ನಗರದ ಒಕ್ಕಲಗೇರಿ ಓಣಿಯಲ್ಲಿ ಒಂದು ವಾರಗಳ ಕಾಲ ನಡೆಯುತ್ತಿರುವ ಹರಿಜಾತ್ರೆಗೆ ವಸಂತ ಪಡಗದ ಅಕ್ಕಿ ಪ್ಯಾಕೇಟ್​ಗಳನ್ನು ಭಕ್ತಿಸೇವೆಯಾಗಿ ಸರ್ಮಪಿಸಿದರು. ಪರಶು ವರವಿ, ರಾಜೇಶ ಪಡಗದ, ಅವಿನಾಶ ಗವಳಿ, ರಜತ್​ , ದೇವು ಮೇದಾರ್​, ಬಸು ಪೊಲೀಸಪಾಟೀಲ, ಲಕ್ಷ$್ಮಣ ಮುರಗೋಡ, ಪ್ರದಿಪ ಭೋಸ್ಲೆ, ವಿರುಪಾಕ್ಷಿ ಸಹಿತ ಇತರರು ಇದ್ದರು. 
ರಾಜ್ಯ

ಹರಿ ಜಾತ್ರೋತ್ಸವ ಮಹಾ ಅನ್ನಪ್ರಸಾದಕ್ಕೆ ವಸಂತ ಪಡಗದ ಭಕ್ತಿಸೇವೆ

ಶಿವಾನಂದ ಹಿರೇಮಠ

ವಿಜಯವಾಣಿ ಸುದ್ದಿಜಾಲ ಗದಗ
ಅವಳಿ ನಗರದ ಒಕ್ಕಲಗೇರಿ ಓಣಿಯ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯರ ಐತಿಹಾಸಿಕ ಹರಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಏರ್ಪಡಿಸಲಾಗಿರುವ ಮಹಾ ಅನ್ನಪ್ರಸಾದ ಸೇವೆಗೆ ಬಿಜೆಪಿ ಯುವ ಮುಖಂಡ ವಸಂತ ಪಡಗದ ಭಕ್ತಿಸೇವೆಯಾಗಿ ಒಂದುವಾರಗಳ ಅಕ್ಕಿಯನ್ನು ಸರ್ಮಪಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ 12 ವರ್ಷಗಳಿಗೊಮ್ಮೆ ಜರುಗುವ ಸುಪ್ರಸಿದ್ಧ ಹರಿ ಜಾತ್ರೆಯು ಈ ಬಾರಿ ಬರೋಬ್ಬರಿ 18 ವರ್ಷಗಳ ಸುದೀರ್ ಅಂತರದ ಬಳಿಕ ವಿಜೃಂಭಣೆಯಿಂದ ನಡೆಯುತ್ತಿದೆ. ಆ. 18 ರಿಂದ 28ರ ವರೆಗೆ ಒಟ್ಟು 10 ದಿನಗಳ ಕಾಲ ವೈವಿಧ್ಯಮಯ ಧಾಮಿರ್ಕ, ಸಾಮಾಜಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವವು ಜರುಗುತ್ತಿದ್ದು, ಆಗಮಿಸುವ ಸಾವಿರಾರು ಭಕ್ತರಿಗೆ ಪ್ರತಿದಿನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿರುವ ವಸಂತ ಪಡಗದ, ಶುಕ್ರವಾರದಿಂದ ನಿರಂತರವಾಗಿ ಏಳು ದಿನಗಳ ಕಾಲ ಮಹಾ ಅನ್ನಪ್ರಸಾದಕ್ಕೆ ಅಗತ್ಯವಿರುವ ಸಂರ್ಪೂಣ ಅಕ್ಕಿಯನ್ನು ಭಕ್ತಿಸೇವೆಯಾಗಿ ಒದಗಿಸುತ್ತಿದ್ದಾರೆ. ಇದರ ಮೊದಲ ಹಂತವಾಗಿ ಗುರುವಾರ ಒಂದೇ ದಿನ 50ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು (ಪ್ಯಾಕೆಟ್​) ಜಾತ್ರಾ ಸಮಿತಿಯ ಪ್ರಮುಖರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿನೋದ ಮೊರಬದ, ಪ್ರವಿಣ ಕರಿಬಿಷ್ಟಿ, ಮೋಹನ ವರವಿ, ಸುನೀಲ ಮುದೇನಗುಡಿ, ಸೋಮು ಮುಳಗುಂದ, ಬಸವರಾಜ ತುಪ್ಪದ, ಕುಮಾರ ಮಾರನಬಸರಿ, ಶ್ರೀಕಾಂತ ರಾಮಗಿರಿ, ಪ್ರವಿಣ ಹಂದೇಲಿ, ವಿನಾಯಕ ಹೊರಕೇರಿ, ಮಂಜು ಬೆಳವಡಿ, ಮಂಜು ವರವಿ ಇತರರು ಇದ್ದರು.