35 ಕೋಟಿ ಮೊತ್ತದ ಲಿಕ್ಕರ ಅಧಿಕ ಮಾರಾಟ. 3 ಕೋಟಿ ಮೊತ್ತದ ಬಿಯರ್ ಕಡಿಮೆ ಮಾರಾಟ
2025-26ನೇ ಸಾಲಿನಲ್ಲಿ 340 ಕೋಟಿ ಮೊತ್ತದ ಲಿಕ್ಕರ್, 47 ಕೋಟಿ ಮೊತ್ತದ ಬಿಯರ್ ಮಾರಾಟ.
ರೋಣದಲ್ಲಿ ಅಧಿಕ! ಮುಂಡರಗಿಯಲ್ಲಿ ಕಡಿಮೆ ಮಾರಾಟ.
ಅತೀವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೇಸಿಗೆ, ಮಳೆಗಾಲ, ಯುದ್ಧೋನ್ಮಾದ, ರೂಪಾಯಿ ಕುಸಿತ, ಪೆಟ್ರೋಲ್ ಬೆಲೆ ಏರಿಕೆ ಇಂತಹ ಯಾವುದೇ ಕಾರಣಗಳು ಅಬಕಾರಿ ಇಲಾಖೆಯ ವ್ಯವಹಾರಕ್ಕೆ ಬಿಸಿ ತಟ್ಟುವುದುದಿಲ್ಲ. ಬೆಲೆ ಏರಿಕೆ ಆದರೂ ಬ್ರ್ಯಾಂಡ್ ಬದಲಾಯಿಸುತ್ತಾರೆ ವಿನಹ ಕುಡಿತ ನಿಲ್ಲಿಸುವುದಿಲ್ಲ. ಹೀಗಾಗಿ ಅಬಕಾರಿ ಎಂದಿಗೂ ಲಾಭದ ಉದ್ದಿಮೆಯೇ ಎಂಬ ಸತ್ಯ 2025&26 ನೇ ಸಾಲಿ ಆಥಿರ್ಕ ವರ್ಷದ ಅಂಕಿ ಅಂಶಗಳು ಹೇಳುತ್ತಿವೆ. ಕಳೆದ 2025ರ ಏಪ್ರಿಲ್ ನಿಂದ ಅನೇಕ್ ಲಿಕ್ಕರ್ ಬ್ರ್ಯಾಂಡ್ ಹಾಗೂ ಬಿಯರ್ಗಳ ಬೆಲೆ ಏರಿಕೆ ನಡುವೆಯೂ ಗದಗ ಜಿಲ್ಲೆಯ ಅಬಕಾರಿ ಇಲಾಖೆ ರಾಜ್ಯಕ್ಕೆ ಉತ್ತಮ ಆದಾಯವನ್ನೇ ನೀಡಿದೆ. 2024-25 ನೇ ಸಾಲಿಗಿಂತ 2025&26ನೇ ಸಾಲಿನಲ್ಲಿ ಲಿಕ್ಕರ್ ಮತ್ತು ಬಿಯರ್ ಬಾಕ್ಸ್ಗಳ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡರೂ ಸಹ ಬೆಲೆಗಳ ಏರಿಕೆ ಹಿನ್ನೆಲೆ ಲಿಕ್ಕರ್ ಆದಾಯ ಅಧಿಕವಾಗಿದೆ.
