ನಗರದ ಎಎಸ್​ಎಸ್​ ಸಂಸ್ಥೆಯಲ್ಲಿ ಹಮ್ಮಿಕೊಂಡ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ವಿ.ಟಿ. ನಾಯ್ಕರ ಉದ್ಘಾಟಿಸಿದರು. ಡಾ. ಸುನಿತಾ ನಾಯಕ, ಪ್ರೊ. ಸಲ್ಮಾ ಬೆಳಗಾಂ, ಪ್ರಶಾಂತ ಹೊಂಬಾಳಿ, ಪ್ರೊ, ಈಶ್ವರ ಯಾವಗಲ್ಲ, ಪ್ರೊ. ಮೋಹನ್​.ಡಿ, ಪ್ರೊ. ಸುನಿತಾ ತಿರ್ಲಾಪುರ, ಸವಿತಾ ಇಬ್ಬನಿ, ಭಾಗ್ಯಶ್ರೀ ಕುರಿ, ಯಶವಂತ ಯಾವಗಲ ಇತರರು ಇದ್ದರು. 
ರಾಜ್ಯ

ಎಎಸ್​ಎಸ್​ ಸಂಸ್ಥೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ್​ ಚಾಲನೆ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ವನಮಹೋತ್ಸವ, ಮಾದಕ ದ್ರವ್ಯ ವ್ಯಸನದಿಂದ ಆಗುವ ದುಷ್ಪರಿಣಾಮಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆ, ಭಾಷಣ- ಪ್ರಬಂಧ ಸ್ಪರ್ಧೆಯನ್ನ ಸಂಸ್ಥೆಯು ಹಮ್ಮಿಕೊಳ್ಳುತ್ತಿದ್ದು ಪ್ರತಿಯೊಬ್ಬ ವಿದ್ಯಾಥಿರ್ಗಳು ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಪ್ರಾಚಾರ್ಯ ಡಾ. ವಿ. ಟಿ ನಾಯ್ಕರ ಹೇಳಿದರು.
ನಗರದ ಆದರ್ಶ ಶಿಕ್ಷಣ ಸಮಿತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಟಕದಿಂದ ಐಕ್ಯೂಎಸಿ ಅಡಿಯಲ್ಲಿ "ನಶಾ ಮುಕ್ತ ಭಾರತ ಅಭಿಯಾನದ "ಆರು ದಿನಗಳ ವಿಶೇಷ ಅಭಿಯಾನ ಕಾರ್ಯಕ್ರಮಕ್ಕೆ ಬುಧವಾರ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಈ ಸಮಸ್ಯೆಯನ್ನು ತಡೆಗಟ್ಟಲು ಭಾರತ ಸರ್ಕಾರವು "ನಶಾ ಮುಕ್ತ ಭಾರತ ಅಭಿಯಾನ' ಕಾರ್ಯಕ್ರಮವನ್ನು ಆರಂಭಿಸಿದೆ. ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ವ್ಯಸನಮುಕ್ತ ಸಮಾಜವನ್ನು ನಿಮಿರ್ಸುವ ಉದ್ದೇಶವಾಗಿದೆ ಎಂದರು.
ಮಾದಕ ದ್ರವ್ಯಗಳ ವ್ಯಸನದಿಂದ ಆರೋಗ್ಯ ಹದಗೆಡುತ್ತದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿನ್ನಡೆಯಾಗುತ್ತದೆ ಹಾಗೂ ಕುಟುಂಬದ ಶಾಂತಿ ಭಂಗವಾಗುತ್ತದೆ. ಯುವಕರು ಕೆಟ್ಟ ಸ್ನೇಹಿತರ ಪ್ರಭಾವದಿಂದ ಅಥವಾ ಕುತೂಹಲದಿಂದ ಈ ವ್ಯಸನಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಟನೆಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ವಿಶೇಷವಾಗಿ ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಜಾಗೃತಿ ರ್ಯಾಲಿಗಳು, ಉಪನ್ಯಾಸಗಳು, ಪೋಸ್ಟರ್​ ಸ್ಪರ್ಧೆಗಳು ಮತ್ತು ಸಮಾಲೋಚನಾ ಶಿಬಿರಗಳನ್ನು ನಡೆಸಲಾಗುತ್ತದೆ ಎಂದರು.
ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ಪ್ರೊ. ಬಿ. ಪಿ. ಜೈನರ ಮಾತನಾಡಿ ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರದ ಜೊತೆಗೆ ಪೋಷಕರು, ಶಿಕ್ಷಕರು ಮತ್ತು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಯುವಕರು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ನಶಾ ಮುಕ್ತ ಭಾರತ ಅಭಿಯಾನವು ಆರೋಗ್ಯವಂತ, ಸುರಕ್ಷಿತ ಮತ್ತು ಅಭಿವೃದ್ಧೀಶಿಲ ಭಾರತ ನಿರ್ಮಾಣದ ಮಹತ್ವದ ಹೆಜ್ಜೆಯಾಗಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ವಿಶೇಷವಾಗಿ ಯುವ ಸ್ನೇಹ ಬಳಗ ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದರು.
ಡಾ. ಸುನಿತಾ ನಾಯಕ, ಪ್ರೊ. ಸಲ್ಮಾ ಬೆಳಗಾಂ, ಪ್ರಶಾಂತ ಹೊಂಬಾಳಿ, ಪ್ರೊ, ಈಶ್ವರ ಯಾವಗಲ್ಲ, ಪ್ರೊ. ಮೋಹನ್​.ಡಿ, ಪ್ರೊ. ಸುನಿತಾ ತಿರ್ಲಾಪುರ, ಸವಿತಾ ಇಬ್ಬನಿ, ಭಾಗ್ಯಶ್ರೀ ಕುರಿ, ಯಶವಂತ ಯಾವಗಲ ಇತರರು ಇದ್ದರು.