ಗದಗ ನಗರದ ಸರ್ಕಾರಿ ಶಾಲೆಯಲ್ಲಿ ಕದಳಿಶ್ರೀ ವೇದಿಕೆ ವತಿಯಿಂದ ಅಮೃತ ಬೋಜನ ಕಾರ್ಯಕ್ರಮ ಜರುಗಿತು. ಎಚ್.ಎಲ್. ಆಸಂಗಿ, ವಿ. ಎ. ಕುಂಟೋಜಿ, ಸರ್ವಮಂಗಳಾ ಗುಜಮಾಗಡಿ, ಎ. ಎಸ್. ಹಿರೇಮಠ, ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಮುಂತಾದವರು ಇದ್ದರು.
ನಮ್ಮ ಮನಸ್ಸು ಒಂದು ಉದ್ಯಾನವನ. ಉತ್ತಮ ಯೋಚನೆಗಳೇ ಬೀಜಗಳು. ಮನಸಿನಲ್ಲಿ ಹೂವು ಬೆಳೆಯಬೇಕೋ, ಕಳೆ ಬೆಳೆಯಬೇಕೋ ನಿರ್ಧರಿಸಬೇಕಾದವರು ನಾವುಗಳು. ಅದಕ್ಕಾಗಿ ವಿದ್ಯಾಥಿರ್ ಜೀವನದಲ್ಲಿಯೇ ಉತ್ತಮ ಯೋಚನೆಗಳನ್ನು ಹೊಂದಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಚಿಂತಕ ಸುಮಂತ ಕುಮುಚಗಿ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.1 ಹಾಗೂ ಹೆಣ್ಣು ಮಕ್ಕಳ ನಂ.1 ರಲ್ಲಿ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಶ್ರಾವಣ ಮಾಸದ ಅಮೃತ ಭೋಜನ, ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕರು ನಮ್ಮ ಬದುಕಿನ ದಾರಿ ದೀಪ. ಬಾಲ್ಯದಲ್ಲಿ ಬದುಕಿನ ಸುಂದರ ಕಲ್ಪನೆಗಳನ್ನು ಮೂಡಿಸಿ ಅದಕ್ಕೆ ರೆಕ್ಕೆ ಕಟ್ಟಿ ಪ್ರಗತಿಯತ್ತ ಕೊಂಡೊಯ್ಯುವವನೇ ಶಿಕ. ಇಂದು ನಾವೆಲ್ಲ ಸಾಧನೆ ಮಾಡಿದ್ದರ ಹಿಂದೆ ಶಿಕರ ಅಭಯ ಹಸ್ತವಿದೆ. ಮಕ್ಕಳು ಶಿಕರನ್ನು ಗೌರವಿಸಬೇಕು. ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು ಎಂದರು.
ಮಕ್ಕಳಿಗೆ ಸಿಹಿಭೋಜನ ವಿತರಿಸಿ ಮಾತನಾಡಿದ ಚಿಂತಕಿ ರೇಣುಕಾ ಅಮಾತ್ಯ, ನಮ್ಮ ಹೆಸರುಗಳು ಕೇವಲ ಗುರುತಿನ ಚೀಟಿಗಳಲ್ಲ. ಅವು ನಮ್ಮ ಮನೋಭಾವ. ಸಮಾಜದ ದೃಷ್ಠಿಕೋನ ಹಾಗೂ ಮೌಲ್ಯಗಳನ್ನು ರೂಪಿಸುವ ಶಕ್ತಿಯುಳ್ಳವು. ಅದಕ್ಕಾಗಿ ಹೆಸರನ್ನು ಹಸಿರಾಗಿಸಲು ಮಕ್ಕಳು ಸಜ್ಜನರ ಸಂಗ ಮಾಡಬೇಕು. ಶಿಕರಿಗೆ, ತಂದೆ ತಾಯಿಯಂದಿರರಿಗೆ, ಹಿರಿಯರಿಗೆ ಗೌರವ ಕೊಡಬೇಕು ಎಂದರು.
ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿದ ಚಿಂತಕಿ ಶಿವಲೀಲಾ ಅಕ್ಕಿ ಮಾತನಾಡಿ ನಮ್ಮಲ್ಲಿ ಸಮರಸ ಎಂಬುದು ನನಸಾಗಬೇಕು. ಅಂದರೇ ಇಷ್ಟಪ್ರೇಮ ಹಾಗೂ ಗುರುಭಕ್ತಿ ಸದೃಢವಾಗಲೇಬೇಕು. ಆಪ್ತತೆ, ವಿನಮ್ರತೆ ಸದಾ ಮಕ್ಕಳಲ್ಲಿ ಸಧಾ ಇರಬೇಕು. ದುಶ್ಚಟಗಳಿಂದ ದೂರವಿರಬೇಕು. ಮಕ್ಕಳು ಗುರುವಿನ ಆದೇಶಗಳನ್ನು ಪಾಲಿಸುತ್ತ ಏಕಾಗ್ರತೆಯಿಂದ ಶಿಣ ಪಡೆದು ಉತ್ತಮ ಮಕ್ಕಳಾಗಬೇಕು ಎಂದರು.
ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ ಸಮುದಾಯವು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಶಾಲೆಗೆ ಅವಶ್ಯಕವಿರುವ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸಿ ಮಕ್ಕಳಿಗೆ ಸಿಹಿ ಬೋಜನದೊಂದಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳು ಹಾಗೂ ಶಿಕ ಬಳಗಕ್ಕೆ ಸ್ಪೂತಿರ್ ತುಂಬುತ್ತಿದೆ ಎಂದರು.
ಶಾಲಾ ಮಕ್ಕಳಿಗೆ ಸಿಹಿ ವಿತರಿಸಿ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಸಂಜನಾ ಸಾಳುಂಕೆ, ದಿವ್ಯ ದೊಡ್ಡಮನಿ, ಪಲ್ಲವಿ ಪತ್ತಾರ, ವೈಷ್ಣವಿ ಶಿಗ್ಲಿ, ವಿ. ಎಸ್ ಜಕರಡ್ಡಿ ಹಲವರು ಇದ್ದರು.