ಜಿಲ್ಲೆಯಲ್ಲಿ 2024 -25ನೇ ಸಾಲಿನಲ್ಲಿ ಐಎಂಎಲ್(ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟದಿಂದ ಜಿಲ್ಲೆಗೆ 306.34 ಕೋಟಿ ಮೊತ್ತದ ವ್ಯವಹಾರ ನಡೆದಿತ್ತು. 2025&26 ನೇ ಸಾಲಿನಲ್ಲಿ ಬೆಲೆ ಏರಿಕೆ ಹಾಗೂ ನಾನಾ ಕಾರಣದಿಂದ 8.35 ಲಕ್ಷ ಬಾಕ್ಸ್ (ಕಳೆದ ಬಾರಿಗಿಂತ 5 ಲಕ್ಷ ಕಡಿಮೆ) ಮಾರಾಟವಾಗಿದೆ. ಆದರೆ, 340.54 ಕೋಟಿ ಮೊತ್ತದ ವ್ಯವಹಾರ ನಡೆದಿದ್ದು, ಕಳೆದ ಬಾರಿಗಿಂತ ಲಿಕ್ಕರ್ ಮಾರಾಟದಲ್ಲಿ 35 ಕೋಟಿ ಮೊತ್ತದ ವ್ಯವಹಾರ ಅಧಿಕವಾಗಿದೆ. ತಾಲೂಕು ವಾರು ನೋಡುವುದಾದರೆ, ರೋಣ ತಾಲೂಕಿನಲ್ಲಿ 2024&25ನೇ ಸಾಲಿಗಿಂತ 2025&26ನೇ ಸಾಲಿನಲ್ಲಿ 2164 ಲಿಕ್ಕರ್ ಬಾಕ್ಸ್ಗಳು ಅಧಿಕ ಮಾರಾಟವಾಗಿದ್ದು, ಇನ್ನೂಳಿದ ತಾಲೂಕಿನಲ್ಲಿ ಕಳೆದ ಬಾರಿಗಿಂತ ಕಡಿಮೆ ಲಿಕ್ಕರ್ ಬಾಕ್ಸ್ಗಳು ಮಾರಾಟ ಆಗಿವೆ.
ಬಿಯರ್ ಮಾರಾಟದಲ್ಲಿ ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ 3 ಕೋಟಿ ಮೊತ್ತದ ಕಡಿಮೆ ಪ್ರಗತಿ ಸಾಧಿಸಿದೆ. 2024&25ನೇ ಸಾಲಿನಲ್ಲಿ 4.09 ಲಕ್ಷ ಬಾಕ್ಸ್ಗಳು ಮಾರಾಟವಾಗಿ, 50.05 ಕೋಟಿ ಆಥಿರ್ಕ ಸಂಪನ್ಮೂಲ ಹರಿದು ಬಂದಿತ್ತು. 2025&26ನೇ ಸಾಲಿನಲ್ಲಿ 3.38 ಲಕ್ಷ ಬಾಕ್ಸ್ (ಕಳೆದ ಬಾರಿಗಿಂತ 71 ಸಾವಿರ ಬಾಕ್ಸ್ ಕಡಿಮೆ) ಮಾರಾಟವಾಗಿ 47.05 ಕೋಟಿ ಮೊತ್ತದ ಆಥಿರ್ಕ ಸಂಪನ್ಮೂಲ ಜಿಲ್ಲೆಗೆ ಹರಿದು ಬಂದಿದೆ. ರೋಣ ತಾಲೂಕಿನ ಬಿಯರ್ ಬಾಕ್ಸ್ಗಳು ಅತೀ ಕಡಿಮೆ ಮಾರಾಟ ಆಗಿದ್ದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2025ರಲ್ಲಿ ಜೂನ್ ಮತ್ತು ಜುಲೈ ತಿಂಗಳ ಅತೀವೃಷ್ಠಿ, ಅನಾವೃಷ್ಟಿ ಪರಿಣಾಮ ಲಿಕ್ಕರ ಮತ್ತು ಬಿಯರ್ ಬಾಕ್ಸ್ಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡಿತ್ತು. ಈ ಎರಡೂ ತಿಂಗಳು ನಿಗದಿತ ಮಾರಾಟದಲ್ಲಿ ಇಲಾಖೆ ಪ್ರಗತಿ ಸಾಧಿಸರಲಿಲ್ಲ. ಡಿಸೆಂಬರ ತಿಂಗಳ ಚಳಿಗಾಲ ಸಂದರ್ಭದಲ್ಲಿ ಶೇ. 1.75ಗೂ ಅಧಿಕ ಲಿಕ್ಕರ ಮಾರಾಟ ಕಡುಂಬದಿದೆ.
* 35 ಕೋಟಿ ಮೊತ್ತದ ಲಿಕ್ಕರ ಅಧಿಕ ಮಾರಾಟ. 3 ಕೋಟಿ ಮೊತ್ತದ ಬಿಯರ್ ಕಡಿಮೆ ಮಾರಾಟ
* 2025&26ನೇ ಸಾಲಿನಲ್ಲಿ 340 ಕೋಟಿ ಮೊತ್ತದ ಲಿಕ್ಕರ್, 47 ಕೋಟಿ ಮೊತ್ತದ ಬಿಯರ್ ಮಾರಾಟ.
* ರೋಣದಲ್ಲಿ ಅಧಿಕ! ಮುಂಡರಗಿಯಲ್ಲಿ ಕಡಿಮೆ ಮಾರಾಟ.