ಗದಗ ಕೆಎಸ್​ಎಸ್​ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಿ.ಎ್​. ದಂಡಿನ ನುಡಿ ನಮನ ಕಾರ್ಯಕ್ರಮದಲ್ಲಿ ಬಸವರಾಜ ಹೊರಟ್ಟಿ ಮಾತನಾಡಿದರು. ಡಾ. ಬಸವರಾಜ ಧಾರವಾಡ, ರವಿ ದಂಡಿನ, ನಾಗರಾಜ ದಂಡಿನ, ಶಶಿ ಸಾಲಿ, ಎಸ್​. ಎಂ. ಅಗಡಿ, ಶಂಕರ ಕೊಲ್ಮಿ, ಎಂ .ಎಚ್​. ಪೂಜಾರ, ಜಿ. ಎಸ್​. ಪಾಟೀಲ, ಡಾ. ಡಿ. ಬಿ. ಗವಾನಿ, ಶರಣಬಸಪ್ಪ ವೆಂಕಟಪುರ, ಆರ್​. ಎನ್​. ಭಂಡಾರಿ, ಎಸ್​. ಐ. ಚವಡಿ ಸೇರಿದಂತೆ ಹಲವರು ಇದ್ದರು.  
ರಾಜ್ಯ

ನೂರಾರು ಕುಟುಂಬಗಳಿಗೆ ಅನ್ನದ ಹಾದಿ ಮಾಡಿಕೊಟ್ಟವರು B F​. ದಂಡಿನ: ಸಭಾಪತಿ ಬಸವರಾಜ ಹೊರಟ್ಟಿ

ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಐದು ದಶಕಗಳಿಂದ ಶೈಣಿಕ ೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನ ಮೂಡಿಸಿದವರು ಡಾ. ಬಿ .ಎ್​ ದಂಡಿನ. ನೂರಾರು ವಿದ್ಯಾಥಿರ್ಗಳಿಗೆ ಅನ್ನದ ದಾರಿ ಮಾಡಿಕೊಟ್ಟರಾಗಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
 ಇತ್ತೀಚಿಗೆ ನಿಧನ ಹೊಂದಿದ ಶಿಣ ತ ಬಿ.ಎ್​. ದಂಡಿನವರ ನಿಧನ ನಿಮಿತ್ಯ ನಗರದ ಕೆವಿಎಸ್​ಆರ್​ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು ನೂರಾರು ಶಾಲಾ ಕಾಲೇಜುಗಳನ್ನು ತೆರೆದು ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಣ ದೊರಕಿಸಿ ಕೊಡುವ ಮೂಲಕ ಅರದ ಅರಿವನ್ನು ಮೂಡಿಸಿ ಅವರ ಬದುಕಿಗೆ ಬಣ್ಣ ತುಂಬಿದ್ದಾರೆ. ಸ್ವತಃ ಪ್ರಾಧ್ಯಾಪಕರಾಗಿ ಕೆಲ ಕಾಲ ಸೇವೆ ಮಾಡಿ ಶಿಣ ಸಂಸ್ಥೆಯನ್ನು ತೆರೆದು ತಮ್ಮ ಸಂಸ್ಥೆಯ ಮೂಲಕ ನೂರಾರು ಶಿಕರಿಗೆ ಉದ್ಯೋಗ ನೀಡಿ ಅನ್ನಕ್ಕೆ ಹಾದಿ ಮಾಡಿಕೊಟ್ಟವರು. ಪ್ರಾಥಮಿಕ ಹಂತದಿಂದ ಪದವಿ ಕಾಲೇಜುವರೆಗೆ ಶಾಲಾ ಕಾಲೇಜುಗಳನ್ನು ತೆರೆದು ಲಾಂತರ ವಿದ್ಯಾಥಿರ್ಗಳಿಗೆ ಶಿಣ ದೊರಕುವಂತೆ ಮಾಡಿದ್ದಾರೆ. ಇವರ ಸಮಾಜಮುಖಿ ಹಾಗೂ  ಶೈಣಿಕ ಸೇವೆಯನ್ನ ಸಮಾಜ ಎಂದಿಗೂ ಮರೆಯುವುದಿಲ್ಲ. ಬಿ.ಎ್​. ದಂಡಿನ ನಮ್ಮ ಜೊತೆ ಇಲ್ಲದಿದ್ದರೂ ಅವರು ಕಟ್ಟಿ ಬೆಳೆಸಿದ ಶಿಣ ಸಂಸ್ಥೆಗಳು ಅವರು ಮೂಡಿಸಿದ ಹೆಜ್ಜೆ ಗುರುತುಗಳು ನಮ್ಮನ್ನು ಸದಾ ಅವರನ್ನು ನೆನೆಯುವಂತೆ ಮಾಡುತ್ತವೆ. ಅವರು ಹಾಕಿಕೊಟ್ಟ ಆದರ್ಶಗಳನ್ನ ಅವರ ಕುಟುಂಬದವರು ಹಿತೈಷಿಗಳು ಪಾಲಿಸಿಕೊಂಡು ಹೋಗಬೇಕು. ಅಂದಾಗ ಅವರ ಅವರ ಸಾಧನೆಗಳು ಸಾರ್ಥಕಗೊಳ್ಳುತ್ತವೆ ಎಂದರು.
ದಂಡಿನವರ ಮತ್ತು ನನ್ನ ಒಡನಾಟ ಕಳೆದ ಐದು ದಶಕಗಳಿಂದ ಇತ್ತು. ಸರಳ ಸಜ್ಜನ ಕಷ್ಟ ಜೀವಿಯಾದ ದಂಡಿನ ಅವರು ವೈಯಕ್ತಿಕವಾಗಿ ಏನನ್ನು ಸುಖಪಡದೆ ಒಂದು ದೊಡ್ಡ ಶೈಣಿಕ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದವರು. ಅದರ ಲವನ್ನ ತಾವು ಅನುಭವಿಸದೆ ನೂರಾರು ಕುಟುಂಬಗಳು ನೆಮ್ಮದಿಯಿಂದ ಉಣ್ಣುವಂತೆ ಮಾಡಿದ ಶ್ರೇಯಸ್ಸು ದಂಡಿನವರಿಗೆ ಸಲ್ಲುತ್ತದೆ. ಈಗಾಗಲೇ ಅವರ ಸೇವೆಯನ್ನ ಸರ್ಕಾರ ವಿಶ್ವವಿದ್ಯಾಲಯಗಳು ಹಲವಾರು ಸಂ ಸಂಸ್ಥೆಗಳು ಸ್ಮರಿಸಿ ಗೌರವಿಸಿ ಹಾರೈಸಿವೆ ಎಂದರು.
ಡಾ. ಬಸವರಾಜ ಧಾರವಾಡ, ರವಿ ದಂಡಿನ, ನಾಗರಾಜ ದಂಡಿನ, ಶಶಿ ಸಾಲಿ, ಎಸ್​. ಎಂ. ಅಗಡಿ, ಶಂಕರ ಕೊಲ್ಮಿ, ಎಂ .ಎಚ್​. ಪೂಜಾರ, ಜಿ. ಎಸ್​. ಪಾಟೀಲ, ಡಾ. ಡಿ. ಬಿ. ಗವಾನಿ, ಶರಣಬಸಪ್ಪ ವೆಂಕಟಪುರ, ಆರ್​. ಎನ್​. ಭಂಡಾರಿ, ಎಸ್​. ಐ.  ಚವಡಿ ಸೇರಿದಂತೆ ಹಲವರು ಇದ್ದರು.