ಗದಗ: ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಬೆಳೆಯಲು ಉತ್ತಮ ಕೃಷಿ ಭೂಮಿ ಇದೆ. ಆದರಿಂದ ರೇಷ್ಮೆ ಬೆಳೆ ಕುರಿತು ಸಂಪೂರ್ಣ ವಿವರಣೆ ನೀಡಲು ಮಾ.೬ ರಂದು ನಗರದ ತೋಂಟದಾರ್ಯ ಮಠದ ಸಭಾಭವನದಲ್ಲಿ ಬೆಳಗ್ಗೆ ೧೧ಕ್ಕೆ ರೇಷ್ಮೆ ಮೇಳವನ್ನು ಕೈಗೊಳ್ಳಲಾಗಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಕೈಲಾಸಮೂರ್ತಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಾ.೬ ರಂದು ರೇಷ್ಮೆ ಮೇಳ ಜರಗುತ್ತಿದ್ದು ಕಾರಾಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಂದ್ರಕಾAತ ಮುಂಡರಗಿ, ಸಿಎಸ್‌ಬಿಯ ನಿರ್ದೇಶಕ ಡಾ.ಪೆರಿಯಸ್ವಾಮಿ ಎಸ್., ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಮಲ್ಲೂರು ಶಿವಣ್ಣ ಆಗಮಿಸುವರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ರೇಷ್ಮೆ ಗಾರಿಕೆ ಸ್ಥಿತಿ ಹಾಗೂ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಗುವುದು,ತಾಂತ್ರಿಕ ಅಧಿವೇಶನ ಜರಗುವುದು ಎಂದು ಹೇಳಿದರು.
ರೇಷ್ಮೆ ವಿಜ್ಞಾನಿ ಡಾ.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿರುವ ಯುವಕರು ರೇಷ್ಮೆ ಉದ್ಯಮ ಕಡೆಗೆ ಆಸಕ್ತಿ ತೆಗೆದುಕೊಳ್ಳಬೇಕು. ಹಾಗಾಗಿ ರೇಷ್ಮೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.