ಗದಗ ನಗರದ ಪೊಲೀಸ್ ಕಚೇರಿ ಮುಂಭಾಗದಲ್ಲಿ ಸಂಗಮೇಶ್ವರ ಧನ್ನೂರು ನೂತನ ಆಸ್ಪತ್ರೆ ಕಟ್ಟಡವನ್ನು ಜಿ.ಎಸ್. ಪಾಟೀಲ ಉದ್ಘಾಟಿಸಿದರು. ಸಿ.ಸಿ. ಪಾಟೀಲ, ಎಸ್.ವಿ. ಸಂಕನೂರು, ಚಂದ್ರು ಲಮಾಣಿ, ಆರ್. ಎಸ್. ಪಾಟೀಲ, ಡಾ. ಬಿ.ಎಂ. ಆಲೂರು, ಐ.ಎಸ್. ಪಾಟೀಲ, ಮಂಜುನಾಥ ಕೊಣ್ಣೂರು ಇತರರು ಇದ್ದರು.
ನಗರ, ಗ್ರಾಮದ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿ ಇಂದು ನೂತನ ಸಂಗಮೇಶ್ವರ ಧನ್ನೂರು ಆಸ್ಪತ್ರೆಯ ಉದ್ಘಾಟನೆ ಮಾಡಲಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ಈ ಆಸ್ಪತ್ರೆಯನ್ನು ಪ್ರಶಾಂತ ಧನ್ನೂರು ತೆರೆದಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನಗರದಲ್ಲಿ ನೂತನ ಸಂಗಮೇಶ್ವರ ಧನ್ನೂರು ಆಸ್ಪತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಟಕ, ಶಸ್ತ್ರಚಿಕಿತ್ಸಾ ವಿಭಾಗ, ಲ್ಯಾಬ್, ಎಕ್ಸರೇ, ಸ್ಕಾ$ನಿಂಗ್ ಸೇರಿದಂತೆ ಆಧುನಿಕ ವೈದ್ಯಕಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಉತ್ತಮ ಚಿಕಿತ್ಸೆ ಜತೆಗೆ ಉತ್ತಮ ಸಂಬಂಧಗಳನ್ನು ಆಸ್ಪತ್ರೆ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ ಈ ಆಸ್ಪತ್ರೆ ಜನರ ಜೀವ ರಕ್ಷಿಸುವ ಸೇವಾ ಕೇಂದ್ರವಾಗಬೇಕು. ಆಸ್ಪತ್ರೆ ಆರಂಭದಿಂದ ಸ್ಥಳಿಯ ಜನತೆಗೆ ದೊಡ್ಡ ಅನುಕೂಲವಾಗಲಿದೆ. ಈಗ ವೈದ್ಯಕಿಯ ಶಿಕ್ಷಣದಲ್ಲಿ ಹಲವು ಕೋರ್ಸಗಳು ಬಂದಿದೆ. ಆದರೆ, ಈ ಹಿಂದೆ ಎಂಬಿಬಿಎಸ್ ಮಾಡುವುದೇ ದೊಡ್ಡ ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಕೆ.ಬಿ. ದನ್ನೂರು ಅವರು ಎಂಬಿಬಿಎಸ್ ಮಾಡಿ ಜನಸೇವೆಯಲ್ಲಿ ತಮ್ಮನ್ನು ತೋಡಗಿಸಿಕೊಂಡರು ಎಂದರು.
ವಿಧಾನಪರಿಷತ್ ಸದಸ್ಯ ಎಸ್. ವಿ. ಸಂಕನೂರು ಮಾತನಾಡಿ, ನಗರದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅತ್ಯಾಧುನಿಕ ಆಸ್ಪತ್ರೆ ಕಟ್ಟಿಸಿದ್ದಾರೆ. ಆಸ್ಪತ್ರೆ ನಿರ್ಮಾಣ ಮಾಡಲು ಹಲವರು ಧನ್ನೂರು ಕುಟುಂಬಕ್ಕೆ ಸಹಕಾರ ಮಾಡಿದ್ದಾರೆ. ಆ ಸಹಕಾರವನ್ನು ಮಾಡಿದ ಎಲ್ಲರನ್ನೂ ಇಂದು ಧನ್ನೂರು ಕುಟುಂಬ ಸ್ಮರಿಸಿದೆ. ಜಿಲ್ಲೆಗೆ ಅನೇಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬರುತ್ತಿವೆ. ಇದೊಂದು ಉತ್ತಮ ಬೆಳವಣಿಗೆ. ಸಮಾಜವು ಶಿಕ್ಷಕ ಮತ್ತು ವೈದ್ಯರಿಗೆ ಗೌರವ ನೀಡುತ್ತದೆ. ಅಂತಹ ವೃತ್ತಿಯಲ್ಲಿ ಧನ್ನೂರು ಕುಟುಂಬ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಡಾ. ಶೇಖರ ಸಜ್ಜನ ಮಾತನಾಡಿ, ಡಾ. ಕೆ. ಬಿ. ಧನ್ನೂರು ಸೇವೆ ಅನುಪಮ. ಈಗ ಅವರ ಪುತ್ರ ಅತ್ಯಾಧುನಿಕ ಆಸ್ಪತ್ರೆ ಕಟ್ಟಿಸಿದ್ದಾರೆ. ಎಲ್ಲ ಸೌಲಭ್ಯ ಇರುವ ಕೆಲವೇ ಆಸ್ಪತ್ರೆಗಳಲ್ಲಿ ಈ ಸಂಗಮೇಶ್ವರ ದನ್ನೂರು ಆಸ್ಪತ್ರೆಯೂ ಒಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್. ಎಸ್. ಪಾಟೀಲ, ಡಾ. ಬಿ.ಎಂ. ಆಲೂರು, ಶಾಸಕ ಚಂದ್ರು ಲಮಾಣಿ, ಐ.ಎಸ್. ಪಾಟೀಲ, ಮಂಜುನಾಥ ಕೊಣ್ಣೂರು ಇತರರು ಇದ್ದರು.