ನಗರದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಸೋಮಲಿಂಗ ಗೆನ್ನೂರು ಉದ್ಘಾಟಿಸಿದರು. ಎ. ಡಿ. ಗೊಡಖಿಂಡಿ, ಡಾ. ಎಸ್​. ಡಿ. ಬಂಡಾರ್ಕರ, ಎಸ್​. ವಿ. ಬಾಗಮಾರ ಇತರರು ಇದ್ದರು. 
ರಾಜ್ಯ

ಆತ್ಮವಿಶ್ವಾಸ ಮತ್ತು ಸೃಜನಶೀಲತೆಗೆ ಕ್ರೀಡೆ ಅಗತ್ಯ: ಸೋಮಲಿಂಗ ಗೆನ್ನೂರು.

ಶಿವಾನಂದ ಹಿರೇಮಠ

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಎಎಸ್​ಎಸ್​ ಸಂಸ್ಥೆಯಲ್ಲಿ ಶನಿವಾರ ಪ್ರಸಕ್ತ ಸಾಲಿನ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಶಸ್ತಿ ಸಹಿತ ಪಾಸಾದ ವಿದ್ಯಾಥಿರ್ಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರುಗಿತು.
ಬಾಗಲಕೋಟೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲ ಸಚಿವ ಸೋಮಲಿಂಗ ಗೆನ್ನೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಆದರ್ಶ ವ್ಯಕ್ತಿಗಳೆಂದರೆ ತಂದೆ ತಾಯಿ. ಪೋಷಕರನ್ನು ಹೊರತುಪಡಿಸಿ ನಮಗೆ ಅಕ್ಷರ ನೀಡಿದ ಶಿಕ್ಷಕರು ನಮ್ಮ ಮಾರ್ಗದರ್ಶಕರು. ತಂದೆ ತಾಯಿ ಹಾಗೂ ಶಿಕ್ಷಕರನ್ನು ಜೀವನದ ಕೊನೆಯ ಉಸಿರು ಇರುವರೆಗೂ ಸ್ಮರಿಸಬೇಕು. ಮಹಾವಿದ್ಯಾಲಯಗಳು ವಿದ್ಯಾಥಿರ್ಗಳ ಶೈಕ್ಷಣಿಕ ಜ್ಞಾನವನ್ನು ಬೆಳೆಸುವುದರ ಜೊತೆಗೆ ಅವರಲ್ಲಿರುವ ಪ್ರತಿಭೆ, ಸೃಜನಶೀಲತೆ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅಭಿವೃದ್ಧಿಪಡಿಸುವ ಪ್ರಮುಖ ಸ್ಥಳಗಳು. ಈ ಉದ್ದೇಶದಿಂದ ಮಹಾವಿದ್ಯಾಲಯಗಳಲ್ಲಿ ವಿವಿಧ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಮಹಾವಿದ್ಯಾಲಯದಲ್ಲಿ ಕ್ರೀಡಾಕೂಟ, ಸಾಂಸತಿಕ ಕಾರ್ಯಕ್ರಮ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ನಾಟಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂತ ಕಾರ್ಯಕ್ರಮಗಳಲ್ಲಿ ವಿದ್ಯಾಥಿರ್ಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದಶಿರ್ಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯವನ್ನು ಹೆಚ್ಚಿಸಿದರೆ, ಸಾಂಸತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು ವಿದ್ಯಾಥಿರ್ಗಳ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತವೆ. ಸಮಾಜ ಸೇವಾ ಕಾರ್ಯಕ್ರಮಗಳು ವಿದ್ಯಾಥಿರ್ಗಳಲ್ಲಿ ಸೇವಾ ಮನೋಭಾವ ಮತ್ತು ಜವಾಬ್ದಾರಿಯ ಅರಿವು ಮೂಡಿಸುತ್ತವೆ ಎಂದರು.
ಸಂಸ್ಥೆಯ ಚೇರ್ಮನ್​ ಆನಂದ ಪೋತ್ನಿಸ ಮಾತನಾಡಿದರು. ಡಾ. ವಿ. ಟಿ. ನಾಯ್ಕರ, ಪ್ರೊ. ಎಸ್​. ಬಿ. ಜಾದವ, ಪ್ರೊ. ಎಸ್​. ಎಂ. ಬೆಳಗಾವಿ, ಡಾ. ಸುನಿತಾ ನಾಯಕ ಇತರರು ಇದ್ದರು.