ಗದಗ ಗಂಗಾಪುರ ಪೇಟೆಯ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ರಾಜು ಧರೆಯಣ್ಣವರ ಉದ್ಘಾಟಿಸಿದರು. ಎಂ. ಎಸ್​. ಪಾಟೀಲ, ಸಂಜೀವ ಚವ್ಹಾಣ ಸೇರಿದಂತೆ 100 ಕ್ಕೂ ಅಧಿಕ ಜನರು ಇದ್ದರು. 
ರಾಜ್ಯ

ಧರ್ಮಾಚರಣೆಯಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ: ರಾಜು ಧರೆಯಣ್ಣವರ

ವಿಜಯವಾಣಿ ಸುದ್ದಿಜಾಲ ಗದಗ
ಹಿಂದೂ ಧರ್ಮವು ಕೇವಲ ಆಚರಣೆಯಲ್ಲ. ಅದೊಂದು ಸಮಗ್ರ ಜೀವನ ಪದ್ಧತಿಯಾಗಿದೆ. ಇಂದು ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣದ ಅಭಾವ ಇರುವುದರಿಂದ ಯುವ ಪೀಳಿಗೆಯಲ್ಲಿ ಧರ್ಮಾಭಿಮಾನ ಮತ್ತು ರಾಷ್ಟ್ರಾಭಿಮಾನ ನಶಿಸುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಾಜು ಧರೆಯಣ್ಣವರ ಹೇಳಿದರು.
ನಗರದ ಗಂಗಾಪುರ ಪೇಟೆಯ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಹಿಂದೂ ಧರ್ಮಶಿಕ್ಷಣವನ್ನು ಪಡೆದು, ಧರ್ಮಾಚರಣೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಆಧ್ಯಾತ್ಮಿಕ ಬಲವನ್ನು ವೃದ್ಧಿಸಿಕೊಂಡಾಗ ಮಾತ್ರ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸಾಧ್ಯ. ಹಿಂದೂ ಧರ್ಮವು ಸಮಗ್ರ ಜೀವನ ಪದ್ಧತಿಯಾಗಿದ್ದು, ಧರ್ಮಶಿಕ್ಷಣ ನೀಡುವುದು ಇಂದಿನ ಕಾಲದ ಅಗತ್ಯವಾಗಿದೆ. ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ಅಭಾವದ ಕಾರಣದಿಂದ ಇಂದಿನ ಪೀಳಿಗೆಯಲ್ಲಿ ಧರ್ಮಾಭಿಮಾನ ಮತ್ತು ರಾಷ್ಟ್ರಾಭಿಮಾನ ನಶಿಸಿ ಹೋಗುತ್ತಿದೆ. ಜೊತೆಗೆ ಹಿಂದೂ ದೇವಸ್ಥಾನಗಳ ಸರಕಾರೀಕರಣ, ದೇಶದಲ್ಲಿ ವಕ್ಫ ಕಾನೂನಿನ ರ್ದುಬಳಕೆ, ಲವ್​ ಜಿಹಾದ್​, ಹಲಾಲ್​ ಜಿಹಾದ್​, ಬಲವಂತದ ಮತಾಂತರದ ಮೂಲಕ ಹಿಂದೂ ಸಮಾಜದ ಮೇಲೆ ಆಘಾತಗಳು ಹೆಚ್ಚುತ್ತಿವೆ. ಹಿಂದೂ ದೇವಸ್ಥಾನಗಳ ರಕ್ಷಣೆ, ಧಾಮಿರ್ಕ ಸ್ವಾತಂತ್ರ್ಯ, ಸಾಂಸತಿಕ ಮೌಲ್ಯಗಳ ಸಂರಕ್ಷಣೆಗಾಗಿ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದಕ್ಕಾಗಿ ನಾವೆಲ್ಲರೂ ಧರ್ಮಾಚರಣೆಯನ್ನು ಮಾಡಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಮಹಾದೇವ ಸಾಗರೆಕರ ಮಾತನಾಡಿ, ಹಿಂದೂ ಸಮಾಜಕ್ಕೆ ಕಳೆದ ಮೂರು ತಲೆಮಾರಿನಿಂದ ಧರ್ಮ ಶಿಕ್ಷಣದ ಅಭಾವದಿಂದಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇವತ್ತಿನ ದಿನ ನಾವು ಆಸ್ಪತ್ರೆಗೆ ಹೋದರೆ ರೋಗಿಯ ಆರೋಗ್ಯಕ್ಕಿಂತ ತಮ್ಮ ಹಣ ಗಳಿಕೆಯ ವಿಚಾರವೇ ಪ್ರಾಮುಖ್ಯವಾಗಿದೆ. ಶಾಲಾ -ಕಾಲೇಜುಗಳಲ್ಲಿ ವಿದ್ಯೆಗಿಂತ ವಿದ್ಯಾಥಿರ್ಗಳಿಂದ ದೇಣಿಗೆ ಮತ್ತು ಶುಲ್ಕ ಹೇಗೆ ಸಂಗ್ರಹ ಮಾಡಬೇಕು ಎಂಬುದು ಶಿಕ್ಷಣ ಸಂಸ್ಥೆಗಳು ಯೋಚಿಸುತ್ತವೆ. ಸರ್ಕಾರದ ಸಣ್ಣ ಕೆಲಸಗಳಿಗೂ ಸಹ ಹಣ ಕೊಡಬೇಕಾಗುತ್ತದೆ. ಇದೆಲ್ಲಾ ನಶಿಸಿ ಹೋಗಬೇಕಾದರೆ ಈ ದೇಶ ಹಿಂದೂ ರಾಷ್ಟ್ರವಾಗುವುದು ಅವಶ್ಯಕತೆಯಿದೆ ಇದಕ್ಕಾಗಿ ನಾವೆಲ್ಲರೂ ಸೇರಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಎಂ. ಎಸ್​. ಪಾಟೀಲ, ಸಂಜೀವ ಚವ್ಹಾಣ ಸೇರಿದಂತೆ 100 ಕ್ಕೂ ಅಧಿಕ ಜನರು ಇದ್ದರು.