ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಅರಣ್ಯ ಸಾಗುವಳಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಜರುಗಿತು. ರವಿಕಾಂತ ಅಂಗಡಿ, ಡಾ. ನಂದಾ ಹಣಬರಟ್ಟಿ, ಉದಯಕುಮಾರ ಯಲಿವಾಲ, ಎನ್.ಟಿ. ಪೂಜಾರ ಇತರರು ಇದ್ದರು.
ಬಗರಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುವ ಪ್ರತಿ ಫಲಾನುಭವಿ ಸರ್ಕಾರದ ನಿಯಮಗಳ ಅನುಸಾರ ಎಲ್ಲ ಅರ್ಹ ದಾಖಲೆಗಳನ್ನು ಒದಗಿಸಬೇಕು. ಅಧಿಕಾರಿಗಳ ಸ್ಥಳ ಸಮೀಕ್ಷೆ ಮಾಡುವ ಹಂತದಲ್ಲಿ ಗೊಂದಲ ಸೃಷ್ಟಿಮಾಡಿಕೊಳ್ಳಬಾರದು ಎಂದು ಉತ್ತರ ಕರ್ನಾಟಕ ಮಹಾಸಭಾ ಅದ್ಯಕ್ಷ ರವಿಕಾಂತ ಅಂಗಡಿ ಹೇಳಿದರು.
ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಹಸೀಲ್ದಾರ ಸಭಾಭವನದಲ್ಲಿ ಗುರುವಾರ ಬಗರಹುಕುಂ ಹಾಗೂ ಅರಣ್ಯ ಭೂಮಿ ಅವಲಂಭಿತ ರೈತರಿಗಾಗಿ ಜರುಗಿದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಫಲಾನುಭವಿಗಳಿಗೆ ಆದಷ್ಟು ಬೇಗ ಹಕ್ಕು ಒದಗಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿರುವದರಿಂದ ನಿಮ್ಮ ದಶಕಗಳ ಕನಸು ಬೇಗ ಈಡೇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯ ಭರದಿಂದ ಸಾಗಿದೆ. ಅಧಿಕಾರಿ ವರ್ಗ ಈ ಕುರಿತು ಸ್ಥಳ ಸಮೀಕ್ಷೆ ಮಾಡಲಿದ್ದು, ಎಲ್ಲರು ಅವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ರೂಪಾಲಿ ನಾಯಕ ಮಾತನಾಡಿ, ದಾಖಲಾತಿ ವಿಷಯದಲ್ಲಿ ರೈತರಿಗೆ ಕೆಲ ಮಾಹಿತಿಗಳ ತೊಂದರೆ ಇದೆ. ಕೂಲಂಕಷವಾಗಿ ಚಚಿರ್ಸಿ ಪರಿಹಾರ ಕಂಡುಕೊಳ್ಳಬೇಕು. ದಾಖಲೆಗಳ ಕ್ರೂಧಿಕರಣ ಸರಿಯಾಗಿ ನಡೆಯಬೇಕು. ಸಮಸ್ಯೆಗಳು ಇದ್ದಲ್ಲಿ ತಿಳಿಹೇಳಿ ಸಕಾರಾತ್ಮವಾಗಿ ಸ್ಪಂದಿಸಬೇಕು. ಮುಖ್ಯವಾಗಿ ಪಿಡಿಓ ಹಾಗೂ ಪಂಚಾಯಿತಿ ಕಾರ್ಯದಶಿರ್ಗಳು ಸರ್ಕಾರದ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದರು.
ರೈತರಿಗೆ ದಾಖಲೆ ವಿಷಯದಲ್ಲಿ ಅರ್ಥವಾಗದೇ ಇದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೈಪಿಡಿ ಇದ್ದು ಅದನ್ನು ಗಮನಿಸಬೇಕು. ಸರ್ಕಾರದ ಈ ವಿಷಯದಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದು, ಚಾಚೂ ತಪ್ಪದೇ ಪಾಲಿಸಬೇಕು. ದಶಕಗಳ ರೈತರ ಕನಸು ನನಸು ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಮುಂಡರಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಲ, ತಹಸೀಲ್ದಾರ್ ರಾವೇಂದ್ರ ಕುಲಕಣಿರ್, ಉಪನ್ಯಾಸಕ ಎನ್.ಟಿ ಪೂಜಾರ ಇತರರು ಇದ್ದರು.