ಗದಗ ತಾಲೂಕಿನ ಹುಲಕೋಟಿ ಸರ್ಕಾರಿ ಕಾಲೇಜಿನಲ್ಲಿ ಅಂಬೇಡ್ಕರ ದಿನಾಚರಣೆ ಜರುಗಿತು. ಸುಧಾ ಕೌಜಗೇರಿ, ಅಪ್ಪಣ್ಣ ಹಂಜೆ, ರಮೇಶ ಹುಲಕುಂದ, ಭೀಮೇಶ ಇತರರು ಇದ್ದರು.
ಗದಗ: ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಭಾರತರತ್ನ ಡಾ. ಭೀಮರಾವ ರಾಮಜಿ ಅಂಬೇಡ್ಕರ ತಮ್ಮ ಅಸಾಧಾರಣ ಜ್ಞಾನ, ದೃಢಸಂಕಲ್ಪ ಮತ್ತು ಪರಿಶ್ರಮದ ಮೂಲಕ ಭಾರತೀಯ ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮಾನತೆ, ಸ್ವಾತಂತ್ರ್ಯ, ನ್ಯಾಯದ ಭದ್ರ ಅಡಿಗಲ್ಲು ಹಾಕಿದ ಮಹಾನ್ ನಾಯಕರಾಗಿದ್ದಾರೆ ಎಂದು ಪ್ರಾಚಾಯೆರ್ ಡಾ. ಸುಧಾ ಕೌಜಗೇರಿ ಹೇಳಿದರು
ತಾಲೂಕಿನ ಹುಲಕೋಟಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಜರುಗಿದ ಅಂಬೇಡ್ಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾಪ್ರಜ್ಞಾವಂತರು. ಶಿಣವೇ ಮಾನವನ ಮುಕ್ತಿಗೆ ದಾರಿಯೆಂದು ಸಾರಿದ ಅಂಬೇಡ್ಕರ ಅವರ ಚಿಂತನೆಗಳು ವಿದ್ಯಾಥಿರ್ಗಳಿಗೆ ಸ್ಪೂತಿರ್ ಪ್ರೇರಣೆ ಆಗಿದೆ. ಅವರ ಆದರ್ಶಗಳು ಸದಾಕಾಲ ಸ್ಮರಣೀಯವಾಗಿವೆ ಎಂದು ಹೇಳಿದರು.
ಎನ್ಎಸ್ಎಸ್ ಟಕದ ಸಂಯೋಜಕ ಮತ್ತು ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಮಾತನಾಡಿ ಸಂವಿಧಾನದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು, ಕಾನೂನಿನ ಮುಂದೆ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ಅಪಾರವಾಗಿದೆ. ಅವರ ಜೀವನವೇ ಶ್ರಮ, ಜ್ಞಾನ ಮತ್ತು ಸಾಧನೆಯ ಪ್ರತಿಕವಾಗಿದೆ. ವಿದ್ಯಾಥಿರ್ಗಳು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಡಾ. ಮಂಜುನಾಥ ತ್ಯಾಲಗಡಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ, ಹುಸೇನಭಾಷಾ ಅವರು ಭಾರತದ ಸಂವಿಧಾನ, ಮಹಾಂತೇಶ ಅವರು ಅಂಬೇಡ್ಕರ್ ಅವರ ಬರವಣಿಗೆಗಳು ಕುರಿತು ತಿಳಿಸಿದರು.
ರಮೇಶ ಹುಲಕುಂದ, ಭೀಮೇಶ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾಥಿರ್ಗಳು ಇದ್ದರು.