂಗಣ ಹೆಚ್ಚಿಸಿ ಮೇಲ್ಭಾಗದಲ್ಲಿ ತಗಡಿನ ಶೀಟ ಹಾಕಲಾಗಿತ್ತು. ನಿಯಮಿತ ಎತ್ತರಕ್ಕಿಂದ ಎತ್ತರವನ್ನು ಪಿಲ್ಲರ್​ ಮೂಲಕ ಹೆಚ್ಚಿಸಿದ್ದರಿಂದ ನಾಲ್ಕು ದಿಕ್ಕಿನಲ್ಲಿ ಪಿಲ್ಲರಗಳಿಗೆ ಯಾವುದೆ ಬೆಂಬಲ ಇದ್ದಿರಲಿಲ್ಲ. ಹಾಗಾಗಿ ಗಾಳಿ ಸಂದರ್ಭದಲ್ಲಿ ಮಾರುಕಟ್ಟೆ ಪ್ರಾಂಗಣ ಅಲುಗಾಡುತ್ತಿದ್ದದ್ದನ್ನು ವಾಪಾರಸ್ಥರು ಹೇಳುತ್ತಾರೆ. ಜತೆಗೆ ಮೇಲ್ಭಾಗದ ಇಕ್ಕೆಲಗಳಲ್ಲಿ ತಗಡಿನ ಶೀಟ್​ ನಿಂದ ಸಂಪೂರ್ಣ ಪ್ಯಾಕ್​ ಮಾಡಿದ್ದರಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಗಾಳಿ ಸಂಚರಿಸದಂತಾಗಿತ್ತು. ಈ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ಕಳೆದ ಎಡ ಮತ್ತು ಬಲಗಡೆ ಇರುವ ಎಲ್ಲ ಕಾಂಕ್ರಿಟ್​ ಪಿಲ್ಲರ್​ಗಳು ವಾಲಿದ್ದವು. ಯಾವುದೇ ಸಂದರ್ಭದಲ್ಲಿ ಪಿಲ್ಲರ್​ಗಳು ನೆಲಕ್ಕೆ ಕುಸಿಯುವ ಸಂದರ್ಭ ಏರ್ಪಟ್ಟಿತ್ತು. ಈ ವೇಳೆ ಕಾಮಗಾರಿ ಕಳಪೆ ಮತ್ತು ಅವೈಜ್ಞಾನಿಕ ಕುರಿತು ಸ್ಥಳಿಯರು ಆರೋಪಿಸಿದ್ದರಿಂದ ನಗರಸಭೆ ತರಾತುರಿಯಲ್ಲಿ ಎಡ ಮತ್ತು ಬಲ ಪಿಲ್ಲರ್​ಗಳಿಗೆ ಬೆಂಬಲವಾಗಿ ಸ್ಟೀಲ್​ ಪಿಲ್ಲರ್​ಗಳನ್ನು ಅಳವಡಿಸಿತ್ತು. ತದ ನಂತರ ಏಪ್ರಿಲ್​ ತಿಂಗಳ ಮಳೆಗೆ ಮೇಲ್ಚಾವಣಿ ಹಾರಿಹೋಗಿ, ಒಂದೆಡೆ ಗೋಡೆ ಸಂಪೂರ್ಣ ಬಿರು ಬಿಟ್ಟು ಭಾಗಿತ್ತು.
ಸದ್ಯದ ಸ್ಥಿತಿ:
ಮಳೆ ಗಾಳಿಗೆ ಭಾಗಿದ್ದ ಗೋಡೆಯನ್ನು ತೆರೆವು ಗೊಳಿಸಿದ ಹಿನ್ನೆಲೆ ಮಾರುಕಟ್ಟೆ ಬಯಲಾಗಿ ಪರಿವರ್ತನೆ ಆಗಿದೆ. ಮಳೆ ಗಾಳಿ ಸಂದರ್ಭದಲ್ಲಿ ಮಾರುಕಟ್ಟೆ ಒಳಗಾಗಿ ಮಳೆ ನೀರು ಬರುತ್ತಿದೆ. ತರಕಾರಿ ವ್ಯಾಪರಾಕ್ಕೆ ಅನಾನೂಕು ಆಗುತ್ತಿದೆ.