ಗದಗ ನಗರದ ಬಸಯೋಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಉಮೇಶ ಪುರದ ಮಾತನಾಡಿದರು. ಸುನಂದಾ ಜ್ಯಾನೋಪಂತರ, ಎಂ.ವಿ. ಐಹೋಳ್ಳಿ, ಜಿ. ಪಿ. ಕಟ್ಟಿಮನಿ, ಗಗನದೀಪ ಬಾರಕೇರ, ವಿ. ಎಂ. ಮುಂದಿನಮನಿ, ಕೆ. ಎಸ್. ಪಲ್ಲೆದ, ಎಸ್. ಎಂ. ಬುರಡಿ ಇತರರು ಇದ್ದರು.
ಒಬ್ಬ ರೈತ ತನ್ನ ಭೂಮಿಯಲ್ಲಿ ಬಿತ್ತಿದ ಬೀಜ ಲಕೊಡುವ ತನಕ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಾನೆ. ಆದರೆ ಪಾಲಕರಾದ ನಾವು ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸಲು ಅಸಮರ್ಥ ಆಗುತ್ತಿದ್ದೇವೆ ಎಂದು ಆಯರ್ವೇದ ವೈದ್ಯ ಉಮೇಶ ಪುರದ ಹೇಳಿದರು.
ನಗರದ ಬಸವಯೋಗ ಮಂದಿರದಲ್ಲಿ ಸೋಮವಾರ ಆರಂಭಗೊಂಡ ಸಂಸತಿ ಸಂಸ್ಕಾರ ಶಿಬಿರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಮಕ್ಕಳು ಬಯಸಿದ್ದನ್ನು ಕೊಡಿಸುತ್ತೇವೆ. ಆದರೆ, ಅವರ ಭವಿಷ್ಯ ಜೀವನ ಬಗ್ಗೆ ಆಲೋಚಿಸುವದಿಲ್ಲ. ಮಕ್ಕಳ ಆಲೋಚನಾಶಕ್ತಿ, ಕ್ರಿಯಾಶಕ್ತಿಗಳು ಬೆಳೆಯಬೇಕಂದರೆ ಪೂರಕವಾದ ಅಗತ್ಯತೆಗಳನ್ನು ಪೂರೈಸಬೇಕು. ಮೊಬೈಲ್ ಗೀಳಿನಿಮದ ಹೊರಗೀಡಬೇಕು ಎಂದರು.
ಬಾಲ್ಯಾವಸ್ಥೆಯಿಂದಲೇ ನಾವು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಸದೃಢರನ್ನಾಗಿಸಬೇಕು. ಅವರಿಗೆ ಬದುಕಲು ಬೇಕಾದ ಅಗತ್ಯವಿರುವ ಕಲೆ, ಕ್ರೀಡೆ, ಸಾಹಿತ್ಯ, ಪರಿಸರ, ಸಂಸತಿ, ಸಂಸ್ಕಾರಗಳ ಅರಿವು ಮೂಡಿಸಬೇಕು. ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ಈ ಹಿನ್ನೆಲೆಯಲ್ಲಿ ಮಕ್ಕಳ ಸವೋರ್ನ್ನತಿಗೆ ಸಂಸತಿ ಸಂಸ್ಕಾರಗಳ ಾನ ಸಹಕಾರಿಯಾಗಿದೆ ಎಂದರು.
ತೆರಿಗೆ ಸಲಹೆಗಾರ ಚೇತನ ಅಂಗಡಿ ಮಾತನಾಡಿ, ಶಿಬಿರಾಥಿರ್ಗಳು ಶಿಬಿರದಲ್ಲಿ ಹೊಸತನ ಕಲಿಯಬೇಕು. ಕಲಿತದ್ದನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.
ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಎಂ. ವಿ. ಐಹೊಳ್ಳಿ ಮಾತನಾಡಿ, ನಮಗೆ ಮತ್ತು ನಮ್ಮ ದೇಶಕ್ಕೆ ಮಕ್ಕಳು ಬಹುದೊಡ್ಡ ಆಸ್ತಿ ಆಗಿದ್ದಾರೆ. ಈ ಆಸ್ತಿಯನ್ನು ಜಾಗರೂಕತೆಯಿಂದ ಸಂರಸಬೇಕು. ಮಕ್ಕಳ ಯೋಗೇಮ ನಿಭಾಯಿಸಬೇಕು. ಇಂದು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಜೊತೆಯಲ್ಲಿ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದರು.
ಸುನಂದಾ ಜ್ಯಾನೋಪಂತರ, ಜಿ. ಪಿ. ಕಟ್ಟಿಮನಿ, ಗಗನದೀಪ ಬಾರಕೇರ, ವಿ. ಎಂ. ಮುಂದಿನಮನಿ, ಕೆ. ಎಸ್. ಪಲ್ಲೆದ, ಎಸ್. ಎಂ. ಬುರಡಿ ಇತರರು ಇದ್ದರು.