ಗದಗ ತಾಲೂಕಿನ ಅಂತೂರ ಗ್ರಾಮದಲ್ಲಿಯ ಸೋಮವಾರ ವಿಬಿಜಿ ರಾಮ್​ಜಿ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಚಾಲನೆ ನೀಡಲಾಯಿತು. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಮಾರ ಪೂಜಾರ ಹಲವರು ಇದ್ದರು. 
ರಾಜ್ಯ

ಜಲ ಮೂಲಗಳ ಪುನಶ್ಚೇತನಕ್ಕೆ ವಿಬಿಜಿ ರಾಮಜಿ ಬಲ

ಶಿವಾನಂದ ಹಿರೇಮಠ

ಗದಗ: ಕೂಲಿ ಕಾಮಿರ್ಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲ ಸಂರಕ್ಷಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಜಲ ಮೂಲಗಳ ಸಂರಕ್ಷಣೆ ಜತೆಗೆ ದುಡಿಮೆಗೆ ವಿಬಿಜಿ ರಾಮ್​ ಜಿ ಯೋಜನೆ ಪೂರಕವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕರು ಕುಮಾರ ಪೂಜಾರ ಹೇಳಿದರು.

ಗದಗ ತಾಲೂಕಿನ ಅಂತೂರ ಗ್ರಾಮದಲ್ಲಿಯ ಸೋಮವಾರ ವಿಬಿಜಿ ರಾಮ್​ಜಿ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಬಿಜಿ ರಾಮ್​ಜಿ ಯೋಜನೆ ಅಡಿ ಕೂಲಿ ಮೊತ್ತ ರೂ. 382 ರೂ.ಗೆ ಹೆಚ್ಚಳವಾಗಿದೆ. ಎನ್​ಎಂಎಸ್​ಎಸ್​ ತಂತ್ರಾಂಶದ ಮೂಲಕ ಎರಡು ಬಾರಿ ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ ಮಾಡಲಾಗುತ್ತದೆ. ಕೂಲಿ ಪಾವತಿಯಲ್ಲಿ ಗಂಡು- ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ ವೇತನ ನೀಡಲಾಗುತ್ತದೆ. ಗ್ರಾಮಸ್ಥರು ಇದರ ಸದಪಯೋಗ ಪಡೆದುಕೊಳ್ಳಬೇಕು ಎಂದರು.
ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಮಾತನಾಡಿ, ವಿಬಿಜಿ ರಾಮ್​ಜಿ ಯೋಜನೆ ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾಮಿರ್ಕರಿಗೆ ಸ್ಥಳಿಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಎನ್​ಎಂಎಂಎಸ್​ ತಂತ್ರಾಂಶದಲ್ಲಿ ಪ್ರತಿದಿನ ಎರಡು ಬಾರಿ ಹಾಜರಾತಿ ಅಳವಡಿಸಬೇಕು ಎಂದು ಹೇಳಿದರು.
ಅಂತೂರ- ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಭೂಮಿ ಪೂಜೆ ನೆರವೇರಿಸಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಕಾರ್ಯದಶಿರ್ ಶಾಂತಯ್ಯ ಪ್ರಭಯ್ಯನಮಠ, ಪ್ರದಿಪ ನರೇಗಲ್ಲ, ಗ್ರಾಪಂ ಸಿಬ್ಬಂದಿ ಮಹಾತೇಶ ಮಜ್ಜಿಗುಡ್ಡ, ಅಶೋಕ ಜಿನಗಿ, ಬಿಎಫ್​ಟಿ ದಾವಲಸಾಬ್​ ಚಲ್ಲಮರದ ಇತರರು ಇದ್ದರು.