ಪಂಚಮಸಾಲಿ ವಿದ್ಯಾಥಿರ್ ವಿದ್ಯಾಥಿರ್ನಿಯರಿಗೆ ಪ್ರತಿಭಾ ಪುರಸ್ಕಾರ ಕುರಿತು ಅಯ್ಯಪ್ಪ ಅಂಗಡಿ ಸುದ್ದಿಗೋಷ್ಟಿ ನಡೆಸಿದರು. ರಮೇಶ ರೋಣದ, ಚಂದ್ರು ಪಾಟೀಲ, ಬಸವರಾಜ ಗಡ್ಡೆಪ್ಪನವರ, ಕೆ. ವಿ ಗದುಗಿನ, ರವಿ ಮಾನೆದ, ಕುಮಾರ ಗದುಗಿನ, ಸಂಗಮೇಶ ಗೊಂದಿ, ಮಂಜುನಾಥ ಬಾಣದ ಉಪಸ್ಥಿತರಿದ್ದರು.
ಜಿಲ್ಲಾ ಪಂಚಮಸಾಲಿ ಯುವ ಟಕದಿಂದ ಎಸೆಸೆಲ್ಸಿ, ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಶೇ. 85 ಕ್ಕಿಂತ ಹೆಚ್ಚಿನ ಅಂಕ ಪಡೆದ ಪಂಚಮಸಾಲಿ ಸಮುದಾಯದ ಪ್ರತಿಭಾವಂತ ವಿದ್ಯಾಥಿರ್, ವಿದ್ಯಾಥಿರ್ನಿಯರಿಗೆ ಹಾಗೂ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜು. 12 ರಂದು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಸಮಾಜದ ಯುವ ಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಸವಜಯ ಮೃತ್ಯುಂಜಯ ಶ್ರೀಗಳು, ಶಾಸಕ ಸಿ. ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು. ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಮುರಗೇಶ ರುದ್ರಪ್ಪ ನಿರಾಣಿ, ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ, ಮಾಜಿ ಸಚಿವ ಕಳಕಪ್ಪ ಬಂಡಿ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಕಲಗೌಡ ಪಾಟೀಲ, ಶಿವಲೀಲಾ ವಿನಯ ಕುಲಕಣಿರ್ ಉಪಸ್ಥಿತಿ ಇರುವರು ಎಂದು ತಿಳಿಸಿದರು.
ಈ ವೇಳೆ ರಮೇಶ ರೋಣದ, ಚಂದ್ರು ಪಾಟೀಲ, ಬಸವರಾಜ ಗಡ್ಡೆಪ್ಪನವರ, ಕೆ. ವಿ ಗದುಗಿನ, ರವಿ ಮಾನೆದ, ಕುಮಾರ ಗದುಗಿನ, ಸಂಗಮೇಶ ಗೊಂದಿ, ಮಂಜುನಾಥ ಬಾಣದ ಉಪಸ್ಥಿತರಿದ್ದರು.