ಗದಗ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸತಿಕ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜೀವನ ದರ್ಶನ 61ನೇ ಮಾಲಿಕೆ ಕಾರ್ಯಕ್ರಮದಲ್ಲಿ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಶ್ರೀಗಳು ಮಾತನಾಡಿದರು. ಕೆ. ಐ. ಕುರಗೋಡ, ಎಂ.ಎಂ.ಮಂಗಳೂರ, ವೀರೇಶ ಬಡಿಗೇರ, ಜಿ.ಎಸ್.ಸಜ್ಜನರ, ಸಿದ್ದರಾಮ ಪಟ್ಟೇದ, ವಿ. ಬಿ. ಬಣಗಾರ, ಕೆ. ಪಿ. ಗುಳಗೌಡ್ರ, ಬಿ. ಎಚ್. ಗರಡಿಮನಿ ಇತರರು ಇದ್ದರು.
ಇಂದಿನ ಬದುಕು ಗಳಿಕೆ, ವ್ಯವಹಾರ ಹಾಗೂ ಬಾಹ್ಯ ಸೌಲಭ್ಯಗಳತ್ತ ಹೆಚ್ಚು ಕೇಂದ್ರೀಕೃತ ಆಗುತ್ತಿದೆ. ಮನುಷ್ಯ ತನ್ನ ಜೀವನದ ಉದ್ದೇಶ, ಆತ್ಮಸ್ವರೂಪ ಹಾಗೂ ಬದುಕಿನ ಮೌಲ್ಯ ಅರಿಯುವತ್ತ ಗಮನಹರಿಸಬೇಕು ಎಂದು ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಶ್ರೀಗಳು ಹೇಳಿದರು.
ನಗರದ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸತಿಕ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜೀವನ ದರ್ಶನ 61ನೇ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರೀರವೇ ಜೀವನದ ಸಾಧನವಾಗಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನಿರಂತರವಾಗಿ ದೈಹಿಕ ಹಾಗೂ ಮಾನಸಿಕವಾಗಿ ಚಟುವಟಿಕೆಯಿಂದ ಇರುವುದು ಆರೋಗ್ಯಕರ ಬದುಕಿಗೆ ನೆರವಾಗುತ್ತದೆ. ವಯಸ್ಸು ಹೆಚ್ಚಿದಂತೆ ಜ್ಞಾನ, ಅರಿವು ಮತ್ತು ಆತ್ಮಚಿಂತನೆಯೂ ಹೆಚ್ಚಬೇಕು ಎಂದರು.
ದೇಹದ ರೂಪ, ಸ್ಥಾನಮಾನ ಅಥವಾ ಪದವಿಗಳ ಆಧಾರದ ಮೇಲೆ ವ್ಯಕ್ತಿಯ ಮೌಲ್ಯ ನಿರ್ಧರಿಸುವುದು ಸರಿಯಲ್ಲ. ಬಿದ್ದವರನ್ನು ಕಂಡು ನಗುವ ಬದಲು ಅವರನ್ನು ಎತ್ತಿ ಹಿಡಿಯುವುದು ಹಾಗೂ ಸಾಧನೆ ಮಾಡಿದವರನ್ನು ಕಂಡು ಸಂತೋಷಪಡುವುದು ನಮ್ಮ ಸಂಸತಿ ಆಗಬೇಕು ಎಂದು ಹೇಳಿದರು.
ಮಠ ಮಂದಿರಗಳು ವ್ಯವಹಾರ ಮತ್ತು ಗಳಿಕೆಯ ಕೇಂದ್ರಗಳಾಗದೆ, ಜ್ಞಾನ, ಸೇವೆ, ವೈರಾಗ್ಯ ಹಾಗೂ ಆತ್ಮಚಿಂತನೆಯ ಕೇಂದ್ರಗಳಾಗಬೇಕು. ಮನೆ, ಆಸ್ತಿ, ಐಶ್ವರ್ಯ ಮತ್ತು ಬಾಹ್ಯ ಸೌಲಭ್ಯಗಳ ಹಿಂದೆ ಓಡುವುದಕ್ಕಿಂತ ಕುಟುಂಬದೊಂದಿಗೆ ಪ್ರೀತಿ, ನೆಮ್ಮದಿ ಹಾಗೂ ಮೌಲ್ಯಯುತ ಬದುಕು ನಡೆಸುವುದೇ ಜೀವನದ ನಿಜವಾದ ಅರ್ಥ ಎಂದು ಬಸವರಾಜ ಮಹಾಸ್ವಾಮಿಗಳು ತಿಳಿಸಿದರು.
ಭಾರತೀಯ ಸಂಪ್ರದಾಯದಲ್ಲಿ "ವಾಸ್ತು ಇನ್ ಕಲರ್' ವಿಷಯವಾಗಿ ಉಪನ್ಯಾಸ ನೀಡಿದ ಎಂದು ನಿವೃತ್ತ ಶಿಕ ಪದ್ಮರಾಜ ಕುಲಕಣಿರ್, ವಾಸ್ತು ಎಂದರೆ ಕೇವಲ ಮನೆ ನಿರ್ಮಾಣದ ಅಳತೆ, ದಿಕ್ಕು ಅಥವಾ ದೋಷ ಪರಿಹಾರಕ್ಕೆ ಸೀಮಿತವಿಲ್ಲ. ನೈಸಗಿರ್ಕ ಬೆಳಕು, ಗಾಳಿ, ಸ್ವಚ್ಛತೆ, ಬಣ್ಣಗಳು ಹಾಗೂ ಕುಟುಂಬದ ಶಾಂತಿ ನೆಮ್ಮದಿಯನ್ನು ಒಳಗೊಂಡ ಉತ್ತಮ ಜೀವನಶೈಲಿಯ ಭಾಗವಾಗಿ ವಾಸ್ತುವನ್ನು ಅರ್ಥೈಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತಿಚೆಗೆ ಅಗಲಿದ ಹಿರಿಯ ಗಾಯಕಿ ಡಾ.ಎಸ್.ಜಾನಕಿ ಅವರಿಗೆ ಸ್ವರನಮನ ಕಾರ್ಯಕ್ರಮ ಜರುಗಿತು. ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಎಸ್. ಪರಡ್ಡಿ, ಸಮಿತಿಯ ಅಧ್ಯ ಎ.ಟಿ.ನರೇಗಲ್ಲ, ನಿವೃತ್ತ ಕೃಷಿ ನಿರ್ದೆಶಕ ಕೆ. ಐ. ಕುರಗೋಡ, ನಿವೃತ್ತ ಉಪನ್ಯಾಸಕ ಎಸ್. ಐ. ಯಾಳಗಿ, ಛಾಯಾಗ್ರಾಹಕ ಸಾಹೇಬಗೌಡ ಪಾಟೀಲ, ಸಮಿತಿಯ ಉಪಾಧ್ಯ ಆರ್.ಆರ್.ಕಾಶಪ್ಪನವರ ಇದ್ದರು.