ಗದಗ ಭಿಮಸೇನ ಜೋಷಿ ರಂಗ ಮಂದಿರದಲ್ಲಿ ನಡೆದ ಸರ್ಕಾರಿ ನೌಕರ ಸಂದ ರಾಜ್ಯ ಕಾರ್ಯಕಾರಿಣಿ ಕಾರ್ಯಕ್ರಮವನ್ನು ಸಿ.ಎಸ್​. ಷಡಾ ಉದ್ಘಾಟಿಸಿದರು. ರವಿ ಗುಂಜಿಕರ, ಬಸವರಾಜ ಬಳ್ಳಾರಿ, ಡಿ.ಎಸ್​. ತಳವಾರ, ಸಿದ್ದಪ್ಪ ಲಿಂಗದಾಳ, ಎಂ. ಎಂ. ನಿಟ್ಟಾಲಿ, ರಾಜು ಕಂಟಿಗೊಣ್ಣವರ, ಮುತ್ತು ಮಲ್ಲಶೆಟ್ಟಿ, ರಾಜ್ಯ ಸಂದ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಇದ್ದರು.  
ರಾಜ್ಯ

ಸಂಘದಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಸುಧಾರಣೆ: ಸಿ.ಎಸ್​. ಷಡಾಕ್ಷರಿ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸರ್ಕಾರಿ ನೌಕರರ ಸಂಘದಲ್ 5ನೇ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ರವಿವಾರ ನಗರದ ಪಂ. ಭೀಮಸೇನ್​ ಜೋಷಿ ರಂಗಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು.
ರಾಜ್ಯಾಧ್ಯಕ್ಷ ಸಿ.ಎಸ್​. ಷಡಾಕ್ಷರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರ ಕುಟುಂಬಗಳಿಗೆ ನೆಮ್ಮದಿಯ ಬದುಕು ಒದಗಿಸುವುದು ಸಂದ ಮುಖ್ಯ ಗುರಿಯಾಗಿದೆ. ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ನಿಖರವಾಗಿ ಅನುಷ್ಠಾನವಾಗಬೇಕು. ಸಂದ ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆ 1 ಸಾವಿರಕ್ಕೆ ತಲುಪಿದೆ. ಸಂದಲ್ಲಿ ಐದು ಸಾವಿರಕ್ಕೂ ಅಧಿಕ ಪದಾಧಿಕಾರಿಗಳು ಸಂಟಿತರಾಗಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಎಲ್ಲ ಸದಸ್ಯರಿಗೆ ತಲುಪಬೇಕು. ಸಂದಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಸುಧಾರಣೆ ಅಗತ್ಯ ಎಂದು ಹೇಳಿದರು.
ಸಂವು 2019ರಿಂದ ಬೈಲಾ ಹಾಗೂ ಸಹಕಾರ ಇಲಾಖೆ ನಿಯಮಾವಳಿಗಳ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದು, ಪದಾಧಿಕಾರಿಗಳ ಜವಾಬ್ದಾರಿಗಳನ್ನು ಬೈಲಾದಲ್ಲೇ ಸ್ಪಷ್ಟವಾಗಿ ನಿರ್ಧರಿಸಲಾಗಿದೆ. ಇದೇ ನಮ್ಮ ಸಂವಿಧಾನ, ಇದೇ ಅಂತಿಮ. 2022ರಲ್ಲಿ ಸಂದ ಬೈಲಾಗೆ ತಿದ್ದುಪಡಿ ಮಾಡಿ ಎಲ್ಲ ಜಿಲ್ಲೆಗಳಲ್ಲೂ ಸಂದ ಸಭೆಗಳನ್ನು ಮಾಡುವಂತೆ ತಿದ್ದುಪಡಿ ಮಾಡಲಾಯಿತು. ಸಂವು ಎಲ್ಲ ಜಿಲ್ಲೆ, ತಾಲೂಕು, ಹೋಬಳಿಗಳಿಗೆ ವಿಸ್ತರಿಸುವ ಮುಖ್ಯ ಉದ್ದೇಶ ಹೊಂದಲಾಗಿದೆ. ಸಂವು