ಜಿಲ್ಲೆಯಲ್ಲಿ ಆಯುಷ್ ಇಲಾಖೆ ಅಕ್ರಮಗಳು ದಿನೇ ದಿನೆ ಹೊರಬರುತ್ತಿವೆ. ಅಕ್ರಮಕ್ಕೆ ಹೂರಿನ ಹಾರಕ್ಕೆ ಮತ್ತೊಂದು ಹೂವು ಎಂಬಂತೆ ಬಳಕೆಗೆ ಯೋಗ್ಯವಲದಲ್ಲ ಔಷಧಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತೇ ಎಂಬ ಅನುಮಾನ ಆರೋಪಗಳು ಸರ್ಕಾರಿ ಔಷಧ ಪ್ರಯೋಗಾಲಯದ ವರದಿಗಳು ಪುಷ್ಠಿಕರಿಸುತ್ತಿವೆ.
ಹೌದು, 2024&25ನೇ ಸಾಲಿನಲ್ಲಿ ಆಯುಷ್ ಆಸ್ಪತ್ರೆಗಳಿಗೆ ಸರಬರಾಜಾಗಿರುವ ಕೆಲವು ಔಷಧಿಗಳು ಬಳಕೆಗೆ ಯೋಗ್ಯವಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಸರ್ಕಾರಿ ಔಷಧ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬಳಕೆಗೆ ಯೋಗ್ಯವಲ್ಲದ ಔಷಧಿಗಳನ್ನೇ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇಲಾಖೆ ಬಳಸಿದ್ದಾರೆ ಎಂಬುದಾಗಿ ಸಾರ್ವಜನಕಿರು ಆರೋಪಿಸುತ್ತಿದ್ದಾರೆ.
ಗದಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ 2024&25ನೇ ಸಾಲಿನಲ್ಲಿ ಮಧ್ಯಪ್ರದೇಶದ ಜಮ್ನಾ ಹರ್ಬಲ್ ರೀಸರ್ಚ ಲಿ., ನವದೆಹಲಿಯ ರೋನ್ಪಾಲ್ ಬಯೋಟೆಕ್ ಪೈ.ಲಿ., ಭೂಷಣ್ ಫಾರ್ಮಾಸ್ಯುಟಿಕಲ್ಸ್ ಲಿ. ಕಂಪನಿಗಳು ಪೂರೈಕೆ ಮಾಡಿದ್ದ ಕೆಲವು ಔಷಧಿಗಳನ್ನು ಇದೇ ವರ್ಷದ ಮೇ ಮತ್ತು ಜೂನ್ ನಲ್ಲಿ ಬೆಂಗಳೂರಿನ ಸರ್ಕಾರಿ ಔಷಧಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿವಿಧ ಔಷಧಿಗಳು ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ.
ಜಮ್ನಾ ಹರ್ಬಲ್ ರೀಸರ್ಚ ಲಿ ಹಾಗೂ ರೋನ್ಪಾಲ್ ಬಯೋಟೆಕ್ ಸಂಸ್ಥೆಯವರು ಜಿಲ್ಲೆಯ ಆಯುಷ್ ಆಸ್ಪತ್ರೆಗೆ ಪೂರೈಕೆ ಮಾಡಿದ್ದ ಅಮೃತರಿಶ್ತಾ, ಚಂದನಸವ್, ದ್ರಾಕ್ಷಾರಿಶ್ತಾ, ಅಜ್ಮೋದಾದಿ ರ್ಚೂಣ, ತ್ರಿಕಾಟು ರ್ಚೂಣ, ಸೌಭಾಗ್ಯ ಶುಂಠಿ ಪಾಕ, ಇಂದುಕಾಂತ ಗ್ರಿತಾ ಔಷಧಿ ದ್ರವ್ಯಗಳು ಸೇರಿವೆ. ಈ ಔಷಧಿ ದ್ರವ್ಯಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದ ತಜ್ಞರು "ನಾಟ್ ಆ್ ಸ್ಟಾಂಡರ್ಡ ಕ್ವಾಲಿಟಿ (ಎನ್ಎಸ್ಕ್ಯು/ಉತ್ತಮ ಗುಣಮಟ್ಟದ್ದ ಔಷಧವಲ್ಲ) ಹಾಗೂ ನೋ ಒಪಿನಿಯನ್ ಎಂದು ಷರಾ ಬರೆದಿದ್ದಾರೆ. ಜತೆಗೆ ಈ ಔಷಧಿ ದ್ರವ್ಯಗಳನ್ನು ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ವಿತರಿಸದಂತೆ ಆಯುಷ್ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.