ಗದಗ ತಾಲೂಕು ಬಳಗಾನೂರು ಜಾತ್ರಾ ಮಹೋತ್ಸವದಲ್ಲಿ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು. ಬಿ. ಡಿ. ಕಿಲಬನವರ, ಮೇಲ್ಮಠದ ರುದ್ರಯ್ಯ, ಪದ್ಮಯ್ಯ ರಟ್ಟಿಹಳ್ಳಿಮಠ, ಶರಣು ಹಿರೇಮಠ, ಎಸ್. ಬಿ. ಪಾಟೀಲ, ಶಿವಲಿಂಗಶಾಸ್ತ್ರಿಗಳು, ಎಸ್. ಎಸ್. ಪುರಾಣಿಕಮಠ, ಶಿವು ಗಣಾಚಾರಿ ಇತರರು ಇದ್ದರು.
ಗದಗ: ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವಿರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾಮಹೋತ್ಸವದ ಅಂಗವಾಗಿ ಬಳಗಾನೂರ ಶರಣರ ಮಠದಲ್ಲಿ ಜರುಗುತ್ತಿರುವ ಮಹಾತ್ಮರ ಜೀವನ ದರ್ಶನ ಪ್ರವಚನ ಸಂದರ್ಭದಲ್ಲಿ ಸನ್ಮಾನ, ತುಲಾಭಾರ ಕಾರ್ಯಕ್ರಮ ಜರುಗಿತು.
ಬಳೂಟಗಿಯ ಹಿರೇಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ವೂರಾಗ್ಯ ನಿಧಿ ಅಕ್ಕಮಹಾದೇವಿಯವರ ಜೀವನ ಚರಿತ್ರೆ ಕುರಿತು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಶಾಂತವೀರ ಶರಣರು ಮಾತನಾಡಿ, ಮನುಷ್ಯ ಬದುಕಿನಲ್ಲಿ ನಿಷ್ಠೆಯನ್ನು ಹೊಂದಿದಾಗ ಜೀವನ ಮೌಲ್ಯ ಸಹಜವಾಗಿ ಔನತ್ಯಕ್ಕೆ ಹೋಗುವುದು. ಮನಸ್ಸು ಗಟ್ಟಿಗೊಂಡಾಗ ಅನುಭಾವ ಪಡೆದು ಪರಿರ್ಪೂಣ ವ್ಯಕ್ತಿತ್ವ ಹೊಂದಲು ಸಹಾಯಕ ಆಗುವುದು. ಇಂದ್ರಿಯಗಳ ನಿಗ್ರಹ ದುರಾಚಾರ, ದುಶ್ಚಟಗಳಿಂದ ದುರಹಂಕಾರದಿಂದ ದೂರವಿದ್ದು, ಮನಸ್ಸನ್ನು ಶಿವನಾಮ ಸ್ಮರಣೆ, ಆಧ್ಯಾತ್ಮಿಕ ಚಿಂತನೆ, ಕಾಯಕ ದಾಸೋಹದ ಸೇವೆಯಲ್ಲಿ ತೊಡಗಿಸಿಕೊಂಡಾಗ ಭಯದಿಂದ ದೂರವಾಗಿ ಸಂತೋಷ, ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ ರಾಜ್ಯಪ್ರಶಸ್ತಿ ಪುರಸತ ಡಾ. ಭೀಮರಡ್ಡಿ ದೇವರಡ್ಡಿ ಕಿಲಬನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿ. ಡಿ. ಕಿಲಬನವರ, ಮೇಲ್ಮಠದ ರುದ್ರಯ್ಯ, ಪದ್ಮಯ್ಯ ರಟ್ಟಿಹಳ್ಳಿಮಠ, ಶರಣು ಹಿರೇಮಠ, ಎಸ್. ಬಿ. ಪಾಟೀಲ, ಶಿವಲಿಂಗಶಾಸ್ತ್ರಿಗಳು, ಎಸ್. ಎಸ್. ಪುರಾಣಿಕಮಠ, ಶಿವು ಗಣಾಚಾರಿ ಇತರರು ಇದ್ದರು.