ಗದಗ ಕಾಮಿರ್ಕ ಕಲ್ಯಾಣ ಮಂಡಳಿ ಸಂಗದ ಕಾರ್ಯಾಲಯದಲ್ಲಿ ಸಾಧಕ ಕಾಮಿರ್ಕರನ್ನು ಸನ್ಮಾನಿಸಲಾಯಿತು. ಯುಸೂ್​ ಬೇಪಾರಿ, ಭೀಮಪ್ಪ ಪೂಜಾರ, ಬಾಪೂಗೌಡ ಕರಿಸೋಮನಗೌಡ್ರ, ಸಲೀಂ ಕಾತರಕಿ, ಖಾಜಾಸಾಬ ಗಬ್ಬೂರ ಇತರರು ಇದ್ದರು. 
ರಾಜ್ಯ

ಕಾಮಿರ್ಕರು ದೇಶದ ಅಭಿವೃದ್ದಿಯ ಶಿಲ್ಪಿಗಳು: ಬಸವರಾಜ ಹಡಪದ

ವಿಜಯವಾಣಿ ಸುದ್ದಿಜಾಲ ಗದಗ

ಕಟ್ಟಡ ಕಾಮಿರ್ಕರು ದೇಶದ ಅಭಿವೃದ್ದಿಯ ಶಿಲ್ಪಿಗಳು. ಅವರ ಶ್ರಮದಿಂದಾಗಿ ವಿವಿಧ ಮೂಲ ಸೌಕರ್ಯಗಳು ದೊರೆಯುತ್ತಿವೆ. ಆದರೇ ಕಾಮಿರ್ಕರ ೇತ್ರದಲ್ಲಿ ದುಡಿಯುವ ಕಾಮಿರ್ಕರಿಗೆ ಇನ್ನಷ್ಟು ಭದ್ರತೆ ಬೇಕಾಗಿದೆ ಎಂದು ಹಡಪದ ಅಪ್ಪಣ್ಣ ಸೇವಾ ಸಮಿತಿಯ ಅಧ್ಯ ಬಸವರಾಜ ಹಡಪದ ಹೇಳಿದರು.
ಕಾಮಿರ್ಕ ಕಲ್ಯಾಣ ಸಂದ ಕಾಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ, ಕಾಮಿರ್ಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಟ್ಟಡ ಕಾಮಿರ್ಕರು ಸಂಟಿತರಾಗಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು. ಅರ್ಹ ಕಾಮಿರ್ಕರು ಸಂಬಂಧಪಟ್ಟ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡು ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಟ್ಟಡ ಕಾಮಿರ್ಕರ ಕಲ್ಯಾಣ ಮಂಡಳಿಗಳ ಉದ್ದೇಶವೇ ಕಾಮಿರ್ಕರ ಸುರತೆ, ಆರೋಗ್ಯ ಮತ್ತು ಕಲ್ಯಾಣವನ್ನು ಉತ್ತೇಜಿಸುವುದಾಗಿದೆ ಎಂದರು.
ಕಾಮಿರ್ಕ ಕಲ್ಯಾಣ ಸಂಸ್ಥೆಯ ಅಧ್ಯ ಇಾರ್ನ್​ ಡಂಬಳ ಮಾತನಾಡಿ, ಕಾಮಿರ್ಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕಾಮಿರ್ಕ ಕುಟುಂಬದವರ ಮಕ್ಕಳು ಯಾವುದೇ ಕಾರಣಕ್ಕೂ ಶಿಣದಿಂದ ವಂಚಿತರಾಗಬಾರದು. ಕಾಮಿರ್ಕರ ಅಭಿವೃದ್ದಿಯೇ ಸಮಾಜದ ನಿಜವಾದ ಅಭಿವೃದ್ದಿ. ಕಾಮಿರ್ಕರಿಗೆ ಸುರತ ಕೆಲಸದ ವಾತಾವರಣ ಇರಬೇಕು. ಅವರಿಗೆ ಅಗತ್ಯತೆಯ ಸುರತ ಸಾಧನಗಳನ್ನು ಒದಗಿಸಬೇಕು ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿಗಳನ್ನು ನೀಡಬೇಕು. ಕಟ್ಟದ ಕಾಮಿರ್ಕರು ಶ್ರಮಜೀವಿಗಳು. ಸುರತೆ, ಆರೋಗ್ಯ, ಶಿಣ ಜೊತೆಗೆ ಸಾಮಾಜಿಕ ಭದ್ರತೆಯೊಂದಿಗೆ ಗೌರವಯುತ ಬದುಕಿಗೆ ಅವಕಾಶಗಳನ್ನು ಕಲ್ಪಿಸುವುದು ಸಮುದಾಯದ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕ ಕಾಮಿರ್ಕರನ್ನು ಸನ್ಮಾನಿಸಲಾಯಿತು. ಮೋಹನ ಚಂದಪ್ಪನವರ, ಚಾಂದಸಾಬ ಅಬ್ಬಿಗೇರಿ, ಇರ್ಷಾದ್​ ಮಾನ್ವಿ, ನಿಂಗಪ್ಪ ಕಟ್ಟಿಮನಿ ಹಲವರು ಇದ್ದರು.