ಗದಗ: ರಾಜ್ಯದ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತರಾದ ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ 2022&23, 2023&24, 2024&25, 2025&26 ರ ಸಾಲಿಗೆ ಗಳಿಕೆ ರಜೆ ನಗದೀಕರಣಕ್ಕಾಗಿ ಬೇಕಾಗಿದ್ದ ಒಟ್ಟು 62.30 ಕೋಟಿ ರೂಪಾಯಿಗಳಲ್ಲಿ ಸರ್ಕಾರವು 30 ಕೋಟಿ ಹಣವನ್ನು ಬಿಡುಗಡೆ ಮಾಡಿ ಸರ್ಕಾರದ ಅಧೀನ ಕಾರ್ಯದಶಿರ್ ಆದೇಶ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಡುಗಡೆ ಮಾಡಿದ ಅನುದಾನವನ್ನು 2025&26ನೇ ಸಾಲಿನಲ್ಲಿ ನಿವೃತ್ತಿಯಾದ ಸಿಬ್ಬಂದಿಗೆ ವಿತರಿಸಲು ಸೂಚಿಸಲಾಗಿದೆ. ಪ್ರಮುಖವಾಗಿ 2022&23, 2023&24 ಹಾಗೂ 2024&25ನೇ ಸಾಲುಗಳಿಗೆ ಸಂಬಂಧಿಸಿದಂತೆ 3 ವರ್ಷಗಳ ಕಾಲ ನಿವೃತ್ತ ನೌಕರರಿಗೆ ಗಳಿಕೆ ರಜೆ ನಗದೀಕರಣ ಹಣವನ್ನು ವಿತರಿಸುವಲ್ಲಿ ವಿಳಂಬವಾಗಲು ಕಾರಣಗಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನೋಟಿಸ್ ನೀಡಲು ಸೂಚಿಸಲಾಗಿದೆ. ಇದಲ್ಲದೆ ಬಾಕಿ ಅನುದಾನಕ್ಕಾಗಿ ಮರು ಪ್ರಸ್ತಾವನೆಯನ್ನು ಸಲ್ಲಿಸಲು ಶಾಲಾ ಶಿಣ ಇಲಾಖೆ ಮತ್ತು ಪದವಿ ಪೂರ್ವ ವಿಭಾಗದ ನಿದೇರ್ಶಕರಿಗೆ ನಿರ್ದೇಶಿಸಲಾಗಿದೆ. ಕಳೆದ 4 ವರ್ಷಗಳ ಗಳಿಕೆ ರಜೆ ನಗದೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಈ ಹಿಂದೆ ಜರುಗಿದ ಜಂಟಿ ಅಧಿ ವೇಶನ ಸಂದರ್ಭದಲ್ಲಿ ವಿಷಯವನ್ನು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ಸಂಕನೂರು ತಿಳಿಸಿದ್ದಾರೆ.