ಸರಿಯಾಗಿ ದಿಕ್ಕಿನಲ್ಲಿ ಸಾಗಲು ಕೆಲಮೊಮ್ಮೆ ಕಠಿಣ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಸಂವು ಅನುಭವ ಮಂಟಪದಂತೆ ಇರಬೇಕು. ಇಲ್ಲಿ ಜಾತಿ, ಧರ್ಮ, ಪಂಥಕ್ಕೆ ಸ್ಥಾನವಿಲ್ಲ. ಎಲ್ಲರೂ ಮುಕ್ತವಾಗಿ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಷಡಾಕ್ಷರಿ ಹೇಳಿದರು. ಹಿಂದಿನ ಸಭೆ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದಿತ್ತು. ಎನ್​ಪಿಎಸ್​, ವೃಂದ ನೇಮಕಾತಿ, ಓಪಿಎಸ್​ ಜಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿತ್ತು ಎಂದು ಹೇಳಿದರು.
ರವಿ ಗುಂಜಿಕರ, ಬಸವರಾಜ ಬಳ್ಳಾರಿ, ಡಿ.ಎಸ್​. ತಳವಾರ, ಸಿದ್ದಪ್ಪ ಲಿಂಗದಾಳ, ಎಂ. ಎಂ. ನಿಟ್ಟಾಲಿ, ರಾಜು ಕಂಟಿಗೊಣ್ಣವರ, ಮುತ್ತು ಮಲ್ಲಶೆಟ್ಟಿ, ರಾಜ್ಯ ಸಂದ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಇದ್ದರು.
ಅನುಭವ ಮಂಟಪದಂತಿದೆ:
ಈ ಮೊದಲು ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಗಳಿಗೆ 30 ರಿಂದ 50 ಜನ ಮಾತ್ರ ಸೇರುತ್ತಿದ್ದರು. ಬೆಂಗಳೂರಿನಲ್ಲಿ ಸಭೆಗಳು ಜರಗುತ್ತಿದ್ದರಿಂದ ಮಧ್ಯಾಹ್ನ ನಂತರ ಸಭೆಗೆ ಹಾಜರಾಗುತ್ತಿರಲಿಲ್ಲ. ಆದರೆ ಈಗ ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಹೊಸ ಆಯಾಮವನ್ನು ಗದಗ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ನೀಡಿದ್ದಾರೆ. ಅನುಭವ ಮಂಟಪದ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬಸವರಾಜ ಬಳ್ಳಾರಿ ಅವರಲ್ಲಿರು ಸಂಟನೆ ನೈಪುಣ್ಯತೆಯನ್ನು ರಾಜ್ಯ ಸಂದಲ್ಲಿ ಅವಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಸಿ.ಎಸ್​. ಷಡಾಕ್ಷರಿ ಹೇಳಿದರು.
ಕೋಟ್​:
ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂದ ನಿವೇಶನಗಳು ಹಾಗೂ ಕಟ್ಟಡಗಳ ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸಬೇಕು. ಲೀಸ್​ ಅವಧಿ ಮುಗಿದ ಸ್ಥಳಗಳಲ್ಲಿ ಮರುಲೀಸ್​ ಪ್ರಕ್ರಿಯೆ ಕೈಗೊಳ್ಳಬೇಕು. ಅನಗತ್ಯವಾಗಿ ಡ್ರಾ ಮಾಡಲಾದ ಸಂಘದ ಹಣವನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಸಿ.ಎಸ್​. ಷಡಾಕ್ಷರಿ, ರಾಜ್ಯಾಧ್ಯಕ್ಷ. ಸರ್ಕಾರಿ ನೌಕರ ಸಂ