ಗದಗ ನಗರಸಭೆ ಆವರಣದಲ್ಲಿ ಗುರುವಾರ ಬಾಲ ಕಾಮಿರ್ಕ ವಿರೋಧಿ ದಿನಾಚರಣೆ, ಜಾಥಾ ಕಾರ್ಯಕ್ರಮಕ್ಕೆ ನ್ಯಾಯಾಧೀಶ ಸಿ.ಎಸ್​. ಶಿವನಗೌಡ್ರ ಚಾಲನೆ ನಿಡಿ ಮಾತನಾಡಿದರು. ಸಿ. ಎನ್​. ಶ್ರೀಧರ, ಶ್ರೀಶೈಲ ಸೋಮನಕಟ್ಟಿ , ಜಯದೇವಿ ಅಂದಪ್ಪ ಕವಲೂರು, ಡಾ. ನಂದಾ ಹಣಬರಹಟ್ಟಿ, ರಾಧಾ ಮಣ್ಣೂರ, ಜಯಶ್ರೀ ಆರ್​ ಇತರರು ಇದ್ದರು. 
ರಾಜ್ಯ

ಬಾಲ ಕಾಮಿರ್ಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಿ: ನ್ಯಾಯಾಧೀಶ ಶಿವನಗೌಡ್ರ ಕರೆ

ಶಿವಾನಂದ ಹಿರೇಮಠ
ಬಾಲ ಕಾಮಿರ್ಕ ಪದ್ಧತಿ ಹಾಗೂ ಕಿಶೋರ ಕಾಮಿರ್ಕ ಪದ್ಧತಿ ನಿರ್ಮೂಲನೆ ಕುರಿತು ಜಾಥಾ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರನ್ನು ಬಾಲಕಾಮಿರ್ಕ ಪದ್ಧತಿಯಿಂದ ಮುಕ್ತಗೊಳಿಸಿ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಶಿವನಗೌಡ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​, ಕಾಮಿರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ನಗರಸಭೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಬಾಲ ಕಾಮಿರ್ಕ ಹಾಗೂ ವಿರೋಧಿ ದಿನದ ಅಂಗವಾಗಿ ಬಾಲ ಕಾಮಿರ್ಕ ಪದ್ಧತಿ ಹಾಗೂ ಕಿಶೋರ ಕಾಮಿರ್ಕ ಪದ್ಧತಿ ನಿರ್ಮೂಲನೆ ಕುರಿತು ಆಟೋ ಮೂಲಕ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಉಜ್ವಲ ಭವಿಷ್ಯ ಸಾಧ್ಯ. ಯಾವುದೇ ಮಗು ಶಿಕ್ಷಣದಿಂದ ವಂಚಿತ ಆಗಬಾರದು. ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಕೆಲಸಕ್ಕೆ ದೂಡುವುದು ಅಪರಾಧವಾಗಿದೆ. ಹೋಟೆಲ್​, ಗ್ಯಾರೇಜ್​, ಕಟ್ಟಡ ಕಾಮಗಾರಿ ಸೇರಿದಂತೆ ಯಾವುದೇ ಉದ್ಯಮಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡರೆ ಕಾನೂನುಬದ್ಧವಾಗಿ ಕಠಿಣ ಶಿಕ್ಷ ಆಗಲಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ನಗರಸಭೆ ಆವರಣದಿಂದ ಪ್ರಾರಂಭವಾದ ಜಾಥಾ ನಗರದ ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ಮಹೇಂದ್ರಕರ ವೃತ್ತ, ಟಾಂಗಕೂಟ, ಹಳೆ ಬಸ್​ ನಿಲ್ದಾಣ, ರೋಟರಿ ಸರ್ಕಲ್​ ವರೆಗೆ ಜಾಗೃತಿ ಜಾಥಾ ನಡೆಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ಕಾಲೇಜು ವಿದ್ಯಾಥಿರ್ಗಳು ಮತ್ತು ಸಾರ್ವಜನಿಕರು "ಬಾಲಕಾಮಿರ್ಕ ಪದ್ಧತಿ ತೊಲಗಲಿ, ಮಕ್ಕಳ ಭವಿಷ್ಯ ಬೆಳಗಲಿ, "ಮಕ್ಕಳಿಗೆ ಕೆಲಸ ಬೇಡ, ಅಕ್ಷರ ನೀಡಿ' ಎಂಬ ಘೋಷಣಾ ಲಕಗಳನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ, ಜಿಲ್ಲಾ ಕಾಮಿರ್ಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ , ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಅಂದಪ್ಪ ಕವಲೂರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧ ಮಣ್ಣೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್​, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ನಗರಸಭೆ ಪೌರಯುಕ್ತ ರಾಜರಾಮ ಪವಾರ ಹಲವರು ಇದ್ದರು.